ಚಿತ್ರದುರ್ಗ: ಕೊಲೆಯಾದ ರೇಣುಕಾಸ್ವಾಮಿ ಅಂತ್ಯಕ್ರಿಯೆಯು ಚಿತ್ರದುರ್ಗದ ವೀರಶೈವ ರುದ್ರಭೂಮಿಯಲ್ಲಿ ಹೆತ್ತವರ, ಸಂಬಧಿಗಳ ಆಕ್ರಂದನದ ನಡುವೆ ನಡೆಯಿತು.
ಮರಣೋತ್ತರ ಪರೀಕ್ಷೆ ಬಳಿಕ ಮಂಗಳವಾರ ರಾತ್ರಿ ರೇಣುಕಾಸ್ವಾಮಿ ನಿವಾಸಕ್ಕೆ ಮೃತದೇಹ ನೀಡಲಾಯಿತು. ಅಂಬುಲೆನ್ಸ್ನಲ್ಲಿ ಬಂದ ಮೃತದೇಹ ವೀಕ್ಷಿಸುತ್ತಿದ್ದಂತೆ ಕುಟುಂಬಸ್ಥರು, ಸಂಬಂಧಿಗಳು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತು. ಲಕ್ಷ್ಮಿ ವೆಂಕಟೇಶ್ವರ ಬಡಾವಣೆಯಲ್ಲಿನ ನಿವಾಸದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ನಟ ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಕೇಸ್; ಟೈಮ್‌ಲೈನ್ ಹೀಗಿದೆ ನೋಡಿ..
- Advertisement
ನಂತರ ನಗರದ ವೀರಶೈವ ರುದ್ರಭೂಮಿಗೆ ಪಾರ್ಥಿವ ಶರೀರ ರವಾನಿಸಲಾಯಿತು. ವೀರಶೈವ ಸಂಪ್ರದಾಯದಂತೆ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಂತ್ಯಸಂಸ್ಕಾರಕ್ಕೂ ಮುನ್ನ ಪತಿಯ ಮೃತದೇಹ ನೋಡಿ ಪತ್ನಿ ಸಹನಾ ಕಣ್ಣೀರಿಟ್ಟರು. ತಂದೆ ಕಾಶಿನಾಥ್ ಮತ್ತು ತಾಯಿ ರತ್ನಮ್ಮರ ದುಃಖ ಉಮ್ಮಳಿಸಿ ಬಂತು.
- Advertisement
ಕೊನೆಗೆ ರೇಣುಕಾಸ್ವಾಮಿ ಮೃತದೇಹಕ್ಕೆ ಕುಟುಂಬಸ್ಥರು ಪೂಜೆ ಮಾಡಿದರು. ವೀರಶೈವ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ರೇಣುಕಾಸ್ವಾಮಿ ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು. ಇದನ್ನೂ ಓದಿ: ನನ್ನ ಮಗ ವಿಲವಿಲ ಒದ್ದಾಡಿ ಸತ್ತಂತೆ ದರ್ಶನ್ ಸಾಯಬೇಕು: ಕೊಲೆಯಾದ ರೇಣುಕಾಸ್ವಾಮಿ ತಾಯಿ ಹಿಡಿಶಾಪ