ದಾವಣಗೆರೆ: ಹುಬ್ಬಳ್ಳಿ ಪೊಲೀಸರು ಬಂಧಿಸಿರುವುದು ಅಮಾಯಕರಾದರೆ, ಆಸ್ಪತ್ರೆ, ದೇವಸ್ಥಾನ, ಪೊಲೀಸ್ ಠಾಣೆ ಮನೆಗಳ ಮೇಲೆ ದಾಂಧಲೆ ಮಾಡಿದವರು ಶಾಂತಿಪ್ರಿಯರೇ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಸರಣಿ ಟ್ವೀಟ್ ಮಾಡಿ ಕಾಂಗ್ರೆಸ್ ನಾಯಕರಿಗೆ ಕುಟುಕಿದ್ದಾರೆ.
ನಾವು ಶಾಂತಿ ಪ್ರಿಯರು, ಅಹಿಂಸವಾದಿಗಳು ಎಂದು ಹೇಳುವ “ಮಹಾನ್ ಮಹಾನ್ ನಾಯಕರುಗಳೇ”
ಗಲಭೆ ನಡೆದು ಮೂರು ದಿನವಾದರೂ ಹುಬ್ಬಳ್ಳಿಯ “ಧರ್ಮಪ್ರಚಾರಕರೊಬ್ಬರು” ಇದ್ದಕ್ಕಿದ್ದಂತೆ ನಾಪತ್ತೆಯಾಗಲು ಯಾವ ಕಾಣದ “ಕೈ” ಗಳು ಸಹಾಯ ಮಾಡಿವೆ ಎಂಬುದನ್ನು ಬಹಿರಂಗಪಡಿಸಿ.(5)
— M P Renukacharya (@MPRBJP) April 19, 2022
Advertisement
ಟ್ವೀಟ್ ಮೂಲಕ ವಿಪಕ್ಷಗಳ ಮೇಲೆ ಕಿಡಿಕಾರಿದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಹುಬ್ಬಳ್ಳಿ ಗಲಭೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಗಲಭೆ ನಡೆದು ಮೂರು ದಿನಗಳಾದರೂ ಹುಬ್ಬಳ್ಳಿಯ ಧರ್ಮ ಪ್ರಚಾರಕರೊಬ್ಬರು ಇದ್ದಕ್ಕಿದ್ದಂತೆ ನಾಪತ್ತೆಯಾಗಲು ಕಾಣದ ‘ಕೈ’ ಸಹಾಯ ಮಾಡಿವೆ. ಅದನ್ನು ಬಹಿರಂಗಪಡಿಸಿ. ಇದು ಪೂರ್ವ ನಿಯೋಜಿತ ಕೃತ್ಯ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ತಿಳಿಯುತ್ತಿಲ್ಲವೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಜನರ ಮುಂದೆ ಎಲ್ಲ ಬಿಚ್ಚಿಟ್ಟಿದ್ದಾರೆ, ಇದನ್ನೂ ಬಿಚ್ಚಿಡಲಿ: ಡಿಕೆಶಿ
Advertisement
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಬಂದ ತಕ್ಷಣವೇ ಏಕಾಏಕಿ ಗುಂಪು ಸೇರಿದ್ದು ಹೇಗೆ? ಅಷ್ಟು ದೊಡ್ಡ ಪ್ರಮಾಣದಲ್ಲಿ ಕಲ್ಲುಗಳ ರಾಶಿಯನ್ನು ತಂದು ಹಾಕಿದವರು ಯಾರು ? ಯಾವ ಉದ್ದೇಶಕ್ಕಾಗಿ ಇವುಗಳನ್ನು ಮುಂಚಿತವಾಗಿ ಸಂಗ್ರಹಿಸಲಾಗಿತ್ತು. (4)
— M P Renukacharya (@MPRBJP) April 19, 2022
Advertisement
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಬಂದ ತಕ್ಷಣವೇ ಗುಂಪು ಸೇರಿದ್ದು ಹೇಗೆ? ಅಷ್ಟು ದೊಡ್ಡ ಪ್ರಮಾಣದಲ್ಲಿ ಕಲ್ಲುಗಳ ರಾಶಿ ತಂದು ಹಾಕಿದವರು ಯಾರು? ಹೀಗೆ ಹಲವು ಪ್ರಶ್ನೆಗಳನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ರೇಣುಕಾಚಾರ್ಯರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.