ನವದೆಹಲಿ: ಭಾರತದ ಬಜೆಟ್ ಸ್ಮಾರ್ಟ್ ಫೋನ್‍ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕ್ಸಿಯೋಮಿಯು ರೆಡ್‍ಮಿ ನೋಟ್ 6 ಪ್ರೋ ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ನೂತನ ರೆಡ್‍ಮಿ ನೋಟ್ 6 ಪ್ರೋ ಆವೃತ್ತಿಯಲ್ಲಿ ಸೆಲ್ಫಿಗಾಗಿ 20+2 ಎಂಪಿ ಹೆಚ್‍ಡಿಆರ್ ಸೂಪರ್ ಪಿಕ್ಸೆಲ್ ಕ್ಯಾಮೆರಾ, ಹಿಂದುಗಡೆ 12+5 ಎಂಪಿ ಹೆಚ್‍ಡಿಆರ್ ಜೊತೆಗೆ ಡ್ಯುಯಲ್ ಟೋನ್ ಫ್ಲಾಶ್ ಹೊಂದಿದೆ.
Advertisement
Advertisement
ಎಂಐ ಆನ್‍ಲೈನ್ ಹಾಗೂ ಆಫ್‍ಲೈನ್ ಮತ್ತು ಫ್ಲಿಪ್‍ಕಾರ್ಟ್, ಅಮೆಜಾನ್ ಜಾಲತಾಣಗಳಲ್ಲಿ ಶುಕ್ರವಾರ ಮಧ್ಯಾಹ್ನ 12 ರಿಂದಲೇ ಸಿಗಲಿವೆ. ಇದೇ ದಿನ ಕ್ಸಿಯೋಮಿ ವಿಶೇಷ ಆಫರ್ ನೀಡಿದ್ದು, ನೂತನ ಸ್ಮಾರ್ಟ್ ಫೋನ್ ಗಳ 4ಜಿಬಿ ಹಾಗೂ 6ಜಿಬಿ ರ‍್ಯಾಮ್ ಗಳ ಮೇಲೆ 1 ಸಾವಿರ ರೂಪಾಯಿಯನ್ನು ಸಹ ಕಡಿತಗೊಳಿಸಿದೆ. ಈ ಆಫರ್ ಶುಕ್ರವಾರ ಖರೀದಿಸುವ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ.
Advertisement
#RedmiNote6Pro comes in a host of colours. Which one are you going to get? pic.twitter.com/n1a8ghmhFf
— Redmi India (@RedmiIndia) November 22, 2018
Advertisement
ರೆಡ್‍ಮಿ ನೋಟ್ 6 ಪ್ರೋ ಗುಣವೈಶಿಷ್ಟ್ಯಗಳು:
ಬೆಲೆ ಎಷ್ಟು?
4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಗೆ 13,999 ರೂಪಾಯಿ ಹಾಗೂ 6 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಗೆ 15,999 ರೂಪಾಯಿ ಬೆಲೆಯನ್ನು ನಿಗಪಡಿಸಿದ್ದು, ಬ್ಲಾಕ್, ಬ್ಲ್ಯೂ, ರೋಸ್ ಗೋಲ್ಡ್ ಹಾಗೂ ರೆಡ್ ಬಣ್ಣಗಳಲ್ಲಿ ಲಭ್ಯವಿರಲಿದೆ.
ಬಾಡಿ ಮತ್ತು ಡಿಸ್ಪ್ಲೇ:
157.9 X 76.4 X 8.3 ಮಿ.ಮೀ., 182 ಗ್ರಾಂ ತೂಕ, ಹೈಬ್ರಿಡ್ ಡ್ಯುಯಲ್ ಸಿಮ್(ನ್ಯಾನೋ ಸಿಮ್ – ಡ್ಯುಯಲ್ ಸ್ಟ್ಯಾಂಡ್-ಬೈ), 6.26 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080 X 2280ಪಿಕ್ಸೆಲ್, 19:9 ಅನುಪಾತ 403ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನಾಪ್ ಡ್ರಾಗನ್ 636 ಅಕ್ಟಾ ಕೋರ್ ಪ್ರೊಸೆಸರ್, 1.8 ಗೀಗಾಹರ್ಟ್ಸ್ ಸ್ಪೀಡ್, ಅಡ್ರಿನೋ 508 ಗ್ರಾಫಿಕ್ ಪ್ರೋಸೆಸರ್, ಎಂಐ 9.0 ಆವೃತ್ತಿ ಅಪ್‍ಡೇಟೆಡ್, 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಹಾಗೂ 6 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದೆ. ಹೆಚ್ಚುವರಿ 256 ಜಿಬಿ ವರೆಗೆ ವಿಸ್ತರಿಸಬಹುದು.
At #Xiaomi, we have been continuously improving our low-light camera capabilities to provide the best possible results.
With the #RedmiNote6Pro, we’ve introduced a wider aperture. The large 1.4μm sensor allows 25% more light intake, resulting in clearer photos, even in low-light pic.twitter.com/Grq6p5qz3h
— Redmi India (@RedmiIndia) November 22, 2018
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 20+2 ಎಂಪಿ ಡ್ಯುಯಲ್ ಕ್ಯಾಮೆರಾ ಹೊಂದಿದ್ದು ಸಾಫ್ಟ್ ಟೋನ್ ಸೆಲ್ಫಿ ಕ್ಯಾಮೆರಾ, ಹಿಂದುಗಡೆ 12+5 ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಫಿಂಗರ್ ಪ್ರಿಂಟ್ ಸೆನ್ಸರ್, ಗೊರಿಲ್ಲಾ ಗ್ಲಾಸ್ ಪ್ರೋಟೆಕ್ಷನ್, ಜೊತೆಗೆ 4,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.
We delivered an all-around upgrade. RT if you agree! #RedmiNote6Pro pic.twitter.com/682XqNygMB
— Redmi India (@RedmiIndia) November 22, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv