ಮುಂಬೈ: ವಿಶ್ವ ಅತ್ಯಂತ ಅಗ್ಗದ 4ಜಿ ಮೊಬೈಲ್ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಜಿಯೋ ತನ್ನ ಗ್ರಾಹಕರಿಗೆ ಮೊಬೈಲ್ ಫೋನ್‍ಗಳನ್ನು ಕೆಲವು ಷರತ್ತುಗಳನ್ನು ವಿಧಿಸಿ ವಿತರಣೆ ಮಾಡುತ್ತಿದೆ.
ಹೌದು, ಜಿಯೋ ಫೋನ್ ಬಿಡುಗಡೆಯಾಗುವ ಸಂದರ್ಭದಲ್ಲಿ ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಇದು ಉಚಿತ ಫೋನ್ ಆಗಿದ್ದು, 1500 ರೂ. ಪಾವತಿಸಿದರೆ ಮೂರು ವರ್ಷದ ಬಳಿಕ ಸಂಪೂರ್ಣ ಹಣವನ್ನು ಮರುಪಾವತಿಸಲಾಗುವುದು ಎಂದು ಘೋಷಿಸಿದ್ದರು. ಆದರೆ ಈಗ ಈ ಉಚಿತ ಫೋನ್ ಗಳನ್ನ ಪಡೆಯಲು ಜಿಯೋ ಮತ್ತಷ್ಟು ಷರತ್ತುಗಳನ್ನು ವಿಧಿಸಿದ್ದು ಆ ವಿವರಗಳನ್ನು ಇಲ್ಲಿ ನೀಡಲಾಗಿದೆ.
Advertisement
ಜಿಯೋ ಷರತ್ತುಗಳು:
1) ಜಿಯೋ 4ಜಿ ಸೇವೆಯನ್ನು ಪಡೆಯಲು ಪ್ರತಿ ವರ್ಷ ಕನಿಷ್ಟ 1500 ರೂ.ಗಳನ್ನು ರಿಚಾರ್ಜ್ ಮಾಡಿಸಿಕೊಳ್ಳಬೇಕು.
Advertisement
Advertisement
2) ಜಿಯೋ ಫೋನ್ ಸಿಮ್‍ಲಾಕ್ ಆಗಿರುತ್ತದೆ. ಅಂದರೆ ಗ್ರಾಹಕರು ಜಿಯೋ ಫೋನ್‍ನಲ್ಲಿ ಬೇರಾವುದೇ ಸಂಸ್ಥೆಯ ಸಿಮ್‍ಗಳನ್ನು ಬಳಸಲು ಸಾಧ್ಯವಿಲ್ಲ.
Advertisement
3) ಗ್ರಾಹಕರು ತಮ್ಮ ಜಿಯೋ ಫೋನ್‍ನ್ನು ಮರು ಮಾರಾಟ, ಗುತ್ತಿಗೆ, ನಿಯೋಜಿಸಲು ಮತ್ತು ವರ್ಗಾವಣೆ ಮಾಡಲು ಅವಕಾಶವನ್ನು ನೀಡಿಲ್ಲ. ಫೋನ್‍ನ ಎಲ್ಲಾ ಹಕ್ಕುಗಳು ಸಂಸ್ಥೆಗೆ ಸೇರಿರುತ್ತದೆ.
4) 12 ತಿಂಗಳ ಒಳಗಡೆ ಫೋನ್ ಹಿಂದಿರುಗಿಸಲು ಇಚ್ಚಿಸಿದರೆ 1550 ರೂ. ಹಾಗೂ ಜಿಎಸ್‍ಟಿ ಅಥವಾ ಇತರ ತೆರಿಗೆಯನ್ನು ಪಾವತಿಸಬೇಕು.
5) 12 ತಿಂಗಳ ನಂತರ 24 ತಿಂಗಳ ಒಳಗಡೆ ಮೊಬೈಲ್ ಹಿಂದಿರುಗಿಸಿದ್ದರೆ, 1000ರೂ. ಹಾಗೂ ಜಿಎಸ್‍ಟಿ ಇತರ ತೆರಿಗೆಯನ್ನು ಪಾವತಿಸಬೇಕು.
6) 24 ತಿಂಗಳ ನಂತರ 36 ತಿಂಗಳ ಒಳಗಡೆ ಮೊಬೈಲ್ ಹಿಂದಿರುಗಿಸಿದ ಸಂದರ್ಭದಲ್ಲಿ ಗ್ರಾಹಕರು ಜಿಎಸ್‍ಟಿ ತೆರಿಗೆ ಮತ್ತು 500ರೂ ಗಳನ್ನು ಪಾವತಿಸಬೇಕಿದೆ. ಪ್ರಸ್ತುತ ಮೊಬೈಲ್ ಬುಕ್ಕಿಂಗ್ ವೇಳೆಯೇ 1000 ರೂ. ಹಾಗೂ ಜಿಎಸ್‍ಟಿ ತೆರಿಗೆಯನ್ನು ಪಾವತಿಸಲಾಗುತ್ತದೆ.
7) ವರ್ಷಕ್ಕೆ ಕನಿಷ್ಟ 1500 ರೂ. ರಿಚಾರ್ಜ್ ಮಾಡದೇ ಇದ್ದಲ್ಲಿ ಅಥವಾ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಜಿಯೋ ಗ್ರಾಹಕರಿಂದ ಮೊಬೈಲ್ ಹಿಂಪಡೆಯುವ ಹಕ್ಕನ್ನು ಹೊಂದಿರುತ್ತದೆ. ಹೀಗಾಗಿ ಗ್ರಾಹಕರು ಆರಂಭಿಕ ರಿಟರ್ನ್ ಶುಲ್ಕವನ್ನು ಪಾವತಿಸಿದರೆ ಕಂಪೆನಿ ಭದ್ರತಾ ಠೇವಣಿಯನ್ನು ಹಿಂದಿರುಗಿಸುತ್ತದೆ.
8) ಗ್ರಾಹಕರು ತಮ್ಮ ಮೊಬೈಲ್‍ನ್ನು ಪಡೆದ 36 ತಿಂಗಳ ನಂತರ ಹಿಂದಿರುಗಿಸಿ ತಮ್ಮ ಭದ್ರತಾ ಠೇವಣಿಯನ್ನು ವಾಪಸ್ ಪಡೆಯಬಹುದು. 39 ತಿಂಗಳ ವರೆಗೂ ಈ ಸೇವೆ ಲಭ್ಯವಿರಲಿದೆ. ನಂತರ ಅವಧಿಯಲ್ಲಿ ಫೋನ್ ಹಿಂಪಡೆಯಲಾಗುವುದಿಲ್ಲ.
https://publictv.biskuht.com/9-ways-reliance-jio-has-changed-indias-telecom-landscape/