ಶಿವಮೊಗ್ಗ: ಮಾಜಿ ಸಚಿವ ಸುಧಾಕರ್ (K.Sudhakar) ಅವರು ವಿಧಾನಸಭೆಯಲ್ಲಿ ಸೋತಿದ್ದಾರೆ. ಸ್ವಲ್ಪದಿನ ವಿಶ್ರಾಂತಿ ಮಾಡಲಿ ಲೋಕಸಭೆಯಲ್ಲಿ ಸ್ಪರ್ಧಿಸಿ ಮತ್ತೆ ನಮ್ಮೂರು ಹುಡುಗ ಸೋಲೋದು ನನಗೆ ಇಷ್ಟವಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೇಳಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಮಾತನಾಡಿದ ಅವರು, ಲೋಕಸಭೆಗೆ ಸುಧಾಕರ್ ಅವರು ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ದೈವಬಲ ಹಾಗೂ ಜನಬಲ ನನ್ನ ಕಡೆ ಇದೆ. ಲೋಕಸಭೆಯಲ್ಲಿ ನಾವು ಹೆಚ್ಚು ಸ್ಥಾನ ಪಡೆಯುತ್ತೇವೆ. ಮುಂದಿನ ಚುನಾವಣೆಯಲ್ಲಿ ಸೋಲು ಅಥವಾ ಗೆಲುವು ಎಂದು ನಾನು ಕೆಲಸ ಮಾಡ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಕಸ ಹೊಡಿ ಎಂದರೆ ಕಸ ಹೊಡೆಯುತ್ತೇನೆ. ರಾಜೀನಾಮೆ ಕೊಡು ಎಂದರೂ ಕೊಡ್ತೇನೆ. ನಾನು ಯಾವುದೇ ನಿಗಮ ಮಂಡಳಿಯ ಆಕಾಂಕ್ಷಿಯಲ್ಲ. ಪಕ್ಷ ಲೋಕಸಭೆಗೆ ನಿಲ್ಲು ಎಂದರೆ ನಾಳೆಯೇ ನಿಲ್ಲುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲಾ ‘ದಿವ್ಯ ದರ್ಶನ’; ವಿಗ್ರಹದ ಫೋಟೋಗಳು ವೈರಲ್ – ಜೈ ಶ್ರೀರಾಮ್ ಘೋಷಣೆ
Advertisement
Advertisement
ಇನ್ನೂ ರಾಮ ಮಂದಿರ ವಿಷಯದಲ್ಲಿ ನಮಗೆ ಗೊಂದಲ ಇಲ್ಲ, ನಾವು ಹಿಂದೂಗಳೇ, ನಾವು ಶ್ರೀರಾಮನ ಆರಾಧಕರು. ನನ್ನ ಎದೆ ಸೀಳಿದರೆ ಶ್ರೀರಾಮ ಸಿದ್ದರಾಮ ಇಬ್ಬರೂ ಇದ್ದಾರೆ. ಬಿಜೆಪಿಯವರು ನಮ್ಮನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸುತ್ತಿದ್ದಾರೆ. ರಾಮ ಮಂದಿರ ಓಪನ್ ಮಾಡಿಸಿದ್ದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.22ರ ನಂತರ ರಾಮಂದಿರಕ್ಕೆ ಹೋಗುತ್ತೇವೆ ಎಂದಿದ್ದಾರೆ. ನಾವು ಹೋಗುತ್ತೇವೆ. ನಾವೂ ಶ್ರೀರಾಮನ ಆರಾಧಕರು, ನಮಗೂ ದೈವ ಭಕ್ತಿ ಇದೆ. ದೈವ ಭಕ್ತಿ ಇರೋದಕ್ಕೆ ನಾವು ಅಧಿಕಾರಕ್ಕೆ ಬಂದಿರೋದು ಎಂದಿದ್ದಾರೆ.
Advertisement
Advertisement
ಅನಂತ್ ಕುಮಾರ್ ಹೆಗಡೆಯವರ ಹೇಳಿಕೆ ವಿಚಾರವಾಗಿ, ಅವರು ಬಹಿರಂಗ ಚರ್ಚೆಗೆ ಬರಲಿ ಸಂಸ್ಕøತಿ ಬಗ್ಗೆ ಮಾತನಾಡೋಣ. ಅನಂತ್ ಕುಮಾರ್ ಹೆಗಡೆ ಹಾಗೂ ಪ್ರತಾಪ್ ಸಿಂಹ ಬಗ್ಗೆ ನಾನು ಗೌರವ ಕೊಟ್ಟು ಮಾತನಾಡ್ತಿದ್ದೇನೆ ಎಂದರೆ ನಮ್ಮ ಮನೆಯಲ್ಲಿ ನಮಗೆ ಸಂಸ್ಕೃತಿ ಕಲಿಸಿದ್ದಾರೆ ಎಂದರ್ಥ. ಯುವಕರು ರಾಜಕಾರಣಿಗಳ ಹಿಂದೆ ದಯವಿಟ್ಟು ಬರಬೇಡಿ. ನಿಮಗೆ ರಾಜಕಾರಣಿ ಇಷ್ಟವಿದ್ದರೆ ಚುನಾವಣೆ ಸಮಯದಲ್ಲಿ ವೋಟು ಹಾಕಿ. ಅದುಬಿಟ್ಟು ಕೋಮುಗಲಭೆಗೆ ಹೋಗಬೇಡಿ. ದಯವಿಟ್ಟು ನಿಮ್ಮ ಜೀವನ ಕಟ್ಟಿಕೊಂಡು ಸಂಪಾದನೆ ಮಾಡಿ ಎಂದು ಸಲಹೆ ನೀಡಿದ್ದಾರೆ.
ಇನ್ನೂ ಮಧು ಬಂಗಾರಪ್ಪ ಶಿಕ್ಷಣ ಸಚಿವರಾದ ಮೇಲೆ ಬಹಳ ಅಭಿವೃದ್ಧಿಯಾಗಿದೆ. ಫ್ರೀಡಂ ಪಾರ್ಕ್‍ಗೆ ಅಲ್ಲಮಪ್ರಭು ಹೆಸರನ್ನು ನಾಮಕರಣ ಮಾಡಿದ್ದಾರೆ. ಶಾಲೆಗಳಲ್ಲಿ 6601 ಕೊಠಡಿಗಳ ನಿರ್ಮಾಣಕ್ಕೆ ಹಣ ಕೊಟ್ಟಿದ್ದಾರೆ. ಸರ್ಕಾರಗಳು ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಸೈದ್ಧಾಂತಿಕವಾಗಿ ಖರ್ಗೆಯವರನ್ನು ಎದುರಿಸೋ ಶಕ್ತಿ ಇಲ್ಲದಿದ್ರೆ ಸೋಲನ್ನು ಒಪ್ಪಿಕೊಳ್ಳಿ- ಬಿಜೆಪಿಗೆ ರಮೇಶ್ ಬಾಬು ಸವಾಲು