ನವದೆಹಲಿ: ಚುನಾವಣಾ ನಿಗಾ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ್(ಎಡಿಆರ್) 2017-18ನೇ ಸಾಲಿನಲ್ಲಿ ಪ್ರಾದೇಶಿಕ ಪಕ್ಷಗಳು ಹೊಂದಿದ ಒಟ್ಟು ಆಸ್ತಿ ಕುರಿತ ವರದಿಯನ್ನು ಬಿಡುಗಡೆ ಮಾಡಿದ್ದು, ವರದಿ ಪ್ರಕಾರ ಒಂದೇ ವರ್ಷದಲ್ಲಿ ಜಾತ್ಯಾತೀತ ಜನತಾದಳ(ಜೆಡಿಎಸ್) ಪಕ್ಷದ ಆಸ್ತಿಯೂ ಶೇ.102.9ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.
ದೇಶ ಎಲ್ಲ ಪ್ರಾದೇಶಿಕ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯನ್ನು ಆಧಾರಿಸಿ ವರದಿ ತಯಾರಿಸಿದೆ. ಈ ವರದಿಯಲ್ಲಿ ಪ್ರಾದೇಶಿಕ ಪಕ್ಷಗಳು ಹೊಂದಿರುವ ಆಸ್ತಿ ಹಾಗೂ ಪ್ರಸಕ್ತ ಸಾಲಿನಲ್ಲಿ ಎಷ್ಟು ಬೆಳವಣಿಗೆಯಾಗಿದೆ ಎಂಬುದರ ಕುರಿತು ಉಲ್ಲೇಖಿಸಲಾಗಿದೆ.
Advertisement
2016-17ನೇ ಆರ್ಥಿಕ ವರ್ಷದಲ್ಲಿ 7.61 ಕೋಟಿ ರೂ. ಇದ್ದ ಜೆಡಿಎಸ್ ಆಸ್ತಿ 2017-18ನೇ ಸಾಲಿನಲ್ಲಿ 15.44 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. 2016-17 ರಲ್ಲಿ ಜೆಡಿಎಸ್ 7.004 ಕೋಟಿ ರೂ. ಸಾಲ ಹೊಂದಿದ್ದರೆ 2017-18ರಲ್ಲಿ 7.008 ಕೋಟಿ ರೂ. ಸಾಲ ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
Advertisement
Advertisement
ಜೆಡಿಎಸ್ ಹಾಗೂ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‍ಎಸ್) ಶೇ.100ಕ್ಕಿಂತಲೂ ಹೆಚ್ಚು ಆಸ್ತಿಯನ್ನು ವೃದ್ಧಿಸಿಕೊಂಡಿವೆ. ಆದರೆ ಶಿರೋಮಣಿ ಅಕಾಲಿ ದಳದ ಆದಾಯವು 2016-17 ಮತ್ತು 2017-18ರ ಆರ್ಥಿಕ ಸಾಲಿನಲ್ಲಿ ಕಾಯ್ದಿಟ್ಟ ನಿಧಿ ಶೇ.339.62ರಷ್ಟು ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.
Advertisement
ವರದಿ ಪ್ರಕಾರ ಪ್ರಾದೇಶಿಕ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷ ದೇಶದ ಅತ್ಯಂತ ಶ್ರೀಮಂತ ಪಕ್ಷವಾಗಿದ್ದು, ಇದರ 2016-17ನೇ ಸಾಲಿನಲ್ಲಿ ಕಾಯ್ದಿಟ್ಟ ನಿಧಿ 468.05 ಕೋಟಿ ರೂ. ಇದ್ದರೆ ಒಂದು ವರ್ಷದ ನಂತರ ಇದು 482.23 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಎಡಿಆರ್ ತನ್ನ ವರದಿಯಲ್ಲಿ ತಿಳಿಸಿದೆ.
ನಿತೀಶ್ ಕುಮಾರ್ ಅವರ ಜನತಾದಳ(ಸಂಯುಕ್ತ) ಪಕ್ಷದ ಆಸ್ತಿಯಲ್ಲಿ ಭಾರೀ ಏರಿಕೆ ಕಂಡಿದ್ದು, ಒಂದೇ ವರ್ಷದಲ್ಲಿ ಶೇ.298ರಷ್ಟು ಹೆಚ್ಚಳವಾಗಿದೆ. ಆದರೆ, ಆಸ್ತಿಯ ಮೌಲ್ಯದ ವಿಚಾರದಲ್ಲಿ ಅಖಿಲೇಶ್ ಯಾದವ್ ಅವರ ಪಕ್ಷವು ಅತ್ಯಂತ ಶ್ರೀಮಂತ ಪಕ್ಷವಾಗಿದೆ.
ಇತರ ಪಕ್ಷಗಳ ಆಸ್ತಿಯಲ್ಲಿ ತೀವ್ರ ಇಳಿಕೆಯಾಗಿದ್ದು, ಬಿಹಾರದ ಜನಶಕ್ತಿ ಪಕ್ಷ ಶೇ.34.8, ಜಾರ್ಖಂಡ್ ಮುಕ್ತಿ ಮೋರ್ಚಾ ಶೇ.15, ಹರಿಯಾಣದ ಇಂಡಿಯನ್ ನ್ಯಾಷನಲ್ ಲೋಕದಳ ಶೇ.5.9 ರಷ್ಟು ಕಡಿಮೆಯಾಗಿದೆ.
ಅದರಂತೆ ಪಕ್ಷಗಳ ಹೊಣೆಗಾರಿಕೆ(ಸಾಲ) ಸಹ ಹೆಚ್ಚಾಗಿದ್ದು, ತಮಿಳುನಾಡಿನ ಡಿಎಂಕೆ ಹೊಣೆಗಾರಿಕೆಯನ್ನು ಘೋಷಿಸಿದ್ದು, 2016-17ರಲ್ಲಿ ಹೊಂದಿತ್ತು. 2017-18ರಲ್ಲಿ 7.877 ಕೋಟಿ ರೂ. ಸಾಲ ಘೋಷಿಸಿದೆ. ತೆಲಗು ದೇಶಂ ಪಕ್ಷ ಅತಿ ಹೆಚ್ಚು ಸಾಲ ಹೊಂದಿದ್ದು, 22.56 ಕೋಟಿ ರೂ. ಸಾಲ ಹೊಂದಿದೆ.