-ಸದನದಲ್ಲಿ ಸಿಡಿ ಪ್ರದರ್ಶಿಸಿದ ರೇಣುಕಾಚಾರ್ಯ
ಬೆಂಗಳೂರು: ಆಪರೇಷನ್ ಕಮಲ ನಡೆದಿದೆ ಎಂದು ಆರೋಪಿಸಿ ಸಿಎಂ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋ ತನಿಖೆಯನ್ನು ಎಸ್‍ಐಟಿಗೆ ನೀಡುವ ತೀರ್ಮಾನದ ಕುರಿತು ಶಾಸಕ, ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ಈ ಕುರಿತು ಜೋರು ಧ್ವನಿಯಲ್ಲಿ ಸ್ಪೀಕರ್ ಅವರನ್ನು ಮನವಿ ಮಾಡಿದ ಈಶ್ವರಪ್ಪ ಅವರು, ಎಸ್‍ಐಟಿಗೆ ತನಿಖೆಗೆ ಅವಕಾಶ ನೀಡುವುದು, ಕಳ್ಳನ ಕೈಗೆ ಬೀಗ ಕೊಟ್ರೆ ಏನು ಲಾಭ ಎಂದು ಪ್ರಶ್ನೆ ಮಾಡಿದ್ದಾರೆ. ಕಲಾಪದ ವೇಳೆ ಸಿಎಂ ಕುಮಾರಸ್ವಾಮಿ ಅವರು ಸ್ಪೀಕರ್ ಅವರ ಮಾತಿನ ಮೇರೆಗೆ ತನಿಖೆ ನಡೆಸಲು ಒಪ್ಪಿಗೆ ಸೂಚಿದರು. ಆದರೆ ಇದಕ್ಕೆ ಬಿಜೆಪಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಸ್ಪೀಕರ್ ಅವರೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಮನವಿ ಮಾಡಿದರು.
Advertisement
Advertisement
ಬಿಜೆಪಿ ಶಾಸಕರ ಮಾತಿಗೆ ಒಪ್ಪಿಗೆ ಸೂಚಿಸದ ಸ್ಪೀಕರ್ ನ್ಯಾಯಾಂಗ ತನಿಖೆಗೆ ಆದೇಶ ನೀಡುವುದು ನನ್ನ ವ್ಯಾಪ್ತಿಗೆ ಬರುವುದಿಲ್ಲ, ಆದ್ದರಿಂದ ಸಿಎಂ ಅವರೇ ಈ ನಿರ್ಧಾರ ಮಾಡಲಿದ್ದಾರೆ. ಆದರೆ ಪ್ರಕರಣದ ಯಾರೇ ಪ್ರಕರಣದ ತನಿಖೆ ನಡೆಸಿದರು ಕೂಡ ನನ್ನ ಅಭಿಪ್ರಾಯ ಬದಲಾಗುವುದಿಲ್ಲ. 15 ದಿನಗಳಲ್ಲಿ ವರದಿ ಕೊಡದಿದ್ದರೆ ನನ್ನ ತಲೆಮೇಲೆ ಹೊತ್ತುಕೊಂಡು ಇರುವುದಕ್ಕೆ ಆಗಲ್ಲ, ನನ್ನ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು. ಈ ಹಂತದಲ್ಲಿ ಆಡಳಿತ ಪಕ್ಷದ ಶಾಸಕರು ಹಾಗೂ ಬಿಜೆಪಿ ಶಾಸಕರ ನಡುವೆ ವಾಗ್ವಾದ ಏರ್ಪಡಿಸಿತ್ತು. ಬಳಿಕ ಸ್ಪೀಕರ್ ಅವರು ಸದನವನ್ನು ನಾಳೆಗೆ ಮುಂದೂಡಿದರು.
Advertisement
Advertisement
ಸದನದಲ್ಲಿ ಸರ್ಕಾರ ನಿರ್ಧಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ರೇಣುಕಾಚಾರ್ಯ ಅವರು, ಬಿಎಸ್ ಯಡಿಯೂರಪ್ಪ ಅವರ ಮನೆಗೆ ರೇವಣ್ಣ ಏಕೆ ಆಗಮಿಸಿದ್ದರು. 2014 ರಲ್ಲಿ ಎಂಎಲ್‍ಸಿ ಸ್ಥಾನಕ್ಕಾಗಿ ಶಾಸಕರಿಗೆ ಕೋಟಿ ಕೋಟಿ ನೀಡಲು ಮಾತನಾಡಿದ್ದಾರೆ 40 ಕೋಟಿ ರೂ. ಡೀಲ್ ಎಂದು ಸಿಡಿ ಪ್ರದರ್ಶಿಸಿದರು. ಬಳಿಕ ಸ್ಪೀಕರ್ ಅವರಿಗೆ ಸಿಡಿ ನೀಡಿ ತನಿಖೆಗೆ ಆಗ್ರಹಿಸಿದರು. ಸದನ ಹೊರ ಬಂದು ಮಾಧ್ಯಮಗಳೊಂದಿಗೂ ಕೂಡ ಆಸಮಾಧಾನ ಹೊರ ಹಾಕಿದ ರೇಣುಕಾಚಾರ್ಯ ಅವರು, ಸಿಎಂ ಸತ್ಯ ಹರಿಶ್ಚಂದ್ರರಂತೆ ಪೋಸ್ ನೀಡುತ್ತಿದ್ದಾರೆ. ಅವರ ಸಿಡಿ ಬಗ್ಗೆಯೂ ತನಿಖೆ ಆಗಲಿ. ಮಾಧ್ಯಮಗಳಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಕೂಡ ನಾವು ಎಸ್‍ಐಟಿ ತನಿಖೆ ಒಪ್ಪಿಕೊಳ್ಳುವುದಿಲ್ಲ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv