– ಪವಿತ್ರಾ ಗೌಡ ಮನೆಯಲ್ಲೂ ಸ್ಥಳ ಮಹಜರು
ಬೆಂಗಳೂರು: ಚಿತ್ರದುರ್ಗ ಮೂಲದ ರೇನುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಗೆದಷ್ಟು ವಿಚಾರಗಳು ಬಯಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ತನಿಖೆಗೆ ಇಳಿದಿದ್ದು, ದರ್ಶನ್‍ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.
ಹತ್ಯೆ ದಿನ ದರ್ಶನ್ ಧರಿಸಿದ್ದ ಬಟ್ಟೆ, ಶೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊನ್ನೆ ತಡರಾತ್ರಿ ನಟ ದರ್ಶನ್ ಮನೆಯಲ್ಲಿ ಮಹಜರು ನಡೆಸಲಾಗಿತ್ತು. ಮನೆಯಲ್ಲಿ ಒಗೆಯದೇ ಇಟ್ಟಿದ್ದ ದರ್ಶನ್ ಬಟ್ಟೆ, ಹಾಗೂ ಶೂಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅವುಗಳನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಿದ್ದಾರೆ.
ಇತ್ತ ಕೊಲೆ ಪ್ರಕರಣದ ಎ1 ಆರೋಪಿಯಗಿರುವ ಪವಿತ್ರಾ ಗೌಡ ಮನೆಯಲ್ಲಿ ಕೂಡ ಪೊಲಿಸರು ಇಂದು ಸ್ಥಳ ಮಹಜರು ನಡೆಸಿದ್ದಾರೆ. ಆರ್.ಆರ್ ನಗರದಲ್ಲಿರುವ ಮನೆಗೆ ಪವಿತ್ರ ಗೌಡ ಹಾಗೂ ಪವನ್ ನನ್ನು ಪೊಲೀಸರು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸುತ್ತಿದ್ದಾರೆ.
ಇನ್ನೊಂದೆಡೆ ರೇಣುಕಾಸ್ವಾಮಿ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ಪವಿತ್ರಾ ಗೌಡ ಚಪ್ಪಲಿ ಹಾಗೂ ಅಂದು ಧರಿಸಿದ್ದ ಬಟ್ಟೆಯನ್ನು ಕೂಡ ಸೀಜ್ ಮಾಡಲಾಗಿದೆ. ಒಟ್ಟಾರೆ ರೇಣುಕಾಸ್ವಾಮಿ ಕೊಲೆ ಪ್ರಕರಣ ದರ್ಶನ್ ಹಾಗೂ ಪವಿತ್ರಾಗೆ ಮುಳ್ಳಾಗಿ ಪರಿಣಮಿಸಿದೆ.