ರಾಮನಗರ: ನನ್ನ ಮಗ ತಪ್ಪು ಮಾಡಿಲ್ಲ. ಯಾರೋ ಪಿತೂರಿ ಮಾಡಿದ್ದಾರೆ ಎಂದು ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದ ಎ3 ಆರೋಪಿ ತಾಯಿ ಜಯಲಕ್ಷ್ಮಮ್ಮ ಮಾತನಾಡಿದರು.
ನನ್ನ ಮಗ ಪವನ್ ಯಾವುದೇ ತಪ್ಪು ಮಾಡಿಲ್ಲ. ಯಾರೋ ಪಿತೂರಿ ಮಾಡಿ ಅವನನ್ನು ಸಿಕ್ಕಿಹಾಕಿಸಿದ್ದಾರೆ ಎಂದು ಆರೋಪಿ ತಾಯಿ ಕಣ್ಣೀರಿಟ್ಟರು. ಇದನ್ನೂ ಓದಿ: ದರ್ಶನ್ ನನ್ನ ಸ್ನೇಹಿತರು – ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರೋದು ಶಾಕ್ ಆಗ್ತಿದೆ: ದರ್ಶನ್ ಪುಟ್ಟಣ್ಣಯ್ಯ
ಕಳೆದ 12 ವರ್ಷಗಳಿಂದ ದರ್ಶನ್ (Actor Darshan) ಜೊತೆಯಲ್ಲಿದ್ದಾನೆ. ದರ್ಶನ್ ಅವರೇ ಅವನನ್ನ ಎಂ.ಕಾಂ ಓದಿಸಿದ್ದಾರೆ. ದರ್ಶನ್‌ರನ್ನ ಅಣ್ಣ ಅಣ್ಣ ಅಂತ ಕರೆಯುತ್ತಿದ್ದ. ತಿಂಗಳಿಗೊಮ್ಮೆ ಊರಿಗೆ ಬಂದು ಹೋಗ್ತಿದ್ದ. ಅವರ ಮನೆಯಲ್ಲೇ ಕೆಲಸ ಮಾಡಿಕೊಂಡು ಇದ್ದ ಎಂದು ತಿಳಿಸಿದರು.
ನಮ್ಮ ಮಗ ಕೊಲೆ ಮಾಡುವಂತಹ ವ್ಯಕ್ತಿ ಅಲ್ಲ. ನಮ್ಮ ಮಗನ ಬಗ್ಗೆ ನಂಬಿಕೆ ಇದೆ. ಅವನು ಇಂತಹ ಕೆಲಸ ಮಾಡಿಲ್ಲ. ಈ ಕೇಸ್‌ನಲ್ಲಿ ಅವನನ್ನ ಯಾರೋ ಪಿತೂರಿ ಮಾಡಿ ಸಿಕ್ಕಿಹಾಕಿಸಿದ್ದಾರೆ. ಅವನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಯಾರೋ ಮಾಡಿದ ತಪ್ಪನ್ನ ನನ್ನ ಮಗನ ಮೇಲೆ ಹೊರಿಸಲಾಗ್ತಿದೆ ಎಂದು ಅಳಲು ತೋಡಿಕೊಂಡರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಆರೋಪಿ ನಂದೀಶ್ ಕುಟುಂಬಸ್ಥರ ಕಣ್ಣೀರು