Bengaluru CityCinemaKarnatakaLatestMain PostSandalwood

ಹುಟ್ಟುಹಬ್ಬಕ್ಕೆ ಪ್ರಜ್ವಲ್ ದೇವರಾಜ್ ಬ್ರೇಕ್: ಕಾರಣವೇನು ಗೊತ್ತಾ?

Advertisements

ಪ್ರಜ್ವಲ್ ದೇವರಾಜ್ ಅಭಿಮಾನಿಗಳಿಗೆ ಇದು ಕಹಿ ಸುದ್ದಿ. ಈ ವರ್ಷವೂ ಸ್ಯಾಂಡಲ್‌ವುಡ್ ನಟ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅಭಿಮಾನಿಯ ಮೇಲಿರುವ ಅಭಿಮಾನಕ್ಕೆ ಬರ್ತಡೇಗೆ ಪ್ರಜ್ವಲ್ ಬ್ರೇಕ್ ಹಾಕಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಟ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಕಳೆದ ವರ್ಷ ಕೋವಿಡ್ ಹಿನ್ನಲೆಯಿಂದ ಅಭಿಮಾನಿಗಳ ಜತೆ ಬರ್ತಡೇ ಆಚರಣೆ ಮಾಡಿರಲಿಲ್ಲ. ಈ ಬಾರಿಯೂ ಕೂಡ ಜುಲೈ 4ರಂದು ಆಚರಣೆ ಮಾಡಲಾಗುತ್ತಿಲ್ಲ. ಇದಕ್ಕೆ ಕಾರಣ ಅಭಿಮಾನಿ ಮೇಲಿರುವ ಅಭಿಮಾನ. ಇತ್ತೀಚೆಗಷ್ಟೇ ಪ್ರಜ್ವಲ್ ಅವರ ಅಪ್ಪಟ ಅಭಿಮಾನಿ ಸತೀಶ್ ಎಂಬುವವರು ನಿಧನರಾಗಿದ್ದು, ಈ ಹಿನ್ನಲೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ನಟ ತಿಳಿಸಿದ್ದಾರೆ. ಇದನ್ನೂ ಓದಿ:ಅನಾಥ ಮಹಿಳೆಗೆ ಮನೆ ಕಟ್ಟಿಸಿಕೊಟ್ಟ ಕಿಚ್ಚ ಸುದೀಪ್

ಈ ವರ್ಷವೂ ಕೂಡ ನಾನು ಬರ್ತಡೇ ಆಚರಿಸಿಕೊಳ್ಳುತ್ತಿಲ್ಲ. ಪ್ರತಿ ವರ್ಷ ನನ್ನ ದಿನವನ್ನು ಹಬ್ಬವಾಗಿ ಸಲೆಬ್ರೇಟ್ ಮಾಡುತ್ತಿದ್ದೀರಿ. ನನಗೆ ಸಾಕಷ್ಟು ಪ್ರೀತಿಯನ್ನ ಕೊಟ್ಟಿದ್ದೀರಿ. ಈಗ ನನ್ನ ಅಭಿಮಾನಿಗಳಿಗೂ ನಾನು ಪ್ರೀತಿಯನ್ನ ಕೊಡಬೇಕು. ಇತ್ತೀಚೆಗಷ್ಟೇ ನನ್ನ ಆಪ್ತ ನನ್ನ ಅಭಿಮಾನಿ ಸತೀಶ್ ಎಂಬುವವರು ನಿಧನರಾಗಿದ್ದಾರೆ. ಈ ನಿಮಿತ್ತ ಈ ವರ್ಷ ಹುಟ್ಟುಹಬ್ಬ ಬೇಡ ಎಂದು ವಿಡಿಯೋ ಮೂಲಕ ನಟ ಪ್ರಜ್ವಲ್ ಮನವಿ ಮಾಡಿದ್ದಾರೆ. ನಟನ ನಡೆಗೆ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

Live Tv

Leave a Reply

Your email address will not be published.

Back to top button