ಟಾಲಿವುಡ್ ನಟ ಪವನ್ ಕಲ್ಯಾಣ್ (Pawan Kalyan) ಮಾಜಿ ಪತ್ನಿ ರೇಣು ದೇಸಾಯಿ (Renu Desai) ಅವರು ತಾವ್ಯಾಕೆ 2ನೇ ಮದುವೆಯಾಗಿಲ್ಲ (Wedding) ಎಂಬುದರ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ನನ್ನ ಮಕ್ಕಳ ಬಗ್ಗೆ ನನಗಿರುವ ಜವಾಬ್ದಾರಿಯಿಂದ ನಾನು 2ನೇ ಮದುವೆ ಆಗದಂತೆ ತಡೆಯುತ್ತಿದೆ ಎಂದಿದ್ದಾರೆ.
ಎರಡನೇ ಮದುವೆ ಬಗ್ಗೆ ರೇಣು ದೇಸಾಯಿ ಮಾತನಾಡಿ, ಖಂಡಿತ ನನಗೂ ಒಬ್ಬ ಸಂಗಾತಿ ಬೇಕು ಅಂತ ಅನಿಸುತ್ತಿದೆ. ಆದರೆ ನನ್ನ ಮಕ್ಕಳ ಬಗ್ಗೆ ನನಗಿರುವ ಜವಾಬ್ದಾರಿಯಿಂದ ನಾನು 2ನೇ ಮದುವೆ ಆಗದಂತೆ ತಡೆಯುತ್ತಿದೆ. ಇದರ ಹೊರತಾಗಿ ನೋಡಿದರೆ ಹೌದು, ನನಗೆ ಒಬ್ಬ ಗೆಳೆಯ ಇರಬೇಕು. ನಾನು ಕೂಡ ಮದುವೆ ಆಗಬೇಕು, ನನಗೆ ಒಂದು ಜೀವನ ಇರಬೇಕು. ಆದರೆ ನಾನು ಅದನ್ನು ನನ್ನ ಮಕ್ಕಳ ದೃಷ್ಟಿಕೋನದಿಂದ ಯೋಚಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ಈ ವರ್ಷವೇ ನನ್ನ ಮದುವೆ: ಹುಡುಗನ ಬಗ್ಗೆ ಅನುಶ್ರೀ ಮಾತು
ಪವನ್ ಕಲ್ಯಾಣ್ ಜೊತೆಗಿನ ಡಿವೋರ್ಸ್ ಬಳಿಕ 2018ರಲ್ಲಿ ಓರ್ವ ವ್ಯಕ್ತಿಯೊಂದಿಗೆ ರೇಣು ದೇಸಾಯಿಗೆ ನಿಶ್ಚಿತಾರ್ಥ ಆಗಿತ್ತು. ಈ ಸಂಬಂಧ ಕೂಡ ಅಂತ್ಯವಾದ ಬಗ್ಗೆ ಮಾತನಾಡಿ ನಾನು ಮತ್ತೆ ಪ್ರಯತ್ನಿಸಿದೆ. ನನಗೆ ನಿಶ್ಚಿತಾರ್ಥವಾಗಿತ್ತು. ಈ ಸಂಬಂಧದಿಂದ ನನ್ನ ಮಕ್ಕಳಿಗೆ ನಾನು ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ನಾನು ಅರಿತುಕೊಂಡೆ. ಈಗಾಗಲೇ ಮಕ್ಕಳನ್ನು ಹೊಂದಿರುವಾಗ, ಬೇರೆ ವ್ಯಕ್ತಿಯೊಂದಿಗೆ ಹೊಸ ಜೀವನ ನಡೆಸುವುದು ಸೂಕ್ಷ್ಮ ವಿಷಯ ಎಂದಿದ್ದಾರೆ. ನನ್ನ ಮಗಳು ದೊಡ್ಡವಳಾಗಲು ನಾನು ಕಾಯುತ್ತಿದ್ದೇನೆ. ಅವಳಿಗೆ ಈಗ 15 ವರ್ಷ, ಬಹುಶಃ ಅವಳು 18 ವರ್ಷವಾದ್ಮೇಲೆ ಮತ್ತು ಕಾಲೇಜಿಗೆ ಹೋದಾಗ ಈ ಬಗ್ಗೆ ಯೋಚಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಗಾಯಗಳಾಗಿದೆ: ಪುತ್ರನ ಹೆಲ್ತ್ ಬಗ್ಗೆ ಅಪ್‌ಡೇಟ್ ಕೊಟ್ಟ ಪವನ್ ಕಲ್ಯಾಣ್
ಅಂದಹಾಗೆ, ಪವನ್ ಕಲ್ಯಾಣ್ ಜೊತೆ 2009ರಲ್ಲಿ ರೇಣು ದೇಸಾಯಿ ಮದುವೆಯಾದರು. ಕೆಲ ಮನಸ್ತಾಪಗಳಿಂದ 2012ರಲ್ಲಿ ಡಿವೋರ್ಸ್ ಪಡೆದರು. ಇವರ ದಾಂಪತ್ಯಕ್ಕೆ ಇಬ್ಬರು ಮಕ್ಕಳು ಸಾಕ್ಷಿಯಾಗಿದ್ದಾರೆ.