ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಹೈದರಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ (FSL Report) ಮೂರು ದಿನದಲ್ಲಿ ಎಸ್‌ಐಟಿ ಪೊಲೀಸರ ಕೈ ಸೇರಲಿದೆ.
ಈಗಾಗಲೇ 70% ವರದಿ ಪೊಲೀಸರ ಕೈಸೇರಿದ್ದು, ಉಳಿದ 30% ವರದಿ ಎಫ್‌ಎಸ್‌ಎಲ್‌ನಿಂದ ಬರಬೇಕಾಗಿತ್ತು. ಬರಬೇಕಾದ ಅಷ್ಟೂ ವರದಿಗಳು ಎಲೆಕ್ಟ್ರಾನಿಕ್ ಸಾಧನಗಳಿಗೆ ಸಂಬಂಧಿಸಿದ ವರದಿಯಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ವ್ಹೀಲಿಂಗ್ ಪುಂಡರ ವಿರುದ್ಧ ಪೊಲೀಸರ ಸೈಲೆಂಟ್ ಸಮರ
Advertisement
Advertisement
ಆರೋಪಿಗಳ ಐಪೋನ್ ಡೇಟಾ ರಿಟ್ರೀವ್ ಮತ್ತು ಡಿಲೀಟ್ ಮಾಡಿದ ದೃಶ್ಯಗಳ ರಿಟ್ರೀವ್ ಮಾಡಲು ಹೈದರಾಬಾದ್‌ಗೆ ಕಳುಹಿಸಲಾಗಿತ್ತು.
Advertisement
ವರದಿ ಕೈಸೇರುತ್ತಿದ್ದಂತೆ ತನಿಖೆ ಮತ್ತಷ್ಟು ಚುರಕಾಗಲಿದೆ. ರಿಟ್ರೀವ್ ವಿಡಿಯೋಗಳನ್ನು ಪರಿಶೀಲನೆಗಾಗಿ ಮತ್ತೆ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗುತ್ತದೆ. ತನಿಖಾ ಕಾಲದಲ್ಲಿ ಪತ್ತೆಯಾದ ವಿಡಿಯೋಗಳಿಗೂ ಹಾಗೂ ರಿಟ್ರೀವ್ ವಿಡಿಯೋಗಳಿಗೆ ಹೋಲಿಕೆ ಮಾಡಿ ರಿಪೋರ್ಟ್ ಕೊಡಬೇಕಾಗುತ್ತದೆ. ಹೀಗಾಗಿ ಇಡೀ ಪ್ರಕರಣ ತನಿಖೆ ಹೈದರಾಬಾದ್ ಎಫ್‌ಎಸ್‌ಎಲ್ ವರದಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ಮಹಿಳೆ ನೇಣಿಗೆ ಶರಣು – ವರದಕ್ಷಿಣೆ ಕಿರುಕುಳ ಆರೋಪ
Advertisement
ಒಂದು ವೇಳೆ ಎಫ್‌ಎಸ್‌ಎಲ್ ವರದಿಯಲ್ಲಿ ಡಿಲೀಟ್ ಮಾಡಿದ ದೃಶ್ಯ ಸಿಕ್ಕಿದರೆ ದರ್ಶನ್ ಗ್ಯಾಂಗ್‌ಗೆ (Darshan Gang) ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆಯಿದೆ.