ಪತಿ ಆಸೆ ಈಡೇರಿಸಿದ ಮಡದಿ: ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್

Public TV
1 Min Read
ಸೈನಿಕ ಪತ್ನಿ rekgha

ನವದೆಹಲಿ: ಲ್ಯಾನ್ಸ್ ನಾಯಕ ಮತ್ತು ವೀರಚಕ್ರ ಪ್ರಶಸ್ತಿ ಪುರಸ್ಕೃತ ಶಾಹಿದ್ ದೀಪಕ್ ಸಿಂಗ್ ಅವರ ಪತ್ನಿ ರೇಖಾ ಸಿಂಗ್ ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ.

ರೇಖಾ ಸಿಂಗ್ ಬಿಹಾರ ರೆಜಿಮೆಂಟ್‍ನ 16ನೇ ಬೆಟಾಲಿಯನ್ ನಾಯಕ ಶಾಹಿದ್ ದೀಪಕ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಜೂನ್ 15, 2020 ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ವಿರುದ್ಧ ಹೋರಾಡುತ್ತಿದ್ದಾಗ ದೀಪಕ್ ಸಿಂಗ್ ಹುತಾತ್ಮರಾದರು. ದೀಪಕ್ ಸಿಂಗ್ ಅವರ ಧೈರ್ಯ ಮೆಚ್ಚಿದ ಸರ್ಕಾರ ಮರಣೋತ್ತರ ಪವಿತ್ರ ಪ್ರಶಸ್ತಿಯಾದ ‘ವೀರಚಕ್ರ’ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು. ಇದನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೀಡಿದರು. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

Lieutenant Rekha Singh Fulfils The Dream Of Her Husband Who Got Martyred In Galwan Valley. Salutes!

ದೀಪಕ್ ಸಿಂಗ್ ಅವರಿಗೆ ಯೋಧ ಪರಂಪರೆಯನ್ನು ಮುಂದುವರಿಯಬೇಕು ಎಂಬ ಕನಸಿತ್ತು. ಅದಕ್ಕೆ ಸಾಥ್ ಕೊಟ್ಟ ರೇಖಾ ಸಿಂಗ್ ಯೋಧೆಯಾಗಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದರು. ರೇಖಾ ಮತ್ತು ದೀಪಕ್ ವಿವಾಹವಾಗಿ ಕೇವಲ 15 ತಿಂಗಳುಗಳಾಗಿದ್ದವು.

ಈ ಕುರಿತು ಮಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸೇನೆಗೆ ಸೇರಬೇಕು ಎಂಬುದು ನನ್ನ ಪತಿಯ ಕನಸು ಮತ್ತು ನನಗೆ ಇದ್ದ ದೇಶಭಕ್ತಿಯ ಕಾರಣ ನಾನು ಶಿಕ್ಷಕ ವೃತ್ತಿಯನ್ನು ಬಿಟ್ಟು ಸೈನ್ಯದಲ್ಲಿ ಕೆಲಸ ಮಾಡಲು ಮನಸ್ಸು ಮಾಡಿದೆ. ಆದರೆ ನೋಯ್ಡಾಕ್ಕೆ ಹೋಗುವುದು ಮತ್ತು ಸೇನೆಗೆ ಸೇರಲು ಪ್ರವೇಶ ಪರೀಕ್ಷೆಗೆ ತರಬೇತಿ ಪಡೆಯುವುದು ಸುಲಭವಾಗಿರಲಿಲ್ಲ. ದೈಹಿಕ ತರಬೇತಿ ಪಡೆದರೂ ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗಲಿಲ್ಲ. ಆದರೆ ನಾನು ಧೈರ್ಯ ಕಳೆದುಕೊಳ್ಳದೆ ಸೇನೆಗೆ ಸೇರಲು ತಯಾರಿ ನಡೆಸುತ್ತಿದ್ದೆ ಎಂದು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.ಇದನ್ನೂ ಓದಿ:  ನಮ್ಮ ಮನೆ ಎಕ್ಸ್ ಪೋ 4ನೇ ಆವೃತ್ತಿಗೆ ಎರಡನೇ ದಿನವು ಭರ್ಜರಿ ರೆಸ್ಪಾನ್ಸ್

Galwan valley martyrs wife passes army test, to be trained as an officer

ಎರಡನೆ ಪ್ರಯತ್ನದಲ್ಲಿ ನನ್ನ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು, ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾಗಿದ್ದೇನೆ. ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಯ ತರಬೇತಿಯು ಮೇ 28 ರಿಂದ ಚೆನ್ನೈನಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *