-ಅಯೋಧ್ಯೆ, ಶ್ರೀರಾಮನ ಹೆಸರಿಡುವಂತೆ ಶಿಫಾರಸ್ಸು
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲೀಗ ಧರ್ಮ ಯುದ್ಧ ಶುರುವಾಗಿದ್ದು, ಕಾಂಗ್ರೆಸ್ ಸದಸ್ಯನಿಂದ ರಸ್ತೆಗಳಿಗೆ ಮುಸ್ಲಿಂ ಹೆಸರನ್ನು ಬದಲಾವಣೆಗೆ ಅನುಮೋದನೆ ಸಿಕ್ಕ ಬೆನ್ನಲ್ಲೇ, ಬಿಜೆಪಿಯು ಸಹ ಶ್ರೀರಾಮನ ಹೆಸರನ್ನು ಇಡುವಂತೆ ಕೌಂಟರ್ ಅಟ್ಯಾಕ್ ನೀಡಿದೆ.
ಹೌದು, ಬಿಬಿಎಂಪಿಯ ಬಾಪೂಜಿನಗರದ ಕಾಂಗ್ರೆಸ್ ಕಾರ್ಪೋರೇಟರ್ ಅಜ್ಮದ್ ಬೇಗ್ ತಮ್ಮ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಿಗೆ ಮುಸ್ಲಿಂ ಹೆಸರನ್ನಿಡಲು ಪಾಲಿಕೆಯಿಂದ ಅನುಮೋದನೆ ಪಡೆದುಕೊಂಡಿದ್ದರು. ಇದು ಸಾಕಷ್ಟು ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಕಾರ್ಪೋರೇಟರ್‍ಗೆ ಕೌಂಟರ್ ಕೊಡಲು ಬಿಜೆಪಿ ಸಿದ್ಧವಾಗಿದೆ.
Advertisement
Advertisement
ಗೋವಿಂದರಾಜ ನಗರದ ಬಿಜೆಪಿ ಕಾರ್ಪೋರೇಟರ್ ಉಮೇಶ್ ಶೆಟ್ಟಿ, ತಮ್ಮ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಿಗೆ ಅಂಜನಿಪುತ್ರ ರಸ್ತೆ, ಅಯೋಧ್ಯೆ ಹಾಗೂ ಶ್ರೀರಾಮ ಎಂದು ಮರುನಾಮಕರಣ ಮಾಡಲು ಬಿಬಿಎಂಪಿಗೆ ಶಿಫಾರಸ್ಸು ಮಾಡಿದ್ದಾರೆ. ಈ ಮೂಲಕ ಬಿಬಿಎಂಪಿಯಲ್ಲಿ ಇಷ್ಟು ದಿನ ಕಾಮಗಾರಿಗಳಿಗಾಗಿ ಕಿತ್ತಾಟ ನಡೆಸುತ್ತಿದ್ದ ಸದಸ್ಯರು, ಈಗ ಧರ್ಮಯುದ್ಧಕ್ಕಾಗಿ ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಅಪ್ಪ-ಅಮ್ಮನ ಹೆಸ್ರನ್ನೇ ರಸ್ತೆಗೆ ನಾಮಕರಣ ಮಾಡಲು ಮುಂದಾದ ಅಜ್ಮದ್ ಬೇಗ್
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv