ಶಾಸಕಿ ನಯನಾ ಖಾಸಗಿ ಫೋಟೋಗಳ ವಿಚಾರ : ನಟ ಚೇತನ್ ಬೇಸರ

Public TV
1 Min Read
nayana motamma 4

ಚಿಕ್ಕಮಗಳೂರು ಮೀಸಲು ಕ್ಷೇತ್ರದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ (Nayana Motamma) ಅವರ ಖಾಸಗಿ ಫೋಟೋಗಳನ್ನು (Private Photo) ವಿರೋಧಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದರು. ಸ್ವತಃ ನಯನಾ ಅವರೇ ತಮ್ಮ ಎದುರಾಳಿಗಳಿಗೆ ತಿರುಗೇಟು ನೀಡುವ ಮೂಲಕ ಆ ಫೋಟೋಗಳನ್ನು ತಮ್ಮದೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಪ್ರತ್ಯುತ್ತರ ನೀಡಿದ್ದರು. ಈ ವಿಚಾರವಾಗಿ ನಟ ಚೇತನ್ ಅಹಿಂಸಾ (Chetan Ahimsa) ಪ್ರತಿಕ್ರಿಯಿಸಿದ್ದಾರೆ. ನಯನಾ ಬೆಂಬಲಕ್ಕೆ ಚೇತನ್ ನಿಂತಿದ್ದಾರೆ.

nayana motamma 3

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಚೇತನ್, ‘ಹೊಸದಾಗಿ ಚುನಾಯಿತ ಶಾಸಕಿ ನಯನಾ ಮೋಟಮ್ಮ ಅವರ ಖಾಸಗಿ ಚಿತ್ರಗಳನ್ನು ಪ್ರಕಟಿಸುವ ಮೂಲಕ ರಾಜಕೀಯ ಪ್ರತಿಸ್ಪರ್ಧಿಗಳು ಅವರ ಮರ್ಯಾದೆ ಹತ್ಯೆಗೆ ಯತ್ನಿಸಿದ್ದಾರೆ. ಭಾರತದಲ್ಲಿನ ಎಲ್ಲಾ ಮಹಿಳೆಯರು ವಿವಿಧ ಹಂತಗಳಲ್ಲಿ ಪುರುಷ ಪ್ರಧಾನ ವ್ಯವಸ್ಥೆಗೆ ಬಲಿಪಶುಗಳಾಗಿದ್ದಾರೆ/ ಬಲಿಪಶುಗಳಾಗುತ್ತಿದ್ದಾರೆ. ಅಧಿಕಾರದ ಉನ್ನತ ಸ್ಥಾನಗಳಿಗೆ ಏರುವ ಮಹಿಳೆಯರು ಅದನ್ನು ಸಾರ್ವಜನಿಕ ರೀತಿಯಲ್ಲಿ ಎದುರಿಸುತ್ತಾರೆ. ದೃಢವಾಗಿ ನಿಂತಿರುವ ಶಾಸಕರಿಗೆ ಅಭಿನಂದನೆಗಳು. ಪೊಲೀಸರು ತಪ್ಪು ಮಾಡಿದವರ ವಿರುದ್ಧ ಕ್ರಮ ತಗೆದುಕೊಳ್ಳಬೇಕು’ ಎಂದು ಬರೆದಿದ್ದಾರೆ. ಇದನ್ನೂ ಓದಿ:ನಂದಮೂರಿ ಬಾಲಯ್ಯ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋ ಶಿವಣ್ಣ

nayana motamma 2

ಸ್ವತಃ ನಯನಾ ಅವರ ತಮ್ಮ ಫೋಟೋಗಳನ್ನು ಹೊಂದಿರುವ ವಿಡಿಯೋ ಶೇರ್ ಮಾಡಿ, ‘ಸೋಲಿನ ಹತಾಶೆ ನಿಮ್ಮನ್ನು ಇನ್ನಷ್ಟು ಕಾಡದಿರಲಿ. ಹೌದು, ರಾಜಕೀಯವಾಗಿ ನಾನು, ನನ್ನತನ, ನನ್ನ ವೈಯಕ್ತಿಕ ಜೀವನ ಇವೆಲ್ಲದರ ವ್ಯತ್ಯಾಸ ತಿಳಿಯದ ಅವಿವೇಕಿಗಳಿಗೆ ಉತ್ತರವಿದು’ ಎಂದು ವಿಡಿಯೋ ಜೊತೆ ಶರಾ ಬರೆದಿದ್ದಾರೆ.

nayana motamma 1

ಮಾಜಿ ಮಂತ್ರಿ ಮೋಟಮ್ಮ ಅವರ ಪುತ್ರಿಯಾಗಿ ನಯನಾ, ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಮೀಸಲು ಕ್ಷೇತ್ರದಿಂದ ಗೆದ್ದಿದ್ದಾರೆ. ಅನೇಕರ ವಿರೋಧಗಳ ನಡುವೆಯೂ ನಯನಾ ಗೆಲುವಿನ ಪತಾಕೆ ಹಾರಿಸಿದ್ದಾರೆ. ಇದನ್ನು ಸಹಿಸದವರು ಅವರು ಖಾಸಗಿ ಫೋಟೋಗಳನ್ನು ಹರಿಬಿಟ್ಟು ಚರ್ಚೆಗೆ ಕಾರಣವಾಗಿದ್ದಾರೆ.

Share This Article