– ಟನಲ್ ಯೋಜನೆ ವಿರೋಧಿಸಿ ಬಿಜೆಪಿ ಪ್ರೊಟೆಸ್ಟ್, ಸಹಿ ಸಂಗ್ರಹ
ಬೆಂಗಳೂರು: ನಗರ ಅಭಿವೃದ್ಧಿ ಸಚಿವರೂ ಆಗಿರೋ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಮಹತ್ವಾಕಾಂಕ್ಷಿ `ಸುರಂಗ ಮಾರ್ಗ’ಕ್ಕೆ ತೋಟಗಾರಿಕಾ ಇಲಾಖೆ ರೆಡ್ ಸಿಗ್ನಲ್ ಕೊಟ್ಟಿದೆ.
ಟನಲ್ ವಿವಾದ (Tunnel Road Project Cotroversy) ಬೆನ್ನಲ್ಲೇ ಲಾಲ್‌ಬಾಗ್ ನಿರ್ದೇಶಕರಾದ ಜಗದೀಶ್ ಅವರು ತೋಟಗಾರಿಕಾ ಇಲಾಖೆಯ ನಿರ್ದೇಶಕರಿಗೆ ಪ್ರಸ್ತಾವಿತ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಈ ವರದಿಯಲ್ಲಿ ಟನಲ್‌ಗೆ ಬೇಕಾಗಿರೋ 6 ಎಕರೆ ಜಾಗದಲ್ಲಿ ಐತಿಹಾಸಿಕ ಲಾಲ್‌ಬಾಗ್ ಬಂಡೆ, ಕೆಂಪೇಗೌಡ ಗೋಪುರ, ಮರಗಳಿಗೆ ಹಾನಿ ಆಗುತ್ತೆ ಅಂದಿದ್ದಾರೆ. ಇದನ್ನೂ ಓದಿ: ಇಸ್ರೋದ ಬಾಹುಬಲಿ ರಾಕೆಟ್ ಉಡಾವಣೆ ಯಶಸ್ವಿ – ನೌಕಾ ಪಡೆಗೆ ಶಕ್ತಿ ತುಂಬಲಿದೆ ಉಪಗ್ರಹ
ಟನಲ್ ನಿರ್ಮಾಣಕ್ಕೆ ಅನುಮತಿಯನ್ನ ಸರ್ಕಾರದ ಹಂತದಲ್ಲೇ ನಿರ್ಧಾರ ಕೈಗೊಳ್ಳಿ ಅಂತ ತೋಟಗಾರಿಕಾ ಇಲಾಖೆ (Horticulture Department) ಕಾರ್ಯದರ್ಶಿಗೆ ಪ್ರಸ್ತಾವಿತ ವರದಿ ನೀಡಿದ್ದಾರೆ. 1975ರ ಕಾಯಿದೆ ಅಧಿಸೂಚನೆ ಅನ್ವಯ ತೋಟಗಾರಿಕಾ ಸಂರಕ್ಷಣೆ, ನಿರ್ವಹಣೆ, ಉಪಯುಕ್ತತೆ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿದ್ದು ಅಂತ ನಿಯಮ ಇದೆ. ಇದರ ಜೊತೆಗೆ ತೋಟಗಾರಿಕಾ ಇಲಾಖೆ ಜಾಗ ಅಥವಾ ಉದ್ಯಾನವನ ಮಾರಾಟ, ಗುತ್ತಿಗೆ, ಅಡಮಾನ ಮತ್ತು ಲೆಸೆನ್ಸ್ ಕೊಡುವ ಆಗಿಲ್ಲ ಅಂತ ಕೂಡ ನಿಯಮ ಇದೆ.
ಈ ನಿಯಮ ಉಲ್ಲಂಘಿಸಿ ಮಾಡಿದ್ರೆ ಅದಕ್ಕೆ ಮಾನ್ಯತೆ ಕೂಡ ಇರೋದಿಲ್ಲ ಅಂತಾ ನಿಯಮ ಇದೆ ಅಂತ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೆ, ಬಿಜೆಪಿ ಪ್ರೊಟೆಸ್ಟ್ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಈ ವರದಿಯನ್ನ ಸಾರ್ವಜನಿಕವಾಗಿ ಓದಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರದಿಂದ ಪಾಕಿಸ್ತಾನ-ಕಾಂಗ್ರೆಸ್ ಎರಡೂ ಚೇತರಿಸಿಕೊಂಡಿಲ್ಲ: ಬಿಹಾರ ರ‍್ಯಾಲಿಯಲ್ಲಿ ಮೋದಿ ಅಬ್ಬರದ ಭಾಷಣ
ಸಹಿ ಸಂಗ್ರಹ ಅಭಿಯಾನ
ಬೆಂಗಳೂರಿನ ಲಾಲ್‌ಬಾಗ್ ಮೂಲಕ ಸುರಂಗ ರಸ್ತೆ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ನಟಿಯರಾದ ಸುಧಾ ಬೆಳವಾಡಿ ಮತ್ತು ಸಂಯುಕ್ತಾ ಸೇರಿದಂತೆ ಹಲವು ನಾಗರಿಕರು ಈ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಲಾಲ್‌ಬಾಗ್‌ನಲ್ಲಿ ಟನಲ್ ರೋಡ್ ಕಾಮಗಾರಿ ವಿರೋಧಿಸಿ ಲಾಲ್‌ಬಾಗ್ ಪ್ರದಕ್ಷಿಣೆ ಹಾಕಿದ ಪರಿಸರ ಹೋರಾಟಗಾರರು. ಕಪ್ಪು ಮತ್ತು ಹಸಿರು ಬಟ್ಟೆಯನ್ನ ಧರಿಸಿ ವಾಕಿಂಗ್ ಮಾಡಿದ್ರು. ಬೆಂಗಳೂರು ರಕ್ಷಿಸಿ-ಟನಲ್ ರೋಡ್ ನಿಲ್ಲಿಸಿ ಎಂದು ಬೃಹತ್ ಬೋರ್ಡ್ ಮೂಲಕ ಸಹಿ ಸಂಗ್ರಹ ಅಭಿಯಾನ ನಡೆಸಿದ್ರು. ಲಾಲ್ ಬಾಗ್ ಪಶ್ಚಿಮ ದ್ವಾರದಿಂದ ಆರ್.ವಿ ರೋಡ್, ಲಾಲ್‌ಬಾಗ್ ಮೆಟ್ರೋ ಸ್ಟೇಷನ್‌ವರೆಗೆ ನಡೆದು ಲಾಲ್‌ಬಾಗ್ ಉಳಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ರು.. ನೂರಾರು ಜನರು ಅಭಿಯಾನದಲ್ಲಿ ಭಾಗಿಯಾಗಿದ್ರು.

