ಕನ್ನಡದ ಹೆಸರಾಂತ ಹಾಸ್ಯನಟ ಚಿಕ್ಕಣ್ಣ ಸ್ಯಾಂಡಲ್‌ವುಡ್‌ನ ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಕೂಡ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಅವರು ಹೀರೋ ಆಗಿ ಲಾಂಚ್ ಆಗಿದ್ದಾರೆ. ಈ ಹಿಂದೆ ಶರಣ್ ಜೊತೆ ಚಿಕ್ಕಣ್ಣ ‘ಅಧ್ಯಕ್ಷ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಮುಂದುವರಿದ ಭಾಗವೇ ‘ಉಪಾಧ್ಯಕ್ಷ’ ಸಿನಿಮಾವಂತೆ.
ಅಧ್ಯಕ್ಷ ಸಿನಿಮಾದಲ್ಲಿ ಶರಣ್ ಅಧ್ಯಕ್ಷನಾಗಿ ರಂಜಿಸಿದ್ದರೆ, ಚಿಕ್ಕಣ್ಣ ಉಪಾಧ್ಯಕ್ಷನಾಗಿ ನಗೆಯ ಕಚಗುಳಿ ಇಟ್ಟಿದ್ದರು. ಇಬ್ಬರದ್ದೂ ಲವ್ ಸ್ಟೋರಿ ಬೇರೆ ಇತ್ತು. ಅಧ್ಯಕ್ಷ ಸಿನಿಮಾದಲ್ಲಿ ಶರಣ್‌ಗೆ ಮದುವೆ ಆಗುತ್ತದೆ. ಆನಂತರ ನಡೆಯುವ ಕಥೆಯೇ ಉಪಾಧ್ಯಕ್ಷ ಸಿನಿಮಾವಂತೆ. ಹಾಗಾಗಿ ಈ ಸಿನಿಮಾದಲ್ಲಿ ಕೇವಲ ಚಿಕ್ಕಣ್ಣ ಮಾತ್ರ ಇರಲಿದ್ದಾರೆ. ಇದನ್ನೂ ಓದಿ: ಅಮ್ಮ ಅಂತಾ ಎಷ್ಟೇ ಹೇಳಿಕೊಟ್ಟರೂ ಕೊನೆಗೆ ಅಪ್ಪ ಎಂದು ಕರೆದ ರಾಯನ್
ಇಂದಿನಿಂದ ಸಿನಿಮಾದ ಶೂಟಿಂಗ್ ಶುರುವಾಗಲಿದ್ದು, ಚಂದ್ರಮೋಹನ್ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ. ಉಮಾಪತಿ ಈ ಸಿನಿಮಾದ ನಿರ್ಮಾಪಕರು. ಅಂದುಕೊಂಡಂತೆ ಆಗಿದ್ದರೆ, ಈ ಮೊದಲೇ ಸಿನಿಮಾದ ಶೂಟಿಂಗ್ ನಡೆಯಬೇಕಿತ್ತು. ಕೊರೊನಾ ಕಾರಣದಿಂದಾಗಿ ತಡವಾಯಿತು. ಇದೀಗ ಪಕ್ಕಾ ಸಿದ್ಧತೆಯೊಂದಿಗೆ ಸಿನಿಮಾ ಟೀಮ್ ಚಿತ್ರೀಕರಣಕ್ಕೆ ತೆರಳುತ್ತಿದೆ. ಮೊದಲ ಹಂತದ ಶೂಟಿಂಗ್ ಮೈಸೂರು ಸುತ್ತಮುತ್ತ ನಡೆಯಲಿದೆಯಂತೆ.