ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಒಂದು ಕಡೆಗೆ ಗುಡ್ ನ್ಯೂಸ್, ಇನ್ನೊಂದು ಕಡೆಗೆ ಬ್ಯಾಡ್ ನ್ಯೂಸ್. ಅದೇನೆಂದರೆ ಒಂದೆಡೆ ಸೀಲ್ ಡೌನ್ ಓಪನ್, ಇನ್ನೊಂದೆಡೆ ಕ್ಲೋಸ್ ಮಾಡಲಾಗಿದೆ.
ಹೌದು. ಕೊರೊನಾ ಸೋಂಕು ಕಂಡುಬಂದಿದ್ದರಿಂದ ಬಾಪೂಜಿನಗರದಲ್ಲಿ ಹೇರಲಾಗಿದ್ದ ಸೀಲ್ ಡೌನ್ ಇಂದಿಗೆ ಮುಕ್ತಾಯವಾಗಲಿದ್ದು, ಪ್ರದೇಶದ ಜನ ನಿಟ್ಟುಸಿರು ಬಿಟ್ಟಂತಾಗಿದೆ. ಇತ್ತ ಶಿವಾಜಿನಗರದ ಚಾಂದಾನಿ ಚೌಕ್ ರಸ್ತೆಯನ್ನು ಇಂದಿನಿಂದ ಸೀಲ್ ಡೌನ್ ಮಾಡಲಾಗುತ್ತಿದ್ದು, ಇಂದಿನಿಂದ ಮನೆಯಿಂದ ಯಾರೂ ಹೊರಗೆ ಬರುವಂತಿಲ್ಲ.
Advertisement
Advertisement
ಈ ಮೂಲಕ ಒಂದು ಕಡೆ ಕೊರೊನಾದಿಂದ ರಿಲೀಫ್ ಸಿಕ್ಕರೆ ಮತ್ತೊಂದು ಕಡೆ ಕೊರೊನಾ ಆತಂಕ ಆರಂಭವಾಗಿದೆ. ಸೀಲ್ ಡೌನ್ ಮುಕ್ತವಾಗಿರುವುದರಿಂದ ಬಾಪೂಜಿನಗರದಲ್ಲಿ ಜನ ಅಡ್ಡಾದಿಡ್ಡಿ ಓಡಾಡಲು ಆರಂಭಿಸಿದ್ದಾರೆ. ಹೆಜ್ಜೆ ಹೆಜ್ಜೆಗೂ ಹಾಕಿದ್ದ ಎಲ್ಲ ಬ್ಲ್ಯಾಕ್‍ಗಳನ್ನು ಓಪನ್ ಮಾಡಲಾಗಿದೆ. ವಾಹನಗಳು ಒಳಗೆ, ಹೊರಗೆ ಹೋಗಲು ಅವಕಾಶ ನೀಡಲಾಗಿದೆ. ಪೊಲೀಸರು ಭದ್ರತೆ ಮಾತ್ರ ನೀಡುತ್ತಿದ್ದು, ಅಧಿಕೃತವಾಗಿ ಸಿಕ್ಕ ಮೇಲೆ ಎಲ್ಲ ಬ್ಯಾರಿಕೇಡ್ ಸಹ ಕ್ಲಿಯರ್ ಮಾಡಲಿದ್ದಾರೆ.
Advertisement
Advertisement
ಈ ಪ್ರದೇಶದಲ್ಲಿ ಕಳೆದ 28 ದಿನಗಳಿಂದ ಒಂದೇ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಬುಧವಾರಕ್ಕೆ ಕಂಟೈನ್ಮೆಂಟ್ ಅವಧಿ ಮುಕ್ತಾಯವಾಗಿದೆ. ಹೀಗಾಗಿ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಎಲ್ಲ ಬ್ಯಾರಿಕೇಡ್‍ಗಳನ್ನು ಓಪನ್ ಮಾಡಲಾಗಿದೆ. ಇದರಿಂದ ಬಾಪೂಜಿನಗರ ನಿವಾಸಿಗಳು ಫುಲ್ ಖುಷಿಯಾಗಿದ್ದು, ತಮ್ಮ ತಮ್ಮ ವಾಹನಗಳನ್ನು ರಸ್ತೆಗಿಳಿಸಿದ್ದಾರೆ. ಇತ್ತ ಅಗತ್ಯ ವಸ್ತುಗಳ ಮಾರಾಟ ಮಳಿಗೆ ಸಹ ಓಪನ್ ಮಾಡಲಾಗಿದ್ದು, ಈ ಮೂಲಕ ಸರಿ ಸುಮಾರು ಒಂದು ತಿಂಗಳ ಸಮಸ್ಯೆಗೆ ತೆರೆ ಬಿದ್ದಂತಾಗಿದೆ.