ಹಾಸನ: ದೇವಾಲಯದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ರೂಢಿ, ಸಂಪ್ರದಾಯ, ಪದ್ಧತಿಗಳನ್ನು ಮೀರಲು ಅಧಿಕಾರವಿರುವುದಿಲ್ಲ ಎಂದು ಧಾರ್ಮಿಕದತ್ತಿ ಇಲಾಖೆ ಸ್ಪಷ್ಟಪಡಿಸಿದೆ.
Advertisement
ಬೇಲೂರು ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ತೇರಿನ ದಿನ ಕುರಾನ್ ಪಠಣೆ ಮಾಡುವ ವಿಚಾರವಾಗಿ ಎದ್ದಿರುವ ವಿವಾದಕ್ಕೆ ಇಲಾಖೆ ಸ್ಪಷ್ಟನೆ ನೀಡಿದೆ. ಚನ್ನಕೇಶವಸ್ವಾಮಿಗೆ ತೇರಿನ ದಿನ ಕುರಾನ್ ಪಠಣೆ ಮಾಡುವ ವಿಚಾರವಾಗಿ ವಿವಾದವಾಗಿತ್ತು. ಈ ವಿಷಯವನ್ನು ರಾಜ್ಯ ಮುಜರಾಯಿ ಇಲಾಖೆ ಆಯುಕ್ತರಾದ ರೋಹಿಣಿ ಸಿಂಧೂರಿ ಅವರ ಗಮನಕ್ಕೆ ತರಲಾಗಿದ್ದು, ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ವಿದ್ಯುಲ್ಲತಾ ತಿಳಿಸಿದ್ದರು. ಇದನ್ನೂ ಓದಿ: ಬೇಲೂರು ಗಳಿಗೆ ತೇರಿನ ದಿನ ಕುರಾನ್ ಪಠಣೆ ನಮ್ಮ ಕೈಪಿಡಿಯಲ್ಲೇ ಇದೆ: ಸಿಇಒ ವಿದ್ಯುಲ್ಲತಾ
Advertisement
ತೇರಿನ ದಿನ ಕುರಾನ್ ಪಠಣೆ ಮಾಡುವ ವಿಚಾರ ನಮ್ಮ ಕೈಪಿಡಿಯಲ್ಲೇ ಇದೆ. ಗಳಿಗೆ ತೇರಿನ ದಿನ ದೇವಾಲಯದ ಬಳಿ ನಿಂತು ಕುರಾನ್ ಪಠಣೆ ಮಾಡಲಾಗುತ್ತದೆ. ಪ್ರತಿ ವರ್ಷವೂ ಅದು ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಸ್ವಲ್ಪ ಚರ್ಚೆಗಳಾಗುತ್ತಿವೆ. ಹೀಗಾಗಿ ಗಳಿಗೆ ತೇರಿನ ದಿನ (ಚಿಕ್ಕತೇರು) ಕುರಾನ್ ಪಠಣೆ ನಡೆಯುವುದರ ಬಗ್ಗೆ ಆಯುಕ್ತರಾದ ರೋಹಿಣಿ ಸಿಂಧೂರಿಯವರ ಗಮನಕ್ಕೆ ತಂದಿದ್ದೇನೆ. ಅವರ ನಿರ್ದೇಶನದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದರು.
Advertisement
Advertisement
ಇದೀಗ ಈ ಬಗ್ಗೆ ಧಾರ್ಮಿಕದತ್ತಿ ಇಲಾಖೆ ಸ್ಪಷ್ಟನೆ ನೀಡಿದೆ. ದೇವಾಲಯದಲ್ಲಿ ಹಿಂದಿನಿಂದ ಬಂದಿರುವ ರೂಢಿ, ಸಂಪ್ರದಾಯ, ಪದ್ಧತಿಯನ್ನು ಮೀರಲು ಅಧಿಕಾರ ಇರುವುದಿಲ್ಲ. ಈ ಕಾರಣ ಸದರಿ ದೇವಾಲಯದಲ್ಲಿ ವಾರ್ಷಿಕ ಬ್ರಹ್ಮರಥೋತ್ಸವವನ್ನು ಆಗಮಶಾಸ್ತ್ರ ರೀತಿ ಹಾಗೂ ಹಿಂದಿನಿಂದ ನಡೆದುಬರುತ್ತಿರುವ ರೂಢಿಯಲ್ಲಿರುವ ಸಂಪ್ರದಾಯ ಪದ್ಧತಿಯಂತೆ ನಡೆಸಲು ಸೂಚಿಸಬಹುದಾಗಿರುತ್ತದೆ ಎಂದು ಆಯುಕ್ತರ ಪರವಾಗಿ ಧಾರ್ಮಿಕ ದತ್ತಿ ಇಲಾಖೆ ಸೂಚಿಸಿದೆ. ಇದನ್ನೂ ಓದಿ: ತಿರುಪತಿ ದೇಗುಲದಲ್ಲಿ ಕಾಲ್ತುಳಿತ – ವೆಂಕಟೇಶ್ವರನ ದರ್ಶನಕ್ಕೆ ಭಕ್ತಾದಿಗಳ ನೂಕುನುಗ್ಗಲು