ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದ (Renukaswamy Case) ತನಿಖೆ ಭರದಿಂದ ಸಾಗುತ್ತಿದೆ. ಪ್ರಕರಣ ಸಂಬಂಧ ಇಂದು ಹಾಸ್ಯನಟ ಚಿಕ್ಕಣ್ಣ ಅವರನ್ನು ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸ್ಟೋನಿ ಬ್ರೂಕ್ ಗೆ (Stonny Brook) ಹೋಗಿದ್ದ ಬಗ್ಗೆ ವಿಚಾರಣೆಯ ವೇಳೆ, ನನ್ನನ್ನು ದರ್ಶನ್ (Challenging Star Darshan) ಅವರು ಊಟಕ್ಕೆ ಕರೆದಿದ್ದರು. ಹೀಗಾಗಿ ಊಟಕ್ಕೆ ಹೋಗಿದ್ದೇನೆ. ಇದು ಬಿಟ್ಟು ಬೇರೆ ಯಾವುದರ ಬಗ್ಗೆಯೂ ನನಗೆ ಮಾಹಿತಿ ಇಲ್ಲ ಎಂದು ಚಿಕ್ಕಣ್ಣ ಪೊಲೀಸರ ಮುಂದೆ ಹೇಳಿದ್ದಾರೆ.
ಊಟ ಮಾಡಿಕೊಂಡು ನಾನು ಅಲ್ಲಿಂದ ಹೊರಟೆ. ಅಲ್ಲಿ ಏನಾಯ್ತು ಅನ್ನೋದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ರೇಣುಕಾಸ್ವಾಮಿ ಬಗ್ಗೆ ಯಾವುದೇ ವಿಚಾರದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಟಿವಿಗಳಲ್ಲಿ ಬಂದ ಮೇಲೆಯೇ ನಂಗೆ ಈ ವಿಚಾರದ ಬಗ್ಗೆ ಗೊತ್ತಾಯ್ತು. ಹೀಗಾಗಿ ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ದರ್ಶನ್, ಚಿಕ್ಕಣ್ಣ ಕರೆತಂದು ಸ್ಟೋನಿಬ್ರೂಕ್ ಪಬ್‌ನಲ್ಲಿ ಸ್ಥಳ ಮಹಜರು – ಮೂಲೆಮೂಲೆಯನ್ನೂ ಜಾಲಾಡಿದ ಪೊಲೀಸರು!
ನಾನು ದರ್ಶನ್ ಗೆಳೆಯ. ಹೀಗಾಗಿ ಸಾಮಾನ್ಯವಾಗಿ ಊಟಕ್ಕೆ ಸೇರುತ್ತಿರುತ್ತೇವೆ. ಅವತ್ತು ಕೂಡ ನನ್ನ ಊಟಕ್ಕೆ ಕರೆದಿದ್ದರು ನಾನು ಹೋಗಿದ್ದೆ ಅಷ್ಟೇ ಎಂದು ಪ್ರಕರಣ ಸಂಬಂಧ ಚಿಕ್ಕಣ್ಣ (Comedy Actor Chikkanna) ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ದರ್ಶನ್ ಗ್ಯಾಂಗ್ ಅಂದರ್ – ಹಾಸ್ಯ ನಟ ಚಿಕ್ಕಣ್ಣಗೆ ನೋಟಿಸ್
ಪ್ರಕರಣದಲ್ಲಿ ಇಂದು ಚಿಕ್ಕಣ್ಣ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ ಈ ನೋಟಿಸ್‌ಗೆ ಚಿಕ್ಕಣ್ಣ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ಸ್ಟೋನಿ ಬ್ರೂಕ್‌ಗೆ ಪೊಲೀಸರು ಸ್ಥಳ ಮಹಜರಿಗೆ ತೆರಳಿದ್ದಾಗ ಚಿಕ್ಕಣ್ಣ ಅಲ್ಲಿದ್ದರು. ಹೀಗಾಗಿ ಪೊಲೀಸರು ಹಾಸ್ಯನಟನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆತಂದು ಸತತ ಮೂರುವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.