ಮುಂಬೈ: ಭಾರತದ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ನ ಟೆಲಿಕಾಂ (Reliance Industries Telecom) ಮತ್ತು ಡಿಜಿಟಲ್ ಸೇವೆಗಳ ಅಂಗವಾದ ಜಿಯೋ ಇನ್ಫೊಕಾಮ್ ಲಿಮಿಟೆಡ್ ಮೂರನೇ ತ್ರೈ ಮಾಸಿಕದ ಫಲಿತಾಂಶ ಶುಕ್ರವಾರ ಬಂದಿದೆ.
ಈ ಹಣಕಾಸು ಫಲಿತಾಂಶವು 2023ನೇ ಇಸವಿಯ ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳ ಅವಧಿಯದ್ದಾಗಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಿಯೋ ಇನ್ಫೋಕಾಮ್ ನಿವ್ವಳ ಲಾಭವು 12.3%ರಷ್ಟು ಏರಿಕೆಯಾಗಿ, 5,208 ಕೋಟಿ ರೂಪಾಯಿ ಆಗಿದೆ. ಜಿಯೋದ ಚಂದಾದಾರರ ಸಂಖ್ಯೆಯಲ್ಲಿ ಭಾರೀ ಏರಿಕೆ ಆಗಿರುವುದನ್ನು ನಿಚ್ಛಳವಾಗಿ ಗಮನಿಸಬಹುದಾಗಿದೆ.
Advertisement
Advertisement
ಕಾರ್ಯಾಚರಣೆ ಮೂಲಕವಾಗಿ ಬರುವಂಥ ಆದಾಯವು 10.3%ರಷ್ಟು ಹೆಚ್ಚಾಗಿ, 25,368 ಕೋಟಿ ರೂಪಾಯಿಗೆ ಮುಟ್ಟಿದೆ. ಅಂದ ಹಾಗೆ ಜಿಯೋಗೆ ಪ್ರಸಕ್ತ ತ್ರೈಮಾಸಿಕದಲ್ಲಿ 1.12 ಕೋಟಿ ಚಂದಾದಾರರು ಸೇರ್ಪಡೆ ಆಗಿದ್ದು, ಒಟ್ಟು ಬಳಕೆದಾರರ ಸಂಖ್ಯೆಯು 47.09 ಕೋಟಿಗೆ ತಲುಪಿದೆ. ಇದನ್ನೂ ಓದಿ: ನಮ್ಮೂರ ಹುಡುಗ ಲೋಕಸಭೆಗೆ ಸ್ಪರ್ಧಿಸಿ ಮತ್ತೆ ಸೋಲೋದು ಇಷ್ಟವಿಲ್ಲ: ಸುಧಾಕರ್‌ಗೆ ಪ್ರದೀಪ್ ಈಶ್ವರ್ ಟಾಂಗ್
Advertisement
ಜಿಯೋ ನೆಟ್ ವರ್ಕ್ ಡೇಟಾ ದಟ್ಟಣೆಯು ಡಿಸೆಂಬರ್ ತ್ರೈಮಾಸಿಕದಲ್ಲಿ 32%ರಷ್ಟು ಹೆಚ್ಚಾಗಿ, 38.1 ಎಕ್ಸಾಬೈಟ್ಸ್ ಆಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ತೈಲದಿಂದ ರಾಸಾಯನಿಕದ ತನಕ ವಿವಿಧ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದು, ಉಳಿದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಫಲಿತಾಂಶ ಘೋಷಣೆ ಆಗಬೇಕಾಗಿದೆ.