ಟೆಲ್ ಅವೀವ್: ಇಸ್ರೇಲ್-ಹಮಾಸ್ ನಡುವಿನ ಯುದ್ಧ (Israel Hamas War) ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಎರಡೂ ಸೇನೆಗಳೂ ತಂತ್ರ-ಪ್ರತಿತಂತ್ರ ನಡೆಸುತ್ತಲೇ ಇವೆ. ಆದರೀಗ ಹಮಾಸ್ ಉಗ್ರರು ಗಾಜಾಪಟ್ಟಿಯಲ್ಲಿ ಬಳಸಿದ ಸುರಂಗಗಳನ್ನ ಕೃತಕ ಪ್ರವಾಹ (Flood Tunnels) ಸೃಷ್ಟಿಸುವ ಮೂಲಕ ಧ್ವಂಸಗೊಳಿಸಲು ಇಸ್ರೇಲ್ ಸೇನೆ (Israel Army) ಪ್ಲ್ಯಾನ್ ಮಾಡಿದೆ ಎಂದು ವರದಿಯಾಗಿದೆ.
ಹಮಾಸ್ ಉಗ್ರರ ವಿರುದ್ಧ ಸಮರ ಸಾರಿಸುವ ಇಸ್ರೇಲ್ ಸುರಂಗಗಳಲ್ಲಿ ಪ್ರವಾಸ ಸೃಷ್ಟಿ ಉಗ್ರರನ್ನು ಮಟ್ಟಹಾಕಲು ಕೆಲ ದಿನಗಳ ಹಿಂದೆಯೇ ಪ್ಲ್ಯಾನ್ ಮಾಡಿದಂತಿದೆ. ಏಕೆಂದರೆ ಕಳೆದ ನವೆಂಬರ್ ಮಧ್ಯದಲ್ಲಿಯೇ ಇಸ್ರೇಲ್ ಸೇನೆಯು ಅಲ್-ಶಾತಿ ನಿರಾಶ್ರಿತರ ಶಿಬಿರದ ಉತ್ತರಕ್ಕೆ ಕನಿಷ್ಠ ಒಂದು ಮೈಲಿಯಷ್ಟು ದೂರಕ್ಕೆ 5 ಪಂಪ್‌ಗಳನ್ನ ನಿರ್ಮಿಸಿದೆ. ಈ ಪಂಪ್‌ಗಳ ಮೂಲಕ ಗಂಟೆಗೆ ಸಾವಿರಾರು ಘನ ಮೀಟರ್‌ಗಳಷ್ಟು ನೀರನ್ನು ಚಿಮ್ಮಿಸಬಹುದು. ಕನಿಷ್ಠ ಒಂದೇ ವಾರದಲ್ಲಿ ಸುರಂಗಗಳಲ್ಲಿ ನೀರು ತುಂಬಿಕೊಂಡು ಪ್ರವಾಹ ಸೃಷ್ಟಿಬಹುದು ಅನ್ನೋದು ಇಸ್ರೇಲ್‌ನ ಮಾಸ್ಟರ್ ಪ್ಲ್ಯಾನ್.
ಮಾಹಿತಿ ಪ್ರಕಾರ, ಹಮಾಸ್ ಸುರಕ್ಷಿತ ಸ್ಥಳಗಳಾಗಿದ್ದ ಸುರಂಗಗಳಲ್ಲಿ ಒತ್ತೆಯಾಳುಗಳನ್ನ ಬಂಧಿಸಿ ಮರೆಮಾಚಿತ್ತು. ಅದಕ್ಕಾಗಿ ಇಸ್ರೇಲ್ ಸುರಂಗಗಳಲ್ಲಿ ಪ್ರವಾಹ ಸೃಷ್ಟಿಸಲು ಯೋಜನೆ ರೂಪಿಸಿದೆ. ಆದ್ರೆ ಹಮಾಸ್-ಇಸ್ರೇಲ್ ನಡುವೆ ಕದನ ವಿರಾಮ ಏರ್ಪಟ್ಟಿದ್ದು, ಪರಸ್ಪರ ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಂದವಾಗಿದೆ. ಇಂತಹ ಸಂದರ್ಭದಲ್ಲಿ ಇಸ್ರೇಲ್ ಪ್ರವಾಹ ಸೃಷ್ಟಿಸುವ ಕೆಲಸಕ್ಕೆ ಮುಂದಾಗುತ್ತದೆಯೇ ಅನ್ನೋದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಚಂದ್ರನ ಕಕ್ಷೆಯಿಂದ ಭೂಮಿ ಕಕ್ಷೆಗೆ ಮತ್ತೆ ಮರಳಿದ ಚಂದ್ರಯಾನ-3 ಪ್ರೊಪಲ್ಷನ್ ಮಾಡ್ಯೂಲ್
ಯುಸ್ ಅಧಿಕಾರಿಯೊಬ್ಬರನ್ನು ಈ ಬಗ್ಗೆ ಕೇಳಿದಾಗ ಇಸ್ರೇಲ್ ಸುರಂಗಗಳನ್ನ ನಿಷ್ಕ್ರಿಯಗೊಳಿಸುವುದು ಸರಿಯಾದ ನಿರ್ಧಾರ. ಅದಕ್ಕಾಗಿ ಇಸ್ರೇಲ್ ಹಲವಾರು ಮಾರ್ಗಗಳನ್ನ ಅನ್ವೇಷಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Lokayukta Raid: ತಿಮ್ಮರಾಜಪ್ಪ ಒಡೆತನದ ಬಂಗಲೆಗಳನ್ನು ನೋಡಿ ಅಧಿಕಾರಿಗಳೇ ದಂಗಾದ್ರು!
ಇಸ್ರೇಲ್ ರಕ್ಷಣಾ ಪಡೆ ಈವರೆಗೆ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ವಿವಿಧ ಮಿಲಿಟರಿ ಮತ್ತು ಸಾಂತ್ರಿಕ ಸಾಧನಗಳನ್ನು ಬಳಸಿಕೊಂಡು ಸಾಮರ್ಥ್ಯಗಳನ್ನ ಬಳಸಿಕೊಂಡೇ ಸುರಂಗಗಳನ್ನು ಕೆಡವುವ ಬಗ್ಗೆ ಕಾರ್ಯನಿರ್ವಹಿಸುತ್ತಿದೆ ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಆರೋಪ ಸತ್ಯಕ್ಕೆ ದೂರವಾದದ್ದು: ಚನ್ನರಾಜ ಹಟ್ಟಿಹೊಳಿ