ಭೋಪಾಲ್: ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಬಾಲಿವುಡ್ ನಟಿ ಸನ್ನಿ ಲಿಯೋನ್, ಗಾಯಕರಾದ ಶರೀಬ ಮತ್ತು ತೋಶಿ ಅವರಿಗೆ, ‘ಮಧುಬನ್ ಮೇ ರಾಧಿಕಾ ಜೈಸೆ ಜಂಗಲ್ ಮೆ ನಾಚೇ ಮೋರ್’ ಹಾಡನ್ನು ತೆಗೆದು 3 ದಿನದಲ್ಲಿ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಾಡು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ. ಕೆಲವರು ನಿರಂತರವಾಗಿ ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಹಿಂದೂಗಳು ಮಾ ರಾಧೆಯನ್ನು ಪೂಜಿಸುತ್ತಾರೆ. ಇಂತಹ ಹಾಡುಗಳಿಂದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಸೋಮವಾರ ಯಾದಗಿರಿಯಲ್ಲಿ ಚುನಾವಣೆ – ಪೊಲೀಸ್ ಇಲಾಖೆ ಸಜ್ಜು
Advertisement
Advertisement
ಈ ಹಾಡಿನ ಆರಂಭಿಕ ಕೆಲವು ಸಾಲುಗಳು 1960 ರ ‘ಕೊಹಿನೂರ್’ ಚಿತ್ರದ ಸಾಂಪ್ರದಾಯಿಕ ಮಧುಬನ್ ಮೇ ರಾಧಿಕಾ ನಾಚಿ ರೇ ಹಾಡಿನೊಂದಿಗೆ ಹೊಂದಾಣಿಕೆ ಆಗುತ್ತದೆ. ಈ ಹಾಡನ್ನು ಮೊಹಮ್ಮದ್ ರಫಿ ಅವರು ಹಾಡಿದ್ದು ಈ ಹಾಡಿನ ಮುಖ್ಯ ಭೂಮಿಕೆಯ ಪಾತ್ರದಲ್ಲಿ ದಿವಂಗತ ದಿಲೀಪ್ ಕುಮಾರ್ ಕಾಣಿಸಿಕೊಂಡಿದ್ದರು.
Advertisement
ಇದೇ ಶನಿವಾರದಂದು ಮಥುರಾದಲ್ಲಿ ಹಿಂದೂ ಅರ್ಚಕರು ಸನ್ನಿ ಲಿಯೋನ್ ಅವರ ಈ ಆಲ್ಬಂ ಹಾಡನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದರು. ಈ ಹಾಡಿನಲ್ಲಿ ಅಶ್ಲೀಲ ನೃತ್ಯ ಮಾಡುವ ಮೂಲಕ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ರಸ್ತೆ, ರಸ್ತೆಯಲ್ಲಿ ಕುಣಿಯುವುದಕ್ಕೆ ಬ್ರೇಕ್ ಹಾಕಿ ಬಾರ್, ರೆಸ್ಟೋರೆಂಟ್ ನಿಯಮ ಸಡಿಲಿಸಿ: ಗೋವಿಂದರಾಜ್ ಹೆಗ್ಡೆ
ಈ ಹಿಂದೆ ಮಿಶ್ರಾ ಅವರು ಅಕ್ಟೋಬರ್‍ನಲ್ಲಿ, ಮಂಗಳಸೂತ್ರದ ‘ಆಕ್ಷೇಪಾರ್ಹ ಮತ್ತು ಅಶ್ಲೀಲ’ ಚಿತ್ರಣವಿರುವ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರು ಫ್ಯಾಷನ್ ಮತ್ತು ಆಭರಣ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ ಅವರಿಗೆ 24 ಗಂಟೆಗಳ ಕಾಲಾವಧಿ ನೀಡಿದ್ದು, ಇಲ್ಲದಿದ್ದರೆ ಶಾಸನಬದ್ಧ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.