ನವದೆಹಲಿ: ಕಾವೇರಿ (Cauvery) ನದಿ ನೀರು ಹಂಚಿಕೆ ಸಂಬಂಧ ಕಾವೇರಿ ನೀರು ನಿಯಂತ್ರಣ ಸಮಿತಿ ಸೋಮವಾರ ಸಭೆ ನಡೆಸಿದ್ದು, ನವೆಂಬರ್ 1 ರಿಂದ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ (Tamil Nadu) ನಿತ್ಯ 2,600 ಕ್ಯೂಸೆಕ್ ನೀರು ಹರಿಸಲು ಶಿಫಾರಸ್ಸು ಮಾಡಿದೆ.
ಸಮಿತಿಯ ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ತಮಿಳುನಾಡು ಪರ ಭಾಗಿಯಾದ ಅಧಿಕಾರಿಗಳು ಮುಂದಿನ 15 ದಿನಗಳವರೆಗೆ ಕರ್ನಾಟಕ (Karnataka) 13,000 ಕ್ಯೂಸೆಕ್ (16.90 ಟಿಎಂಸಿ) ನೀರು ತಮಿಳುನಾಡಿಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
Advertisement
Advertisement
ಕರ್ನಾಟಕದ ಪರವಾಗಿ ಭಾಗಿಯಾದ ಎಸಿಎಸ್ ರಾಕೇಶ್ ಸಿಂಗ್, ಮಳೆಯ ಕೊರತೆಯಿಂದಾಗಿ ಜಲಾಶಯಗಳಿಂದ ನೀರು ಹರಿಸಲು ಸಾಧ್ಯವಿಲ್ಲ. ಅನಿಯಂತ್ರಿತವಾಗಿ ಜಲಾನಯನದಿಂದ ಬರುವ ನೀರು ಮಾತ್ರ ಹರಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನಾರಾಯಣ ಮೂರ್ತಿ ವಾರಕ್ಕೆ 80 ರಿಂದ 90 ಗಂಟೆ ಕೆಲಸ ಮಾಡಿದ್ದಾರೆ : ಪತಿಯ ಸಲಹೆಗೆ ಸುಧಾ ಮೂರ್ತಿ ಸಮರ್ಥನೆ
Advertisement
ಎರಡು ರಾಜ್ಯಗಳ ಮನವಿ ಆಲಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕ ಜಲಮಾಪನ ಕೇಂದ್ರ ಬಿಳಿಗುಂಡ್ಲು ಬಳಿ 2,600 ಕ್ಯೂಸೆಕ್ ನೀರು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿತು. ನವೆಂಬರ್ 1 ರಿಂದ 15 ರವರೆಗೂ ನೀರು ಹರಿಸಲು ಶಿಫಾರಸ್ಸು ಮಾಡಿತು.
Advertisement
ಈ ಬಗ್ಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಮತ್ತು ಡಿಸಿಎಂ ಡಿಕೆ ಶಿವಕುಮಾರ್, ಕಾವೇರಿ ವಿಚಾರದಲ್ಲಿ ನಾವು ನೀರು ಬಿಡಲು ಸಾಧ್ಯವಿಲ್ಲ. ಕಾವೇರಿ ಒಳಹರಿವು ಸೊನ್ನೆ ಇದೆ. ಸದ್ಯಕ್ಕೆ ಕುಡಿಯೋ ನೀರಿನ ರಕ್ಷಣೆ ಮಾಡಬೇಕಿದೆ. 817 ಕ್ಯೂಸೆಕ್ ಕಬಿನಿಯಿಂದ ಕೆಆರ್‌ಎಸ್‌ಗೆ ನೈಸರ್ಗಿಕವಾಗಿ ಹೊರ ಬರುತ್ತಿದೆ. ಒಳಹರಿವು ಹೆಚ್ಚಲಿ ಎಂದು ದೇವರಿಗೆ ಮೊರೆ ಹೋಗೋಣ ಎಂದರು. ಇದನ್ನೂ ಓದಿ: ಪಾಕ್ ವಿರುದ್ಧ ಗೆದ್ದ ಅಫ್ಘಾನ್ ಕ್ರಿಕೆಟಿಗರಿಗೆ ಬಹುಮಾನ; ರತನ್ ಟಾಟಾ ಸ್ಪಷ್ಟನೆ ಏನು?
Web Stories