ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನ್ಯಾಯಾಂಗ ಬಂಧನದಲ್ಲಿರುವ (Judicial Custody) ನಟ ದರ್ಶನ್, ಪವಿತ್ರಾಗೌಡ ಮತ್ತು ಇತರರಿಗೆ ಮೊದಲ ಕಾನೂನು ಹೋರಾಟದಲ್ಲಿ ನಿರಾಸೆಯಾಗಿದೆ.
ಪ್ರಕರಣದ ಎರಡನೇ ಆರೋಪಿ ದರ್ಶನ್ (Darshan) ಮತ್ತು ಮೊದಲ ಆರೋಪಿ ಪವಿತ್ರ ಗೌಡ (Pavithra Gowda) ಜಾಮೀನು ಅರ್ಜಿಯನ್ನು ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶ ಜೈಶಂಕರ್ ವಜಾ ಮಾಡಿದ್ದಾರೆ.
Advertisement
ದರ್ಶನ್‌ಗೆ ಜಾಮೀನು ಸಿಕ್ಕಿ ಅವರು ಜೈಲಿನಿಂದ (Jail) ಹೊರಗೆ ಬರಲಿದ್ದಾರೆ ಎಂದು ಕಾದಿದ್ದ ಅವರ ಬೆಂಬಲಿಗರು ಬೇಸರಗೊಂಡಿದ್ದಾರೆ. ಬರೀ ದರ್ಶನ್ ಮಾತ್ರವಲ್ಲದೇ ಇತರೆ ಆರೋಪಿಗಳಾದ ನಾಗರಾಜ್, ಲಕ್ಷ್ಮಣ್‌ಗೂ ಜಾಮೀನು ಸಿಕ್ಕಿಲ್ಲ.
Advertisement
Advertisement
ದೀಪಕ್ ಮತ್ತು ರವಿಶಂಕರ್‌ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ 17 ಆರೋಪಿಗಳಲ್ಲಿ ಐವರಿಗೆ ಜಾಮೀನು ಸಿಕ್ಕಂತೆ ಆಗಿದೆ. ವಿನಯ್ ಮತ್ತು ಪ್ರದೋಷ್ ಜಾಮೀನು ಅರ್ಜಿಗಳ ವಿಚಾರಣೆ ಇಂದು ನಡೆದಿದ್ದು ಅ.16ಕ್ಕೆ ಮುಂದೂಡಿಕೆಯಾಗಿದೆ. ಸಿವಿಲ್ ಕೋರ್ಟ್‌ನಲ್ಲಿ ಜಾಮೀನು ಸಿಗದ ಕಾರಣ ನಟ ದರ್ಶನ್ ಮತ್ತು ಇತರರು ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
Advertisement
ದರ್ಶನ್ ಪರ ವಕೀಲರ ವಾದ ಏನಾಗಿತ್ತು?
ನಟ ದರ್ಶನ್ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು 500 ಕುಟುಂಬಗಳ ಸದಸ್ಯರು ಅವರನ್ನೇ ಅವಲಂಬಿಸಿವೆ. ದರ್ಶನ್ ಜೈಲಿನಲ್ಲಿಯೇ ಇದ್ದರೆ ಆ ಕುಟುಂಬಗಳಿಗೆ ಹೊಡೆತ ಬೀಳುತ್ತದೆ. ಈ ನೆಲೆಗಟ್ಟಿನಲ್ಲಿ ನಟ ದರ್ಶನ್‌ಗೆ ಜಾಮೀನು ಮಂಜೂರು ಮಾಡಬೇಕು ಎಂದು ಹಿರಿಯ ವಕೀಲ ನಾಗೇಶ್ ವಾದಿಸಿದ್ದರು. ಇದನ್ನೂ ಓದಿ: ದರ್ಶನ್, ಪವಿತ್ರಾಗೌಡ ಜಾಮೀನು ಅರ್ಜಿ ವಜಾ; ನ್ಯಾಯಾಲಯದ ತೀರ್ಪನ್ನು ಗೌರವಿಸ್ತೇವೆ: ರೇಣುಕಾಸ್ವಾಮಿ ತಂದೆ
ಎಸ್‌ಪಿಪಿ ವಾದ ಏನಾಗಿತ್ತು?
