ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Murder Case)) ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಾಲ್ಕನೇ ದಿನದ ಪ್ರದೋಷ್ ಮಾಫಿ ಸಾಕ್ಷ್ಯ ಹೇಳಿಕೆ ದಾಖಲಾಗಲಿದೆ. ಇಂದು ಬಹುತೇಕ ಮಾಫಿ ಸಾಕ್ಷ್ಯ ಹೇಳಿಕೆ ಮುಕ್ತಾಯವಾಗುವ ಸಾಧ್ಯತೆ ಇದೆ.
ಇದೇ ವೇಳೆ ಕ್ರಾಸ್ ಎಗ್ಸಾಮಿನೇಷನ್ಗೆ ದಿನಾಂಕ ನಿಗದಿಯಾಗಲಿದೆ. ನಿಗದಿತ ದಿನಾಂಕದಂದು ಆರೋಪಿಗಳ ಪರ ವಕೀಲರು ಪ್ರದೋಷ್ನ ಕ್ರಾಸ್ ಎಗ್ಸಾಮಿನೇಷನ್ ನಡೆಸಲಿದ್ದಾರೆ.
ಎವಿಡೆನ್ಸ್ ಆಕ್ಟ್ಗೆ ಸಂಬಂಧಿಸಿದಂತೆ ಇಂದು ಆದೇಶ ಪ್ರಕಟವಾಗಲಿದೆ. ಎವಿಡೆನ್ಸ್ ಆಕ್ಟ್ನ 137, 138ರ ಅಡಿಯಲ್ಲಿ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.
ಮಾಫಿ ಸಾಕ್ಷ್ಯ ಹೇಳಿಕೆ ವೇಳೆ ಮರೆತಿದ್ದ ಮಾಹಿತಿಯನ್ನು ಪ್ರದೋಷ್ನಿಂದ ಮಾರನೇ ದಿನ ಮತ್ತೆ ಹೇಳಿಕೆ ದಾಖಲಿಸಲಾಗಿತ್ತು. ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.
ಪ್ರದೋಷ್ಗೆ ಯಾರೋ ಹೇಳಿಕೊಟ್ಟು ಈ ಹೇಳಿಕೆಗಳನ್ನು ಮತ್ತೆ ಮತ್ತೆ ದಾಖಲಿಸುತ್ತಿದ್ದಾರೆ. ಈ ರೀತಿಯ ಹೇಳಿಕೆಯನ್ನು ಕೋರ್ಟ್ ರೆಕಾರ್ಡ್ ಮಾಡಬಾರದು ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು. ಇದನ್ನೂ ಓದಿ: ರಾಯಚೂರು | ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ
ಎವಿಡೆನ್ಸ್ ಆಕ್ಟ್ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಇಂದು 59ನೇ ಸೆಷನ್ಸ್ ಕೋರ್ಟ್ ಆದೇಶ ಪ್ರಕಟಿಸಲಿದೆ.ಇದನ್ನೂ ಓದಿ: ಕೆಆರ್ಎಸ್ ಬಳಿ ನಡೆಯುವ ಕಾವೇರಿ ಆರತಿ ಮುಂದೂಡಿಕೆ

