ಮದುವೆ ದಿಬ್ಬಣದಲ್ಲಿ ಟ್ರ್ಯಾಕ್ಟರ್ ಚಾಲಕನಾದ ಶಾಸಕ ರೇಣುಕಾಚಾರ್ಯ

Advertisements

ದಾವಣಗೆರೆ: ಇತ್ತೀಚೆಗೆ ಮದುವೆ ಮನೆಯಲ್ಲಿ ಕರಿಮಣಿ ಪೋಣಿಸಿ ಸುದ್ದಿಯಾಗಿದ್ದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತೆ ವಿನೂತನ ಕೆಲಸ ಮಾಡಿ ಸುದ್ದಿಯಾಗಿದ್ದಾರೆ.

Advertisements

ಭಾನುವಾರ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ನಡೆದ ಮದುವೆಯ ದಿಬ್ಬಣದಲ್ಲಿ ಟ್ರ್ಯಾಕ್ಟರ್ ಓಡಿಸಿದ್ದಾರೆ. ಈ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ಕರಿಮಣಿ ಪೋಣಿಸಿದ ಶಾಸಕ ರೇಣುಕಾಚಾರ್ಯ

Advertisements

ಬೆಳಗುತ್ತಿ ಗ್ರಾಮದ ಮಲ್ಲಿಕಾರ್ಜುನ ಅಪ್ಪನವರ್ ಪುತ್ರ ಪ್ರಶಾಂತ್ ಹಾಗೂ ಪ್ರಿಯಾ ಅವರ ಮದುವೆಯಲ್ಲಿ ರೇಣುಕಾಚಾರ್ಯ ಪಾಲ್ಗೊಂಡಿದ್ದು, ಬಳಿಕ ಮದುವೆ ದಿಬ್ಬಣ ಹೊತ್ತ ಟ್ರ್ಯಾಕ್ಟರ್ ಅನ್ನು ಚಲಾಯಿಸಿದ್ದಾರೆ. ಇದನ್ನೂ ಓದಿ: ಅಭಿಮಾನಿ ಮಗುವಿಗೆ ತಮ್ಮದೇ ಹೆಸರನ್ನಿಟ್ಟ ಸಿದ್ದರಾಮಯ್ಯ

ಇಂದು ದಾವಣಗೆರೆಯ ಬೆಳೆ ಹಾನಿ ಪ್ರದೇಶಗಳಿಗೆ ರೇಣುಕಾಚಾರ್ಯ ಭೇಟಿ ನೀಡಿದ್ದು, ಬಳಿಕ ಮದುವೆಗೆ ತೆರಳಿದ್ದರು. ಮದುವೆಯ ದಿಬ್ಬಣದಲ್ಲಿ ಟ್ರ್ಯಾಕ್ಟರ್ ಚಲಾಯಿಸಿದ ಬಳಿಕ ರೇಣುಕಾಚಾರ್ಯ ನವಜೋಡಿಗೆ ಆಶೀರ್ವದಿಸಿದರು.

Advertisements
Advertisements
Exit mobile version