ಬೆಂಗಳೂರು: ನಟ ದರ್ಶನ್ (Darshan) ಮತ್ತು ಪವಿತ್ರಾ ಗೌಡ (Pavithra Gowda) ಅವರ ಜಾಮೀನು ಅರ್ಜಿಯ ಭವಿಷ್ಯ ಅ.14 ರಂದು ಪ್ರಕಟವಾಗಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಜಾಮೀನು ಅರ್ಜಿಯ ಸುದಿರ್ಘ ವಿಚಾರಣೆ ಮುಗಿದಿದ್ದು, ಸೆಷನ್ಸ್ ಕೋರ್ಟ್ ಆದೇಶವನ್ನು ಸೋಮವಾರಕ್ಕೆ ಕಾಯ್ದಿರಿಸಿದೆ.
ಎಸ್ಪಿಪಿ ಪ್ರಸನ್ನಕುಮಾರ್ ಅವರ ವಾದಕ್ಕೆ ಇಂದು ನಟ ದರ್ಶನ್ ಪರ ವಕೀಲ ಸಿವಿ ನಾಗೇಶ್ ಕೌಂಟರ್ ಕೊಡುವ ಕೆಲಸ ಮಾಡಿದರು. ಇದಕ್ಕೆ ಎಸ್ಪಿಪಿ ಕೂಡ ಪ್ರತಿವಾದ ಮಂಡಿಸಿದರು. ತನಿಖಾಧಿಕಾರಿಯ ವರದಿಯೇ ಸರಿಯಿಲ್ಲ. ತನಿಖಾಧಿಕಾರಿಯನ್ನು ಎಸ್ಪಿಪಿ ತಪ್ಪುದಾರಿಗೆ ಎಳೆದಿದ್ದಾರೆ. ಇದೇನಾ ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸ್ ಮಾದರಿಯ ತನಿಖೆ ಎಂದು ಸಿವಿ ನಾಗೇಶ್ ವಾದ ಮಾಡಿದರು. ಇದಕ್ಕೆ ಎಸ್ಪಿಪಿ ಪ್ರಸನ್ನಕುಮಾರ್ ಆಕ್ಷೇಪಿಸಿ ಸಿಡಿಆರ್ ಸುಮಾರು 10 ಸಾವಿರ ಪುಟ ಇದೆ ಎಂದು ಉಲ್ಲೇಖಿಸಿದರು.
Advertisement
ದರ್ಶನ್ ಪರ ವಕೀಲರ ವಾದ ಏನು?
* ಪ್ರಕರಣದ ತನಿಖಾಧಿಕಾರಿಯನ್ನ ಎಸ್ಪಿಪಿ ತಪ್ಪು ದಾರಿಗೆ ಎಳೆದಿದ್ದಾರೆ.
* ಮೊಬೈಲ್ ಕರೆಗಳು, ಟವರ್ ಡಂಪ್ ಆಧರಿಸಿ ರೇಖಾಚಿತ್ರ ಸಿದ್ಧಪಡಿಸಿದ್ದಾರೆ
* ಗೂಗಲ್ ಮ್ಯಾಪ್ ನೋಡಿ ಕಾನ್ಸ್ಟೇಬಲ್ ಸಹಾಯದಿಂದ ರೇಖಾಚಿತ್ರ ಸಿದ್ಧ
* ಉಪಗ್ರಹ ಆಧಾರಿತ ಚಿತ್ರವನ್ನ ಮೊಬೈಲ್ ಆಧಾರದ ಮೇಲೆ ತೆಗೆದುಕೊಂಡಿದ್ದಾರೆ
* ಇದನ್ನ ಟೆಕ್ನಿಕಲ್ ಎವಿಡೆನ್ಸ್ ಆಗಿ ಪರಿಗಣಿಸುವುದು ಎಷ್ಟು ಸರಿ?
* ಶೆಡ್ನಲ್ಲಿ ಪುನೀತ್, ವಿಜಯ್, ಬಸವರಾಜ್ ಸೇರಿ 8 ಮಂದಿ ಕೆಲಸ ಮಾಡ್ತಿದ್ರು. ಆದರೆ ಚಾರ್ಜ್ಶೀಟ್ ಈ ಡಯಾಗ್ರಾಂನಲ್ಲಿ ಎಷ್ಟು ಜನರನ್ನ ತೋರಿಸಿದ್ದಾರೆ?
