ಮುಂಬೈ: ಈಗಾಗಲೇ ಕಡಿಮೆ ಬೆಲೆಗೆ ಫೋನ್, ಲ್ಯಾಪ್‌ಟಾಪ್ ಬಿಡುಗಡೆ ಮಾಡಿರುವ ರಿಲಯನ್ಸ್ ಜಿಯೋ (Reliance Jio) ಈಗ ಕ್ಲೌಡ್ ಲ್ಯಾಪ್‌ಟಾಪ್ (Cloud Laptop) ಬಿಡುಗಡೆ ಮಾಡಲು ಮುಂದಾಗಿದೆ.
ಈ ವರ್ಷದ ಜುಲೈನಲ್ಲಿ 16,499 ರೂ.ಗೆ ಬಜೆಟ್ ಬೆಲೆಯ ಲ್ಯಾಪ್‌ಟಾಪ್ ಬಿಡುಗಡೆ ಮಾಡಿರುವ ಜಿಯೋ ಈಗ 15,000 ರೂ. ಬೆಲೆಯಲ್ಲಿ ಕ್ಲೌಡ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.
Advertisement
ಕ್ಲೌಡ್ ಲ್ಯಾಪ್‌ಟಾಪ್ ತಯಾರಿ ಸಂಬಂಧ ಹಾರ್ಡ್‌ವೇರ್ ದಿಗ್ಗಜ ಕಂಪನಿಗಳಾದ ಹೆಚ್‌ಪಿ, ಏಸರ್, ಲೆನೊವೊ ಜೊತೆ ಮಾತುಕತೆ ನಡೆಸುತ್ತಿದೆ. ಇದನ್ನೂ ಓದಿ: ಉಪಗ್ರಹದಿಂದ ಇಂಟರ್‌ನೆಟ್ – ದೇಶದಲ್ಲೇ ಫಸ್ಟ್, ಜಿಯೋದಿಂದ ಬಂತು ಜಿಯೋಸ್ಪೇಸ್ ಫೈಬರ್
Advertisement
Advertisement
ಏನಿದು ಕ್ಲೌಡ್ ಲ್ಯಾಪ್‌ಟಾಪ್?
ಲ್ಯಾಪ್‌ಟಾಪ್‌ನ ಬೆಲೆ ಅದರ ಹಾರ್ಡ್‌ವೇರ್ ಭಾಗಗಳಾದ ಮೆಮೊರಿ, ಪ್ರೊಸೆಸಿಂಗ್ ಪವರ್, ಚಿಪ್‌ಸೆಟ್, ಬ್ಯಾಟರಿ ಇತ್ಯಾದಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಿನ ಸಾಮರ್ಥ್ಯದ ಹಾರ್ಡ್‌ವೇರ್ ಬೇಕಾದರೆ ಬೆಲೆ ಹೆಚ್ಚಾಗುತ್ತದೆ. ಜಿಯೋ ಈಗ ಇವುಗಳ ಅವಲಂಬನೆ ಕಡಿಮೆ ಮಾಡಲು ಲ್ಯಾಪ್‌ಟಾಪ್‌ನ ಸಂಪೂರ್ಣ ಪ್ರಕ್ರಿಯೆ ಕ್ಲೌಡ್‌ನಲ್ಲೇ ನಡೆಸಲು ಮುಂದಾಗಿದೆ.
Advertisement
ಕ್ಲೌಡ್-ಆಧಾರಿತ ಕಂಪ್ಯೂಟರ್ ಕೆಲಸ ಮಾಡಬೇಕಾದರೆ ಯಾವಾಗಲೂ ಲ್ಯಾಪ್‌ಟಾಪ್‌ಗೆ ಇಂಟರ್ನೆಟ್ ಸಂಪರ್ಕದ ಇರಲೇಬೇಕು. ಆಫ್‌ಲೈನ್‌ನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ.