Bengaluru CityCinemaKarnatakaLatestMain PostSandalwood

ಅಮ್ಮ ಅಂತಾ ಎಷ್ಟೇ ಹೇಳಿಕೊಟ್ಟರೂ ಕೊನೆಗೆ ಅಪ್ಪ ಎಂದು ಕರೆದ ರಾಯನ್

Advertisements

ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ಮಗ ರಾಯನ್ ಆರೈಕೆಯ ಜೊತೆ ಸಿನಿಮಾ ರಂಗಕ್ಕೆ ಮತ್ತೆ ಕಮ್‌ಬ್ಯಾಕ್ ಆಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಗನ ಹೊಸ ವಿಡಿಯೋವೊಂದು ಶೇರ್ ಮಾಡಿದ್ದಾರೆ.

ಪತಿಯ ನಿಧನ ನೋವು ನಂತರ ಮಗನ ಆಗಮನ ಇದನ್ನೆಲ್ಲಾ ಮೆಟ್ಟಿ ನಿಂತು ಇದೀಗ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಸಿನಿಮಾ ಮತ್ತು ತಾಯಿಯ ಜವಾಬ್ದಾರಿಯನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ಇನ್ನು ಆಗಾಗ ಮಗನ ಫೋಟೋ ಮತ್ತು ವಿಡಿಯೋ ಶೇರ್ ಮಾಡುವ ನಟಿ ಮೇಘನಾ ಮತ್ತೆ ರಾಯನ್ ಹೊಸ ವಿಡಿಯೋವೊಂದು ಶೇರ್ ಮಾಡಿದ್ದಾರೆ. ಅಮ್ಮ ಎಂದು ಕರೆಯುವುದನ್ನು ಮೇಘನಾ ಹೇಳಿಕೊಟ್ಟಿದ್ದಾರೆ. ಒಂದೆರೆಡು ಬಾರಿ ಅಮ್ಮ ಅಂತಾ ಕರೆದು ಮತ್ತೆ ಅಪ್ಪ ಎಂದು ರಾಯನ್ ಕರೆದಿದ್ದಾನೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಸಿನಿಮಾ ನೋಡಿ ಕಣ್ಣೀರು ಹಾಕಿದರೆ, ಜನ ಅವರ ಸರಕಾರ ನೋಡಿ ಕಣ್ಣೀರಿಡುತ್ತಿದ್ದಾರೆ: ನಟ ಚೇತನ್

 

View this post on Instagram

 

A post shared by Meghana Raj Sarja (@megsraj)

ಪತಿಯ ಅಗಲಿಕೆಯ ನಂತರ ರಾಯನ್ ಆಗಮನದಿಂದ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ರಾಯನ್‌ನ ನೋಡಿ ಚಿರು ಅಗಲಿಕೆಯ ನೋವು ಮರೆಯುತ್ತಿದ್ದಾರೆ. ಒಟ್ನಲ್ಲಿ ರಾಯನ್ ಅಪ್ಪ ಎಂದಿರೋ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

Live Tv

Leave a Reply

Your email address will not be published.

Back to top button