ಒಟ್ಟಾವಾ: ಸಂಭೋಗದ ವೇಳೆ ಸಂಗಾತಿಯ ಅನುಮತಿಯಿಲ್ಲದೇ ಕಾಂಡೋಮ್ ತೆಗೆಯುವುದು ಅಪರಾಧ ಎಂದು ಕೆನಡಾದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
Advertisement
ಲೈಂಗಿಕತೆಯ ವೇಳೆ ತನಗೆ ತಿಳಿಸದೇ ಕಾಂಡೋಮ್ ತೆಗೆದು ಹೆಚ್‌ಐವಿ ಸೋಂಕಿಗೆ ತುತ್ತಾಗುವಂತೆ ಮಾಡಿದ ವ್ಯಕ್ತಿಯೋರ್ವನ ವಿರುದ್ಧ ಮಹಿಳೆಯೊಬ್ಬರು ನೀಡಿದ ದೂರಿನ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಇದನ್ನೂ ಓದಿ: ಕೋವಿಡ್ ರೋಗಿ ಬೇರೆ ಕಾರಣಗಳಿಂದ ಸಾವನ್ನಪ್ಪಿದರೂ ಕೋವಿಡ್ ಸಾವೆಂದೇ ಪರಿಗಣನೆ: ಅಲಹಾಬಾದ್ ಹೈಕೋರ್ಟ್
Advertisement
Advertisement
2017ರಲ್ಲಿ ಆನ್‌ಲೈನ್‌ನಲ್ಲಿ ಪರಿಚಯವಾದ ಮಹಿಳೆ ಮತ್ತು ಪುರುಷ ತಾವು ಲೈಂಗಿಕವಾಗಿ ಹೊಂದಿಕೊಳ್ಳುತ್ತೇವೆಯೇ ಎಂಬುದನ್ನು ತಿಳಿಯಲು ಸಂದಿಸಿದ್ದಾರೆ. ಈ ಸಂದರ್ಭದಲ್ಲಿ ವ್ಯಕ್ತಿ ಕಾಂಡೋಮ್ ಇಲ್ಲದೇ ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದಾನೆ. ಇದನ್ನು ಪ್ರಶ್ನಿಸಿದ ಮಹಿಳೆ ಆತನ ವಿರುದ್ಧ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಕೆಳಹಂತದ ಕೋರ್ಟ್ನಲ್ಲಿ ನಡೆದ ವಿಚಾರಣೆಯಲ್ಲಿ, ಕಾಂಡೋಮ್ ಇಲ್ಲದೆಯೂ ಲೈಂಗಿಕತೆಗೆ ಆಕೆ ಅನುಮತಿಸಿದ್ದಳು ಎಂದು ಆರೋಪಿ ವಾದಿಸಿದ್ದ. ಇದನ್ನು ಅಂಗೀಕರಿಸಿದ್ದ ಕೋರ್ಟ್ ಪ್ರಕರಣವನ್ನು ಅಲ್ಲಿಗೇ ವಜಾಗೊಳಿಸಿತ್ತು.
Advertisement
ಕೆಳಹಂತದ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಹಿಳೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಳು. ಆತನ ತಪ್ಪಿನಿಂದಾಗಿ ತಾನೀಗ ಹೆಚ್‌ಐವಿ ಸೋಂಕಿಗೆ ತುತ್ತಾಗಿದ್ದೇನೆ ಎಂದು ಮೇಲ್ಮನವಿ ಸಲ್ಲಿಸಿದ್ದಳು. ವಿಚಾರಣೆ ನಡೆಸಿದ ಕೋರ್ಟ್ ಇಬ್ಬರ ವೈಯಕ್ತಿಕ ಕ್ರಿಯೆಯಲ್ಲಿ ಪುರುಷ ಮಹಿಳೆಗೆ ತಿಳಿಸದೇ ಕಾಂಡೋಮ್ ತೆಗೆದಿರುವುದು ಸರಿಯಲ್ಲ. ಇದು ಆಕೆಯ ಅನುಮತಿಯನ್ನು ಪಡೆಯದೇ ಮಾಡಿರುವುದು, ಹಾಗಾಗಿ ಅಪರಾಧವಾಗುತ್ತದೆ ಅಪರಾಧ ಎಂದು ಹೇಳಿತು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ PFI ಕೈವಾಡ ಶಂಕೆ ವ್ಯಕ್ತಪಡಿಸಿದ ಕೇಂದ್ರ ಸಚಿವೆ ಶೋಭಾ
ಲೈಂಗಿಕ ಕ್ರಿಯೆಯು ಮೂಲಭೂತವಾಗಿ ಮತ್ತು ಗುಣಾತ್ಮಕವಾಗಿ ವಿಭಿನ್ನ ದೈಹಿಕ ಕ್ರಿಯೆ. ಇದು ಸುರಕ್ಷಿತ ವಿಧಾನವೂ ಹೌದು. ಅದನ್ನು ಮೀರಿ ಅನುಮತಿ ರಹಿತವಾಗಿ ಪಾಲ್ಗೊಂಡಿರುವುದು ಸರಿಯಲ್ಲ. ಇಲ್ಲಿ ಷರತ್ತು ಉಲ್ಲಂಘನೆಯಾಗಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಬ್ರಿಟನ್ ಮತ್ತು ಸ್ವಿಟ್ಜರ್‌ಲೆಂಡ್‌ನ ಉನ್ನತ ನ್ಯಾಯಾಲಯಗಳು ಕೂಡ ಸಂಭೋಗದ ಸಮಯದಲ್ಲಿ ಕಾಂಡೋಮ್‌ಗಳನ್ನು ತೆಗೆದ ಪ್ರಕರಣದಲ್ಲಿ ಅಂಥವರನ್ನು `ಅಪರಾಧಿಗಳು’ ಎಂದು ತೀರ್ಪಿತ್ತಿರುವುದು ಇಲ್ಲಿ ಉಲ್ಲೇಖಾರ್ಹ ಎಂದು ಕೋರ್ಟ್ ಹೇಳಿದೆ.