ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮನೆಗಳ ಬಾಡಿಗೆ (Rent House) ಹೆಚ್ಚಾಗಿದೆ. ಸಂಬಳದ ಅರ್ಧ ಭಾಗ ಬಾಡಿಗೆಗೆನೇ ಕಟ್ಟೋ ಸ್ಥಿತಿ ನಿರ್ಮಾಣವಾಗಿದೆ.
Advertisement
ಬೆಂಗಳೂರಿನಲ್ಲಿ ದಿನೇ ದಿನೇ ಮನೆ ಬಾಡಿಗೆ ಹೆಚ್ಚುತ್ತಿದೆ. ಶೇ.40 ರಷ್ಟು ಬಾಡಿಗೆ ಹೆಚ್ಚಾಗಿದ್ದು, ಬಾಡಿಗೆದಾರರು ಕಂಗಾಲಾಗುತ್ತಿದ್ದಾರೆ. ದುಡಿದ ಅರ್ಧ ದುಡ್ಡೆಲ್ಲ ಬಾಡಿಗೆಗೆನೇ ಸುರಿಯಬೇಕಾಗಿದೆ. ಕೊರೋನಾ (Corona Virus) ನಂತರ ವರ್ಕ್ ಫ್ರಮ್ ಹೋಮ್ ಗೆ ಕಂಪನಿಗಳು ಬ್ರೇಕ್ ಕೊಟ್ಟು, ಆಫ್ ಲೈನ್ ಕೆಲಸಕ್ಕೆ ಮುಂದಾಗಿವೆ. ಹೀಗಾಗಿ ಬಹುತೇಕ ಜನ ನಗರಕ್ಕೆ ಮರಳಿದ್ದಾರೆ. ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಸರ್ಕಾರವೇ ದರ ನಿಗದಿ ಮಾಡಬೇಕೆಂದು ಬಾಡಿಗೆದಾರರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಮಾಜಿ ಸಂಸದರಾದ ಮುದ್ದಹನುಮೇಗೌಡ, ನಟ ಶಶಿಕುಮಾರ್ ಬಿಜೆಪಿ ಸೇರ್ಪಡೆ
Advertisement
Advertisement
ಬಾಡಿಗೆ ಹೆಚ್ಚಳ ಮಾಡಿರುವ ಬಗ್ಗೆ ಮನೆ ಮಾಲೀಕರು ಕೂಡ ತಮ್ಮದೇ ಕಷ್ಟಗಳನ್ನ ತೋಡಿಕೊಂಡಿದ್ದಾರೆ. ಕೋವಿಡ್ ಟೈಂನಲ್ಲಿ ಸರ್ಕಾರ ನಮ್ಮ ಕೈ ಹಿಡಿಲಿಲ್ಲ. ದುಬಾರಿ ಬಾಡಿಗೆ ಕೊಡ್ತಿರೋದು ನಮ್ಮ ಕೈಗೆ ಬರುತ್ತಿಲ್ಲ. ಸರ್ಕಾರಕ್ಕೆನೇ ಟ್ಯಾಕ್ಸ್ ಆಗಿ ಹೋಗ್ತಿದೆ. ಕೋವಿಡ್ ಸಮಯದಲ್ಲಿ ಸರ್ಕಾರ, ಟ್ಯಾಕ್ಸ್ ಕಡಿಮೆ ಮಾಡಲಿಲ್ಲ, ಕರೆಂಟ್, ವಾಟರ್ ಬಿಲ್ ಕಡಿಮೆ ಮಾಡಲಿಲ್ಲ. ಬ್ಯಾಂಕ್ ಗಳಲ್ಲಿದ್ದ ಸಾಲದ ಬಡ್ಡಿಯನ್ನು ಕಡಿಮೆ ಮಾಡಿಲ್ಲ. ಸರ್ಕಾರ ಇದೆಲ್ಲದರ ಬಗ್ಗೆ ಗಮನ ಹರಿಸಿದ್ರೆ, ನಾವು ಬಾಡಿಗೆ ಇಳಿಸ್ತೀವಿ ಎಂದು ಮಾಲೀಕರು ಹೇಳುತ್ತಿದ್ದಾರೆ.
Advertisement
ಪೆಟ್ರೋಲ್, ತರಕಾರಿ, ಗ್ಯಾಸ್ ಹೀಗೆ ಬೆಲೆ ಏರಿಕೆಯ ಬಿಸಿಯಲ್ಲಿರುವ ಜನರಿಗೆ, ದಿನೆ ದಿನೇ ಏರಿಕೆಯಾಗ್ತಿರೋ ಬಾಡಿಗೆ ಮನೆಗಳ ದರದಿಂದ ಬಾಡಿಗೆದಾರರು ಆಕ್ರೋಶಗೊಂಡಿದ್ದಾರೆ. ಸರ್ಕಾರವೇ ಬಾಡಿಗೆ ಮನೆಗಳಿಗೆ ಹಣವನ್ನ ನಿಗದಿ ಮಾಡಿದ್ರೆ, ಅದೆಷ್ಟೋ ಜನ್ರಿಗೆ ಉಪಯೋಗವಾಗಲಿದೆ. ಇದನ್ನೂ ಓದಿ: ನನ್ನ ತಮ್ಮನ ಮಗ ಕಿಡ್ನ್ಯಾಪ್ ಆಗಿದ್ದಾನೆ: ರೇಣುಕಾಚಾರ್ಯ