ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ (Darshan), ಪವಿತ್ರಾ ಗೌಡ ಮತ್ತು ಗ್ಯಾಂಗ್ ವಿಚಾರಣೆಯನ್ನು ಏ.8 ಕ್ಕೆ ಕೋರ್ಟ್ ಮುಂದೂಡಿದೆ.
57ನೇ ಸೆಷನ್ಸ್ ಕೋರ್ಟ್ನಲ್ಲಿ ಮಂಗಳವಾರ ಆರೋಪಿ ದರ್ಶನ್ ಮತ್ತು ಗ್ಯಾಂಗ್‌ನ ವಿಚಾರಣೆ ನಡೆಯಿತು. ಆರೋಪಿಗಳಾದ ನಿಖಿಲ್ ಮತ್ತು ಕೇಶವಮೂರ್ತಿ ಗೈರಾಗಿದ್ದರು. ಉಳಿದಂತೆ ಎಲ್ಲ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – ಇಂದು ಕೋರ್ಟ್‌ಗೆ ಹಾಜರಾಗಲಿರುವ ದರ್ಶನ್ & ಗ್ಯಾಂಗ್
Advertisement
Advertisement
ಕೋರ್ಟ್‌ನಲ್ಲಿ ಪೊಲೀಸರ ವಿರುದ್ಧ ದರ್ಶನ್ ಪರ ವಕೀಲರ ಆರೋಪ ಮಾಡಿದರು. ಇತರೆ ಆರೋಪಿಗಳನ್ನು ಮಾಫಿ ಸಾಕ್ಷಿ ಆಗಲು ಒತ್ತಡ ಹೇರುತ್ತಿದ್ದಾರೆ. ಬೇರೆ ಆರೋಪಿಗಳಿಗೆ ಮಾಫಿ ಸಾಕ್ಷಿ ಆಗಿ ಅಂತ ಒತ್ತಡ ಹೇರಲಾಗುತ್ತಿದೆ. ಸಾಕಷ್ಟು ಸಾಕ್ಷಿ ಇದೆ ಅಂತ ಹೇಳ್ತಾರೆ. ಹೈಕೋರ್ಟ್ ಅಲ್ಲಿ ಸಾಕಷ್ಟು ವಾದ ಮಂಡನೆ ಮಾಡಿದ್ದಾರೆ. ಹೀಗಿರುವಾಗ ಮಾಫಿ ಸಾಕ್ಷಿಯಾಗಲು ಒತ್ತಡ ಹಾಕಿದ್ದಾರೆ. ಇತರೆ ಆರೋಪಿಗಳು ತಪ್ಪು ಒಪ್ಪಿಕೊಂಡರೆ ಮಾಫಿ ಸಾಕ್ಷಿ ಮಾಡ್ತೀವಿ ಅಂತಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
Advertisement
ವಾದವನ್ನು ಆಲಿಸಿದ ನ್ಯಾಯಾಧೀಶರು ವಿಚಾರಣೆ ಮುಂದೂಡಿದ್ದಾರೆ. ಏಪ್ರಿಲ್ 8 ಕ್ಕೆ ವಿಚಾರಣೆ ಮುಂದೂಡಲಾಗಿದೆ. ಇದನ್ನೂ ಓದಿ: ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದಾಗ ಅಪಘಾತ – ವಿಜಯಪುರದ ಇಬ್ಬರು ಸ್ಥಳದಲ್ಲೇ ಸಾವು