ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ (Renukaswamy Murder Case) ಪ್ರಕರಣದ ಆರೋಪಿ ನಟ ದರ್ಶನ್ (Darshan) ಅವರಿಂದು ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗದಿದ್ದಕ್ಕೆ ಬೆನ್ನುನೋವು ಕಾರಣ ಅನ್ನೋದು ತಿಳಿದುಬಂದಿದೆ.
ರಾಜಸ್ಥಾನದಲ್ಲಿ `ಡೆವಿಲ್’ ಶೂಟಿಂಗ್ ಮುಗಿಸಿ ಪತ್ನಿ, ಪುತ್ರನೊಂದಿಗೆ ದರ್ಶನ್ ವಾಪಸ್ https://t.co/idweccjvX2… #ActorDarshan #DevilCinema #VijayalakshmiDarshan #Bengaluru #Rajasthan pic.twitter.com/ePhNjSv8kv
— PublicTV (@publictvnews) April 4, 2025
ಇಂದು ನಟ ದರ್ಶನ್ ಸೇರಿದಂತೆ ಪ್ರಕರಣದ 17 ಆರೋಪಿಗಳು 57ನೇ ಸಿಸಿಹೆಚ್ ಕೋರ್ಟ್‌ಗೆ (CCH Court) ಹಾಜರಾಗದ ಹಿನ್ನೆಲೆ ಕೋರ್ಟ್ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತಯ. ಆದ್ರೆ ವಿಚಾರಣೆ ಸಂದರ್ಭದಲ್ಲಿ ವಕೀಲರು, ದರ್ಶನ್ ಅವರಿಗೆ ಬೆನ್ನು ನೋವಿದೆ. ಹೀಗಾಗಿ ವಿಚಾರಣೆಗೆ ಬರಲು ವಿನಾಯಿತಿ ಕೋರಿದರು. ಜೊತೆಗೆ ಷರತ್ತು ಸಡಿಲಿಕೆ ಮಾಡಿದ್ದ ಹೈಕೋರ್ಟ್ ಆದೇಶವನ್ನೂ ಕೂಡ ಕೋರ್ಟ್‌ಗೆ ಸಲ್ಲಿಸಿದರು. ಈ ನ್ಯಾಯಾಧೀಶರು ವಿಚಾರಣೆಗೆ ಆರೋಪಿಗಳು ಗೈರಾಗುವುದು ಸರಿಯಲ್ಲ. ವಿಚಾರಣೆಗೆ ಇದ್ದಾಗ ಆರೋಪಿಗಳು ಹಾಜರಾಗಲೇಬೇಕು. ವಿನಾಯಿತಿಗೆ ಮನವಿ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಚಾರಣೆಗೆ ಗೈರಾಗಿದ್ದು ಏಕೆ?
ಈ ಬೆನ್ನಲ್ಲೇ ದರ್ಶನ್ ವಿಚಾರಣೆಗೆ ಹಾಜರಾಗದಿರಲು ಬೆನ್ನುನೋವೇ ಕಾರಣ ಎಂದು ಆಪ್ತ ಮೂಲಗಳಿಂದಲೂ ತಿಳಿದುಬಂದಿದೆ. ಇದನ್ನೂ ಓದಿ: 64 ವರ್ಷಗಳ ಬಳಿಕ ಗುಜರಾತ್‌ನಲ್ಲಿ ಎಐಸಿಸಿ ಅಧಿವೇಶನ – ಹಲವು ಮಹತ್ವದ ನಿರ್ಣಯ ಸಾಧ್ಯತೆ
ಡೆವಿಲ್ ಸಿನಿಮಾಗಾಗಿ (Devil Cinema)ದರ್ಶನ್ ಬಿಡುವಿಲ್ಲದೇ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಕಳೆದ ವಾರ ಮೂರು ದಿನ ರಾಜಸ್ಥಾನದಲ್ಲಿ 28 ಗಂಟೆ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಆದ್ರೆ ರಾಜಸ್ಥಾನದಲ್ಲಿ ಶೂಟಿಂಗ್ ವೇಳೆ ಬೇರೆ ಇಂಡಸ್ಟ್ರಿಯ ಆರ್ಟಿಸ್ಟ್ ಒಬ್ಬರ ಕಾಲ್ ಶೀಟ್ ಮುಗಿದು ಹೋಗ್ತಿತ್ತು. ಆದ್ದರಿಂದ ದರ್ಶನ್ ನಿರಂತರ ಕೆಲಸ ಮಾಡಬೇಕಾದ ಸನ್ನಿವೇಶ ಎದುರಾಗಿತ್ತು. ಹೆಚ್ಚು ಕೆಲಸ ಮಾಡಿದ್ದರಿಂದ ದರ್ಶನ್ ಮತ್ತೆ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಕಳೆದ ಶನಿವಾರದಿಂದ ಬೆನ್ನು ನೋವು ಕಾಣಿಸಿಕೊಂಡಿದ್ದು, ಸೋಮವಾರ (ಏ.7) ಮೈಸೂರಿಗೆ ತೆರಳಿ ವೈದ್ಯರನ್ನ ಸಂಪರ್ಕಿಸಿದ್ದರು ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ಮಧ್ಯರಾತ್ರಿ ಎದೆ ಮುಟ್ಟಿ ಯುವಕನ ಅಸಭ್ಯ ವರ್ತನೆ ಕೇಸ್ – ಯುವತಿಯನ್ನು ಪತ್ತೆ ಹಚ್ಚೋದೆ ದೊಡ್ಡ ಸವಾಲು
75 ಲಕ್ಷ ರೂ. ಬಿಡುಗಡೆಗೆ ಮನವಿ
ಇನ್ನೂ ಕೋರ್ಟ್ ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ದರ್ಶನ್ ಮನೆಯಿಂದ ಜಪ್ತಿ ಮಾಡಿಕೊಂಡಿದ್ದ 75 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಈ ವೇಳೆ ಕೋರ್ಟ್, ಆದಾಯ ತೆರಿಗೆ ಇಲಾಖೆ ವಾದ ಮಂಡಿಸಿದ ಬಳಿಕ ಆದೇಶ ನೀಡುವುದಾಗಿ ಹೇಳಿ ಮೇ 20ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿತು. ಈ ವೇಳೆ ತನಿಖೆ ವೇಳೆ ಜಪ್ತಿ ಮಾಡಿದ್ದ ಮೊಬೈಲ್‌ಗಳ ಹಿಂತಿರುಗಿಸಲು ಆರೋಪಿಗಳ ಪರ ವಕೀಲರು ಅರ್ಜಿ ಸಲ್ಲಿಸಿದರು.
ಇಂದಿನ ವಿಚಾರಣೆಗೆ ಪವಿತ್ರಾ ಗೌಡ (Pavithra gowda) ಮತ್ತು ಉಳಿದ ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ದರು. ಸಹೋದರನ ಜೊತೆ ಪವಿತ್ರಾ ಗೌಡ ಆರ್.ಆರ್ ನಗರದ ಮನೆಯಿಂದ ಕೋರ್ಟ್‌ಗೆ ಆಗಮಿಸಿದ್ದರು. ಇದನ್ನೂ ಓದಿ: ಶಿವಮೊಗ್ಗ ಡಿಸಿಸಿ ಬ್ಯಾಂಕ್, ಅಧ್ಯಕ್ಷ ಮಂಜುನಾಥ ಗೌಡ ನಿವಾಸದ ಮೇಲೆ ಇಡಿ ದಾಳಿ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು (Bail) ಸಿಕ್ಕಿದೆ. ಜಾಮೀನು ಪಡೆದರೂ ಪ್ರತಿ ತಿಂಗಳು ನ್ಯಾಯಾಲಯಕ್ಕೆ (Court) ಹಾಜರಾಗಬೇಕು ಎಂಬ ಷರತ್ತು ಹಿನ್ನೆಲೆಯಲ್ಲಿ ಇಂದು ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ದರು. ಇದನ್ನೂ ಓದಿ: ವಿಚಾರಣೆಗೆ ದರ್ಶನ್ ಗೈರು – ಬೆಂಗಳೂರು ಕೋರ್ಟ್ ಅಸಮಾಧಾನ