ನವದೆಹಲಿ: ದೆಹಲಿಯ ರಾಜ್‍ಪಥ್‍ನಲ್ಲಿ ನಡೆದ 69ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ಈ ಬಾರಿ ಹಲವು ವಿಶೇಷಗಳಿಂದ ಕೂಡಿತ್ತು. ಪ್ರಮುಖವಾಗಿ ಮೊದಲ ಬಾರಿಗೆ ಆಸಿಯಾನ್ ರಾಷ್ಟ್ರಗಳ ನಾಯಕರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಾರಂಭದ ಪೆರೇಡ್ ನಲ್ಲಿ ದೇಶದ ಸಂಸ್ಕೃತಿ ಹಾಗೂ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು.
ಈ ಬಾರಿಯ ಪರೇಡ್ ನಲ್ಲಿ ಪ್ರಮುಖವಾಗಿ ಇದೇ ಮೊದಲ ಬಾರಿಗೆ ಬಿಎಎಸ್‍ಎಫ್ ನ ಮಹಿಳಾ ತಂಡ ರೋಮಾಂಚನಕಾರಿ ಬೈಕ್ ಸ್ಟಂಟ್ ಪ್ರದರ್ಶನವನ್ನು ನೀಡಿತು. ಸಮಾರಂಭದಲ್ಲಿ ಭಾವಹಿಸದ್ದ ಜನರ ಹರ್ಷೋದ್ಗಾರ ಮಹಿಳಾ ಯೋಧರ ಸಾಹಸ ಪ್ರದರ್ಶನಕ್ಕೆ ಮತ್ತಷ್ಟು ಶಕ್ತಿ ನೀಡಿತು.
Advertisement
Advertisement
ರಾಯಲ್ ಎನ್‍ಫೀಲ್ಡ್ 350 ಸಿಸಿ ಬೈಕ್ ಏರಿ ಬಂದ `ಸೀಮಾ ಭವಾನಿ’ ಹೆಸರಿನ 113 ಮಂದಿ ಮಹಿಳಾ ಬಿಎಸ್‍ಎಫ್ ತಂಡ ತಮ್ಮ ಕೌಶಲ್ಯ ಹಾಗೂ ಧೈರ್ಯದ ಕೆಚ್ಚೆದೆಯ ಪ್ರದರ್ಶನ ನೀಡಿತು.
Advertisement
ಸಬ್ ಇನ್ಸ್ ಪೆಕ್ಟರ್ ಸ್ಟ್ಯಾನ್ಜಿನ್ ನಿರೊಯಾಂಗ್ (28) ಮುನ್ನಡೆಯಲ್ಲಿ ಪ್ರದರ್ಶನ ನೀಡಿದ ತಂಡ ತಾವು ಯಾವುದೇ ಪುರುಷರಿಗೆ ಕಮ್ಮಿ ಇಲ್ಲ ಎಂಬುವುದನ್ನು ಸಾಬೀತು ಪಡಿಸಿತು. ಬಿಎಸ್‍ಎಫ್ ನ ವಿವಿಧ ರ‍್ಯಾಂಕ್ ಗಳಿಂದ ಆಯ್ಕೆ ಮಾಡಲಾಗಿದ್ದ 25 ರಿಂದ 30 ವರ್ಷದೊಳಗಿನ 113 ಮಹಿಳೆಯರಿಗೆ ತರಬೇತಿಯನ್ನು ನೀಡಲಾಗಿತ್ತು. ಮಹಿಳಾ ಯೋಧರ ಪ್ರದರ್ಶನ ಕಂಡ ಅತಿಥಿಗಳು ಅವರ ಧೈರ್ಯವನ್ನು ಪ್ರಶಂಸಿದರು.
Advertisement
ಮೊದಲ ಬಾರಿಗೆ ಸೀಮಾ ಭವಾನಿ ತಂಡಕ್ಕೆ ಆಯ್ಕೆ ಮಾಡಲಾಗಿದ್ದ ಮಹಿಳಾ ಯೋಧರಿಗೆ ಬಿಎಸ್‍ಎಫ್ ಗೆ ಆಯ್ಕೆಯಾದ ಸಮಯದಲ್ಲಿ ಬೈಕ್ ಸವಾರಿಯೇ ತಿಳಿದಿರಲಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ. ನಂತರ ಅವರಿಗೆ ಕಠಿಣ ತರಬೇತಿ ನೀಡಲಾಗಿತ್ತು. ತಂಡದಲ್ಲಿ ಪಶ್ಚಿಮ ಬಂಗಾಳ, ಪಂಜಾಬ್, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ, ಕೇರಳ, ದೆಹಲಿ, ಮೇಘಾಲಯ ಮತ್ತು ಹಿಮಾಲಯ ಪ್ರದೇಶ ರಾಜ್ಯಗಳಿಗೆ ಸೇರಿದ್ದ ಮಹಿಳಾ ಸೈನಿಕರು ಸ್ಥಾನ ಪಡೆದಿದ್ದರು. ಪ್ರತಿ ದಿನ ತರಬೇತಿ ನೀಡಲಾಗಿದ್ದು ಈ ವೇಳೆ ಹಲವು ಮಂದಿ ಬಿದ್ದು ಗಾಯಗೊಂಡಿದ್ದರು. ಆದರೆ ಇವೆಲ್ಲವನ್ನೂ ಬದಿಗಿಟ್ಟು ಗಣರಾಜ್ಯೋತ್ಸವ ದಿನ ಅತ್ಯುತ್ತಮ ಪ್ರದರ್ಶನ ನೀಡಿದರು.
https://www.youtube.com/watch?v=lurFLE-A1K0