* ಆರೋಪಿಗಳ ಮೊಬೈಲ್ ಸೀಜ್ ಮಾಡಿ ಗೂಗಲ್ ಡಯಾಗ್ರಾಂ ಮಾಡಲಾಗಿದೆ
* ಇಂತಹ ಸಾಕ್ಷ್ಯ ಗಳನ್ನ ಇಟ್ಟುಕೊಂಡು ಯಾರನ್ನ ಶಿಕ್ಷಿಸಲು ಸಾಧ್ಯ?
* ದರ್ಶನ್ ಸಿಮ್ ಹೇಮಂತ್ ಹೆಸರಿನಲ್ಲಿತ್ತು.. ಹಾಗಿದ್ರೆ ದರ್ಶನ್ ಫೋಟೋ ಹೇಗೆ ಬಂತು?
* ದರ್ಶನ್ ಪೋಟೋ ತೆಗೆದುಕೊಂಡು ಎಡಿಟ್ ಮಾಡಿ ತೋರಿಸಲಾಗಿದೆ
* ರೇಣುಕಾಸ್ವಾಮಿ ದೇಹದ ಮೇಲೆ 1 ಸೆಂ.ಮೀ ಗಾಯ ಇತ್ತು
* ದೇಹದ ಮೇಲೆ 39 ಗಾಯಗಳಿದ್ವು ಎಂದು ವೈದ್ಯರು ಹೇಳಿದ್ದಾರೆ
* ತಲೆಗೆ ಬಲವಾಗಿ ಹೊಡೆದ್ರೆ ರಕ್ತ ಧಾರಕಾರವಾಗಿ ಹರಿಯಲ್ಲ ಚಿಮ್ಮುತ್ತೆ
* ಶೆಡ್ ಕೆಲಸಗಾರ ಕಿಶೋರ್ ಹೇಳಿಕೆ ದಾಖಲಿಸಲು ತಡಮಾಡಿದ್ಯಾಕೆ?
* ಸ್ಟೋನಿಬ್ರೂಕ್ ಪಬ್ ಸ್ಥಳವನ್ನು ಅಪರಾಧ ಜಾಗವಾಗಿ ತೋರಿಸಿದ್ದಾರೆ. ಇದೇನಾ ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸ್ ಮಾದರಿಯ ತನಿಖೆ?
Advertisement
ಎಸ್ಪಿಪಿ ಪ್ರಸನ್ನಕುಮಾರ್ ವಾದ ಏನು?
* ತನಿಖಾಧಿಕಾರಿ ಯಾವುದೇ ಸಾಕ್ಷಿಗಳನ್ನ ಸೃಷ್ಟಿಸಿಲ್ಲ
* ಕೇವಲ ಐಪಿ ಅಡ್ರೆಸ್ನಿಂದ ಈ ವರದಿ ಸಿದ್ದಪಡಿಸಿಲ್ಲ
* ಜಿಪಿಎಸ್ ಲ್ಯಾಂಗಿಟ್ಯೂಡ್ ಲಾಟಿಟ್ಯೂಡ್ ಆಧರಿಸಿ ವರದಿ ಸಿದ್ಧ
* ದರ್ಶನ್ ಸಿಮ್ ಹೇಮಂತ್ಗೆ ಸೇರಿದ್ದು ಅಂತ ಸಿವಿ ನಾಗೇಶ್ ಹೇಳ್ತಾರೆ
* `ಮಿಸ್ ಯೂ ಹೆಂಡ್ತಿ, ಯೂ ಆರ್ ಮೋಸ್ಟ್ ಇಂಪಾರ್ಟೆಂಟ್ ಇನ್ ಮೈಲೈಫ್ ಸುಬ್ಬಿ’ – ಇಂತಹ ಮೆಸೇಜ್ಗಳನ್ನು ಹೇಮಂತ್ ಮಾಡಿದ್ದಾ? ದರ್ಶನ್ ಮಾಡಿದ್ದಾ?
* ಪವಿತ್ರಾಗೆ ಅಶ್ಲೀಲ ಸಂದೇಶ ಕಳಿಸಿದ್ದಕ್ಕೆ ರೇಣುಕಾಸ್ವಾಮಿ ಕೊಲೆ
* ಸಂಚು ರೂಪಿಸಿ ಕೊಲೆ ಮಾಡಿದ ಕಾರಣಕ್ಕೆ ದರ್ಶನ್ ಬಂಧನ