– ನಟ ಬೇಗ ಜೈಲಿಂದ ಬಿಡುಗಡೆಯಾಗಲಿ ಅಂತಾ ಶಂಖನಾದ
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕಿಡ್ನಾಪ್ (Renukaswamy Case) ಹಾಗೂ ಕೊಲೆ ಪ್ರಕರಣ ಸಂಬಂಧ ದರ್ಶನ್ & ಗ್ಯಾಂಗ್ ಪರಪ್ಪನ ಅಗ್ರಹಾರ ಸೇರಿದೆ. ಇಂದು ಭಾನುವಾರ ಆಗಿರುವ ಕಾರಣ ಯಾರಿಗೂ ಭೇಟಿಗೆ ಅವಕಾಶ ಇಲ್ಲ. ಆದರೂ ಅಭಿಮಾನಿಗಳು ದರ್ಶನ್ ಭೇಟಿಗೆ ಯತ್ನಿಸುತ್ತಿದ್ದಾರೆ.
ಹೌದು. ದರ್ಶನ್ ಭೇಟಿಯಾಗಲೆಂದು ಬೆಂಗಳೂರಿನ ಮಾರತ್‍ಹಳ್ಳಿಯಿಂದ ಆಟೋ ಡ್ರೈವರ್ ಸುನೀಲ್ ಬಂದಿದ್ದಾನೆ. ಈತ ನಾನು ತಿಂಗಳಿಗೆ ಒಮ್ಮೆ ದರ್ಶನ್ (Challenging Star Darshan) ಅಣ್ಣನ ಭೇಟಿ ಮಾಡುತ್ತಿದ್ದೆ. ಆದರೆ ಈಗ ಜೈಲಿನಲ್ಲಿ ಇದ್ದಾರೆ. ಹಾಗಾಗಿ ನೋಡಲು ಬಂದೆ. ನಮ್ ಬಾಸ್ ಒಳ್ಳೆಯ ಕೆಲಸಗಳನ್ನು ಜನರಿಗೆ ಮಾಡುತ್ತಿದ್ದರು. ಆದರೆ ಈಗ ಅವರು ಈಗ ಜೈಲಿನಲ್ಲಿ ಇದ್ದಾರೆ. ತಂದೆ ತಾಯಿ ಬಿಟ್ರೆ ದರ್ಶನ್ ನನಗೆ ದೇವರು ಎಂದು ಹೇಳಿದ್ದಾನೆ.
ಇನ್ನೊಂದೆಡೆ ಶಂಖ ಊದಿ ಜಾಗಟೆ ಬಾರಿಸಿದ ದಾಸಪ್ಪ. ತುರುವೇಕೆರೆಯಿಂದ ಬಂದಿರುವ ಗೋವಿಂದರಾಜು ಎಂಬ ದಾಸಪ್ಪ, ದರ್ಶನ್ ಆದಷ್ಟು ಬೇಗ ಜೈಲಿಂದ ಬಿಡುಗಡೆಯಾಗಲಿ ಎಂದು ಶಂಖ ಊದಿ ಜಾಗಟೆ ಬಾರಿಸಿದರು. ನಮ್ಮಂತಹ ವಿಕಲಚೇತನರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಹಾಗಾಗಿ ಅವರು ಬೇಗ ಜೈಲಿಂದ ಬಿಡುಗಡೆಯಾಗಲಿ ಎಂದು ಬಂದಿದ್ದೇನೆ ಎಂದು ದಾಸಪ್ಪ ಹೇಳಿದ್ದಾರೆ.
ನಟ ದರ್ಶನ್ ಜೈಲು ಸೇರಿದಾಗಿನಿಂದ ಫ್ಯಾನ್ಸ್ ಅವರ ಭೇಟಿಗೆ ಹಾತೊರೆಯುತ್ತಿದ್ದಾರೆ. ಆದರೆ ಯಾರಿಗೂ ಅವಕಾಶ ಕೊಟ್ಟಿಲ್ಲ. ಇದನ್ನೂ ಓದಿ: ದರ್ಶನ್ ಪ್ರಕರಣದ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