ಮುಂಬೈ: ಪ್ರೈಂ ಸದಸ್ಯರಾಗಲು ಮಾರ್ಚ್ 31ರ ಒಳಗಡೆ ಸಬ್ ಸ್ಕ್ರೈಬ್ ಮಾಡಬೇಕೆಂದು ಜಿಯೋ ಹೇಳಿತ್ತು. ಆದರೆ ಈಗ ಬಂದಿರುವ ಹೊಸ ಸುದ್ದಿ ಪ್ರಕಾರ ಇನ್ನು ಒಂದು ತಿಂಗಳು ಈ ಡೆಡ್‍ಲೈನ್ ಅವಧಿ ವಿಸ್ತರಣೆಯಾಗುವ ಸಾಧ್ಯತೆಯಿದೆ.
ಹೌದು. ಜಿಯೋ ಕಂಪೆನಿಯ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಪ್ರೈಂ ಸದಸ್ಯರಾಗಲು ಇದ್ದ ಶೇ.50 ರಷ್ಟು ಗುರಿಯನ್ನು ಜಿಯೋ ಈಗಾಗಲೇ ತಲುಪಿದೆ. ಹೀಗಾಗಿ ಏಪ್ರಿಲ್ 30ರ ವರೆಗೆ ಈ ಡೆಡ್‍ಲೈನ್ ಅವಧಿ ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
Advertisement
ಡೆಡ್‍ಲೈನ್ ಅವಧಿ ವಿಸ್ತರಣೆ ಮಾಡಬೇಕೋ ಬೇಡವೋ ಎನ್ನುವುದನ್ನು ಜಿಯೋ ಇನ್ನೂ ನಿರ್ಧರಿಸಿಲ್ಲ. ಈ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
Advertisement
ಕಳೆದ ತಿಂಗಳು ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಿಯೋ 10 ಕೋಟಿ ಗ್ರಾಹಕರನ್ನು ತಲುಪಿದೆ. ಇನ್ನು ಮುಂದೆ ಉಚಿತ ಡೇಟಾ ಸೇವೆ ನೀಡಲು ಸಾಧ್ಯವಿಲ್ಲ. ಕಡಿಮೆ ಹಣದಲ್ಲಿ ಹೆಚ್ಚು ಡೇಟಾ ಪಡೆಯಬೇಕಾದರೆ ಗ್ರಾಹಕರು ಜಿಯೋ ಪ್ರೈಂ ಸದಸ್ಯರಾಗಬೇಕು. 99 ರೂ. ನೀಡಿ ಮಾರ್ಚ್ 31ರ ಒಳಗಡೆ ಪ್ರೈಂ ಸದಸ್ಯರಾದವರಿಗೆ ಕಡಿಮೆ ಬೆಲೆಯಲ್ಲಿ ಡೇಟಾ ನೀಡಲಾಗುವುದು ಎಂದು ತಿಳಿಸಿದ್ದರು.
Advertisement
ಇದನ್ನೂ ಓದಿ: ಗೂಗಲ್ ಜೊತೆಗೂಡಿ ಕಡಿಮೆ ಬೆಲೆಯಲ್ಲಿ ಜಿಯೋದಿಂದ ಆಂಡ್ರಾಯ್ಡ್ ಫೋನ್!
Advertisement
ಪ್ರೈಂ ಸದಸ್ಯರಾದವರು 28 ದಿನಗಳ ಕಾಲ 1 ಜಿಬಿ ಡೇಟಾ ಪಡೆಯಬೇಕಾದರೆ 303 ರೂ. ರಿಚಾರ್ಜ್ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಬೈ ಒನ್ ಗೆಟ್ ಒನ್ ಆಫರ್ ಬಿಡುಗಡೆ ಮಾಡಿದ್ದು, 303 ರೂ. ರಿಚಾರ್ಜ್ ಮಾಡಿದವರಿಗೆ 5 ಜಿಬಿ ಡೇಟಾ ಮತ್ತು 499 ರೂ. ಗಿಂದ ಹೆಚ್ಚಿನ ರಿಚಾರ್ಜ್ ಮಾಡಿದವರಿಗೆ 10 ಜಿಬಿ ಡೇಟಾವನ್ನು ಹೆಚ್ಚುವರಿಯಾಗಿ ನೀಡುವುದಾಗಿ ಜಿಯೋ ಪ್ರಕಟಿಸಿದೆ.
ಇದನ್ನೂ ಓದಿ: ಜಿಯೋ 4ಜಿ ಇಂಟರ್‍ನೆಟ್ ಅಪ್‍ಗ್ರೇಡ್ ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ
ಜಿಯೋ ಡೆಡ್‍ಲೈನ್ ವಿಸ್ತರಿಸುವುದು ಹೊಸದೆನಲ್ಲ. ಈ ಹಿಂದೆ ಡಿಸೆಂಬರ್ 31ರ ವರೆಗೆ ಉಚಿತ ಡೇಟಾ ನೀಡುವುದಾಗಿ ಹೇಳಿತ್ತು. ಇದಾದ ಬಳಿಕ ಮಾರ್ಚ್ 31ರವರೆಗೆ ಹ್ಯಾಪಿ ನ್ಯೂ ಇಯರ್ ಆಫರ್ ಪ್ರಕಟಿಸಿ 1 ಜಿಬಿ ಉಚಿತ ಡೇಟಾ ನೀಡುವುದಾಗಿ ಪ್ರಕಟಿಸಿತ್ತು. ಹೀಗಾಗಿ ಜಿಯೋ ಪ್ರೈಂ ಸಬ್‍ಸ್ಕ್ರಬ್ ಡೆಡ್‍ಲೈನ್ ಅವಧಿಯನ್ನು ಮಾರ್ಚ್ 31ರ ನಂತರವೂ ವಿಸ್ತರಿಸಬಹುದು ಎನ್ನುವ ಮಾತುಗಳು ಈಗ ಕೇಳಿ ಬರುತ್ತಿವೆ.
ಇದನ್ನೂ ಓದಿ: ಡೇಟಾ ಸ್ಪೀಡ್ ಟೆಸ್ಟ್ ವಾರ್: ಏರ್‍ಟೆಲ್ ವಿರುದ್ಧ ಜಿಯೋ ದೂರು, ದೂರು ನೀಡಿದ್ದು ಯಾಕೆ? ಇಲ್ಲಿದೆ ಪೂರ್ಣ ಮಾಹಿತಿ