ಬೆಂಗಳೂರು: ಶಾಲಾ-ಕಾಲೇಜುಗಳಿಗೆ ಮೊಬೈಲ್ (Mobile) ಕೊಂಡೊಯ್ಯಬಾರದು ಅನ್ನೋದು ನಿಯಮ. ಮೊಬೈಲ್ ಕೊಂಡೊಯ್ದು ಸಿಕ್ಕಿಬಿದ್ರೆ ಮೊಬೈಲ್ ಕಥೆ ಅಷ್ಟೆ. ಫೈನ್ ಹಾಕೋದು, ಪೇರೆಂಟ್ಸ್ ಗೆ ಕಂಪ್ಲೆಂಟ್ ಮಾಡೋದು ಮಾಡಿ ವಿದ್ಯಾರ್ಥಿಗಳಲ್ಲಿ ಲೆಕ್ಚರರ್ಸ್ ಸದಾ ಭಯ ಇಟ್ಟಿರ್ತಾರೆ. ಇಷ್ಟಿದ್ದರು ಕೂಡ ಕಾಲೇಜು ವಿದ್ಯಾರ್ಥಿಗಳು ಕದ್ದು ಮುಚ್ಚಿ ಮೊಬೈಲ್ ಬಳಸ್ತಾರೆ. ವಿರಾಮದಲ್ಲೋ, ಲಂಚ್ ಬ್ರೇಕ್, ಕಾಲೇಜು ಸಮಯ ಮುಗಿದ ಬಳಿಕ ಮೊಬೈಲ್ ಬಳಸಿದ್ರೆ ಯಾರೂ ಕೇಳೊಕೆ ಬರೊಲ್ಲ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಪ್ರಿನ್ಸಿಪಾಲ್ (Principal) ಮೊಬೈಲ್ ಹೊಡೆದು ಹಾಕಿದ್ದಾರೆ ಅಂತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
Advertisement
ಹೊಸಕೋಟೆಯ (Hosakote) ಖಾಸಗಿ ಕಾಲೇಜಿನ ವಿದ್ಯಾರ್ಥಿ ಸೂರ್ಯ ಮೊಬೈಲ್ ತೆಗೆದುಕೊಂಡು ಹೋಗಿದ್ದ. ಈ ಹಿಂದೆಯೇ ಕ್ಲಾಸ್ ರೂಂಗೆ ಮೊಬೈಲ್ ತರದಂತೆ ವಿದ್ಯಾರ್ಥಿಗಳಿಗೆ ಪ್ರಿನ್ಸಿಪಾಲ್ ನಾಗರಾಜ್ ವಾರ್ನ್ ಮಾಡಿದ್ರಂತೆ. ಪ್ರಿನ್ಸಿಪಾಲ್ ಮಾತಿಗೆ ಕಿಮ್ಮತ್ತು ಕೊಡದ ವಿದ್ಯಾರ್ಥಿಗಳು, ಕಾಲೇಜಿಗೆ ಮೊಬೈಲ್ ಕೊಂಡೊಯ್ತಿದ್ರು. ಪಾಠದ ನಡುವೆಯೇ ಮೊಬೈಲ್‍ನಲ್ಲಿ ಆಟ ಕಾಮನ್ ಆಗೋಗಿತ್ತು. ವೆಲ್ಡಿಂಗ್ ಟ್ರೈನಿಂಗ್ ಕ್ಲಾಸ್ ನಡೆಯುತ್ತಿರೋ ವೇಳೆ ಸೂರ್ಯ ಹಾಗೂ ಆತನ ಸ್ನೇಹಿತರು ರೀಲ್ಸ್ ಮಾಡ್ತಿದ್ರಂತೆ. ಇದನ್ನು ಗಮನಿಸಿದ ಶಾಲಾ ಪ್ರಿನ್ಸಿಪಾಲ್, ಕೋಪದಲ್ಲಿ ಮೊಬೈಲ್ ತೆಗೆದು ನೆಲಕ್ಕೆ ಹೊಡೆದು ಪುಡಿ ಮಾಡಿದ್ದರು.
Advertisement
Advertisement
ಸೂರ್ಯ ಮನೆಯವರಿಂದ ಪ್ರಿನ್ಸಿಪಾಲ್ ವಿರುದ್ಧ ದೂರು ನೀಡಿದ್ದು, ಇಎಂಐ ಕಟ್ತಾ ಇದ್ದೀವಿ ಪ್ರಿನ್ಸಿಪಾಲ್ ಮೊಬೈಲ್ ಹಾಳು ಮಾಡಿದ್ದಾರೆ ಅಂತಾ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.