ಬೆಂಗಳೂರು: ಸುಮಾರು ಒಂಬತ್ತು ತಿಂಗಳ ನಂತರ ಶೂಟಿಂಗ್‌ಗಾಗಿ ದರ್ಶನ್ (Darshan) ವಿಮಾನ ಹತ್ತಿದ್ದಾರೆ.
ಸೋಮವಾರ ಬೆಂಗಳೂರಿನಿಂದ (Bengaluru) ದರ್ಶನ್ ವಿಮಾನದ ಮೂಲಕ ರಾಜಸ್ಥಾನಕ್ಕೆ (Rajasthan) ತೆರಳಿದ್ದಾರೆ. ಮಂಗಳವಾರದಿಂದ ಜೈಪುರದಲ್ಲಿ ಡೆವಿಲ್ (Devil) ಸಿನಿಮಾದ ಶೂಟಿಂಗ್ ನಡೆಯಲಿದೆ. ಇದರಲ್ಲಿ ಭಾಗಿಯಾಗಲು ಇಂದು ವಿಮಾನ ಪ್ರಯಾಣ ಮಾಡಿದರು. ಇದನ್ನೂ ಓದಿ: ಕೇರಳದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ – ದಾಸನಿಗೆ ಸಾಥ್ ನೀಡಿದ ಕೊಲೆ ಆರೋಪಿ ಪ್ರಜ್ವಲ್ ರೈ
ಈ ಮಧ್ಯೆ ಮಾರ್ಚ್ 27ರಂದು ತನ್ನ ಬೆನ್ನಿಗೆ ನಿಂತ ಧ್ವನೀರ್ (Dhanveer) ನಟನೆಯ ವಾಮನ ಸಿನಿಮಾ ಟ್ರೈಲರ್ ಅನ್ನು ಬಿಡುಗಡೆ ಮಾಡಲು ಬೆಂಗಳೂರಿಗೆ ಬರಲಿದ್ದಾರೆ.ಟ್ರೈಲರ್ ಬಿಡುಗಡೆ ಮಾಡಿದ ಬಳಿಕ ಮತ್ತೆ ದರ್ಶನ್ ಜೈಪುರಕ್ಕೆ ತೆರಳಲಿದ್ದಾರೆ. ಏಪ್ರಿಲ್ 3ರವರೆಗೂ ದರ್ಶನ್ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.
ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ನೀಡಿದ ಕೋರ್ಟ್ ಬೆಂಗಳೂರು ಬಿಟ್ಟು ತೆರಳದಂತೆ ಆರಂಭದಲ್ಲಿ ಷರತ್ತು ವಿಧಿಸಿತ್ತು. ನಂತರ ದರ್ಶನ್ ಅವರ ಮನವಿ ಮೇರೆಗೆ ಶೂಟಿಂಗ್‌ಗೆ ತೆರಳಲು ಅನುಮತಿ ನೀಡಿತ್ತು. ಅನುಮತಿ ಸಿಕ್ಕಿದ ನಂತರ ಈಗ ದರ್ಶನ್ ಡೆವಿಲ್ ಶೂಟಿಂಗ್‌ಗೆ ರಾಜಸ್ಥಾನಕ್ಕೆ ತೆರಳಿದ್ದಾರೆ.