LatestMain PostNational

ಕುರ್ಚಿ ತರಲು ವಿಳಂಬ – ಕಾರ್ಯಕರ್ತರಿಗೆ ಕಲ್ಲು ಎಸೆದ ತಮಿಳುನಾಡಿನ ಸಚಿವ

ಚೆನ್ನೈ: ಕುರ್ಚಿ ತರಲು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ಪಕ್ಷದ ಕಾರ್ಯಕರ್ತರಿಗೆ ತಮಿಳುನಾಡಿನ ಡಿಎಂಕೆ ಪಕ್ಷದ (DMK party) ನಾಯಕ ಹಾಗೂ ರಾಜ್ಯ ಸಚಿವ ಎಸ್.ಎಂ ನಾಸರ್ (SM Nasar) ಅವರು ಕಲ್ಲು ಎಸೆದಿದ್ದಾರೆ.

ತಮಿಳುನಾಡಿನ (Tamil Nadu) ತಿರುವಳ್ಳೂರು (Tiruvallur) ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೀಡಿಯೋದಲ್ಲಿ ಏನಿದೆ?: ಪಕ್ಷದ ಕಾರ್ಯಕರ್ತರು ಕುರ್ಚಿಗಳನ್ನು ತರಲು ತುಂಬಾ ಸಮಯ ತೆಗೆದುಕೊಂಡಿದ್ದಕ್ಕೆ ಸಚಿವ ಎಸ್.ಎಂ ನಾಸರ್ ಸಿಟ್ಟಿಗೆದ್ದಿದ್ದಾರೆ. ಅದಾದ ಬಳಿಕ ಸಚಿವ ನಾಸರ್ ಅವರು, ಕಲ್ಲನ್ನು ಎತ್ತಿ ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಎಸೆದಿದ್ದಾರೆ. ಈ ವೇಳೆ ನಾಸರ್ ಹಿಂದೆ ನಿಂತಿರುವ ಕೆಲವು ಜನರು ಸಹ ನಗುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ.

ಈ ಬಗ್ಗೆ ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಟ್ವೀಟ್ ಮಾಡಿ, ಪಕ್ಷದ ಕಾರ್ಯಕರ್ತರಿಗೆ ಅಗೌರವ ತೋರಿದ್ದಾರೆ. ದೇಶದ ಇತಿಹಾಸದಲ್ಲಿ ಸಚಿವರಾದವರು ಜನರ ಮೇಲೆ ಕಲ್ಲು ಎಸೆಯುವುದನ್ನು ಯಾರಾದರೂ ನೋಡಿದ್ದೀರಾ? ಇದನ್ನು ಡಿಎಂಕೆ ಸರ್ಕಾರದ ಸಚಿವರು ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪತ್ರಕರ್ತರು ವೃತ್ತಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು – ಆರ್. ಅಶೋಕ್

ತಮಿಳುನಾಡಿನ ಸಚಿವರು ಹತಾಶೆಯಿಂದ ಜನರ ಮೇಲೆ ಕಲ್ಲು ಎಸೆಯುತ್ತಿದ್ದಾರೆ. ಮರ್ಯಾದೆ ಇಲ್ಲ. ಜನರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಚಿರತೆ ದಾಳಿ – ಕುಟುಂಬಗಳನ್ನು ಭೇಟಿಯಾಗಿ ಗ್ರಾಮಸ್ಥರ ಅಹವಾಲು ಆಲಿಸಿದ ಎಸ್‌ಟಿಎಸ್‌

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button