ದರ್ಶನ್ ಪರ ವಕೀಲರು, 500 ಕುಟುಂಬ ದರ್ಶನ್ ಆಧರಿಸಿವೆ. ಜಾಮೀನು ಮಂಜೂರು ಮಾಡಿ ಎನ್ನುತ್ತಿದ್ದಾರೆ. ಆದರೆ ಸುಬ್ರತೋರಾಯ್ ಪ್ರಕರಣದಲ್ಲಿ ಅವರು 20 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿದರೂ ಜಾಮೀನು ಸಿಕ್ಕಿರಲಿಲ್ಲ. ಈ ವಿಚಾರವನ್ನು ಕೋರ್ಟ್ ಇದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.
ಆರೋಪಿಗಳ ನಡುವಿನ ಕರೆ ಸಂಭಾಷಣೆ ದಾಖಲೆ 10,000 ಪುಟದಷ್ಟಿದೆ. ಮೊದಲಿಗೆ ಸಾಕ್ಷಿ ಹೇಳಿಕೆ ನೀಡಿ ನ್ಯಾಯಾಲಯದಲ್ಲಿ ಉಲ್ಟಾ ಹೊಡೆಯುತ್ತಿದ್ದರು. ಈಗ ಲೊಕೇಶನ್ ಇರುವುದರಿಂದ ಹಾಗೇ ಮಾಡಲು ಸಾಧ್ಯವಿಲ್ಲ. ರೇಣುಕಾಸ್ವಾಮಿ ಕೊಲೆ ಮೂಲಕ ದರ್ಶನ್ ಗ್ಯಾಂಗ್ ಪರ್ಯಾಯ ಸರ್ಕಾರದ ರೀತಿ ವರ್ತಿಸಿದೆ. ಹೀಗಾಗಿ ಜಾಮೀನು ಮಂಜೂರು ಮಾಡಬಾರದು ಎಂದು ಪ್ರಸನ್ನ ಕುಮಾರ್ ವಾದಿಸಿದ್ದರು.
ಕೋರ್ಟ್ ಆದೇಶದಲ್ಲಿ ಏನಿದೆ?
ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರವಾಗಿ ಹತ್ಯೆ ಆಗಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಕ್ರೌರ್ಯದ ಅನಾವರಣವಾಗಿದೆ. ನಟ ದರ್ಶನ್ ಸಮಾಜದಲ್ಲಿ ಒಬ್ಬ ರೋಲ್ ಮಾಡೆಲ್ ವ್ಯಕ್ತಿ. ಡಿಎನ್‌ಎ ವರದಿಯಲ್ಲಿ ಕೊಲೆ ನಡೆದ ಸ್ಥಳದಲ್ಲಿ ದರ್ಶನ್ ಇರುವುದು ದೃಢಪಟ್ಟಿದೆ. ಸಿಡಿಆರ್ ವರದಿಯಲ್ಲಿಯೂ ಕೊಲೆ ಜಾಗದಲ್ಲಿ ದರ್ಶನ್ ಇದ್ದರು ಎಂಬುದು ದೃಢವಾಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಈ ಹಂತದಲ್ಲಿ ಕೋರ್ಟ್ ಪರಿಗಣಿಸಿಲ್ಲ. ದರ್ಶನ್ ಪರ ವಕೀಲರ ವಾದ, ಎಸ್‌ಪಿಪಿ ವಾದ ಪರಿಗಣಿಸಿ ಆದೇಶ ಪ್ರಕಟಿಸಿದ್ದಾರೆ.