ಚಾಮರಾಜನಗರ: ಇವಿಎಂ ದ್ವಂಸ ಪ್ರಕರಣ ಸಂಬಂಧ ಚಾಮರಾಜನಗರದ ಇಂಡಿಗನತ್ತ (Indiganatta, Chamarajanagar) ಗ್ರಾಮದಲ್ಲಿ ನಡೆಯುತ್ತಿರುವ ಮರುಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
Advertisement
ಚಾಮರಾಜನಗರ ಲೋಕಸಭಾ ಕ್ಷೇತ್ರದ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಇಂದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಿಗದಿಪಡಿಸಲಾಗಿದೆ. ಇಂಡಿಗನತ್ತ ಹಾಗೂ ಮೆಂದಾರೆ ಎರಡೂ ಗ್ರಾಮಗಳು ಸೇರಿ 528 ಮತದಾರರಿಗೆ ಮತಗಟ್ಟೆ 146 ರಲ್ಲಿ ಮರು ಮತದಾನ ನಡೆಯುತ್ತಿದೆ. ಸದ್ಯ 528 ಮತದಾರರ ಕೇವಲ ಪೈಕಿ 54 ಮತಗಳು ಮಾತ್ರ ಚಲಾವಣೆಯಾಗಿವೆ. ಮೆಂದಾರೆ ಹಾಡಿಯ 54 ಜನರಿಂದ ಮತದಾನವಾಗಿದೆ.
Advertisement
Advertisement
ಮೆಂದಾರೆ ಗ್ರಾಮಸ್ಥರನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ಕರೆತಂದು ಮತದಾನ ಮಾಡಿಸುತ್ತಿದ್ದಾರೆ. ಆದರೆ ಇಂಡಿಗನತ್ತ ಗ್ರಾಮಸ್ಥರು ಮತದಾನದಿಂದ ದೂರ ಉಳಿದಿದ್ದಾರೆ. ಈಗಾಗಲೇ ಇವಿಎಂ ಧ್ವಂಸ ಪ್ರಕರಣ ಸಂಬಂಧ 33 ಮಂದಿಯನ್ನು ಬಂಧಿಸಲಾಗಿದೆ. ಈ ಹಿನ್ನೆಲೆ ಇಂಡಿಗನತ್ತ ಗ್ರಾಮ ಖಾಲಿ ಹೊಡೆಯುತ್ತಿದೆ. ಬಂಧನದ ಭೀತಿಯಿಂದ ಗ್ರಾಮಸ್ಥರು ತಲೆ ಕರೆಸಿಕೊಂಡಿದ್ದಾರೆ.
Advertisement
ಮತಗಟ್ಟೆ ಸುತ್ತಮುತ್ತ 100 ವ್ಯಾಪ್ತಿಯಲ್ಲಿ 144ನೇ ಸೆಕ್ಷನ್ ಅನ್ವಯ ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇದಾಜ್ಞೆ ಜಾರಿಗೊಳಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಲ್ಲಿ ಗ್ರಾಮಸ್ಥರಿಂದ ದಾಂಧಲೆ, ಇವಿಎಂ ಧ್ವಂಸ