ನೋಮ್ ಪೆನ್: ಥೈಲ್ಯಾಂಡ್ ಶನಿವಾರ ತಡರಾತ್ರಿ ಕಾಂಬೋಡಿಯಾ ಜೊತೆಗಿನ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಘೋಷಿಸಿತು.
ಥೈಲ್ಯಾಂಡ್ ಜೊತೆಗಿನ ಗಡಿ ಸಂಘರ್ಷವನ್ನು ನಿಲ್ಲಿಸಲು ಕಾಂಬೋಡಿಯಾ ಕದನ ವಿರಾಮದ ಬಗ್ಗೆ ಚರ್ಚಿಸಲು ಸಿದ್ಧವಾಗಿದೆ ಎಂದು ಪ್ರಧಾನಿ ಹನ್ ಮಾನೆಟ್ ಭಾನುವಾರ ಹೇಳಿದ್ದಾರೆ. ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶವನ್ನು ಸ್ವಾಗತಿಸಿದ್ದಾರೆ.
ಥೈಲ್ಯಾಂಡ್ ಜನರೊಂದಿಗೆ ಸಮನ್ವಯ ಸಾಧಿಸಲು ತಮ್ಮ ವಿದೇಶಾಂಗ ಸಚಿವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಮಾತನಾಡುತ್ತಾರೆ ಎಂದು ಹನ್ ಮಾನೆಟ್ ಹೇಳಿದ್ದಾರೆ. ಆದರೆ, ಯಾವುದೇ ಒಪ್ಪಂದವನ್ನು ರದ್ದುಗೊಳಿಸುವುದರ ವಿರುದ್ಧ ಬ್ಯಾಂಕಾಕ್‌ಗೆ ಎಚ್ಚರಿಕೆ ನೀಡಿದ್ದಾರೆ.
ಭಾರತ-ಪಾಕಿಸ್ತಾನ ರೀತಿಯಲ್ಲಿಯೇ ಕಾಂಬೋಡಿಯಾ-ಥಾಯ್ಲೆಂಡ್ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ. ವ್ಯಾಪಾರ ಒಪ್ಪಂದದ ಎಚ್ಚರಿಕೆ ನೀಡಿ ಕದನ ವಿರಾಮ ಘೋಷಿಸುವಂತೆ ಮಾಡಿದ್ದೇವೆ ಎಂದು ಟ್ರಂಪ್ ತಿಳಿಸಿದ್ದಾರೆ.
ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ, ಕಾಂಬೋಡಿಯಾ ಮತ್ತು ಥಾಯ್ಲೆಂಡ್‌ನ ಪ್ರಧಾನಿಗಳ ಜೊತೆ ಮಾತನಾಡಿದೆ. ಯುದ್ಧ ನಿಲ್ಲುವ ತನಕ ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡುವುದಿಲ್ಲ ಎಂದು ಹೇಳಿ ಕದನ ವಿರಾಮಕ್ಕೆ ಒಪ್ಪಿಸಿದೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಹಿಂದೂ ದೇಗುಲ ವಿಚಾರಕ್ಕಾಗಿ ಕಾಂಬೋಡಿಯಾ ಮತ್ತು ಥಾಯ್ಲೆಂಡ್ ಗಡಿಯಲ್ಲಿ ಸಂಘರ್ಷ ನಡೆಯುತ್ತಿದೆ. ಯುದ್ಧದಿಂದಾಗಿ 33 ಮಂದಿ ಬಲಿಯಾಗಿದ್ದಾರೆ.