ಸಿಯೋಲ್: 24 ವರ್ಷಗಳ ಬಳಿಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಉತ್ತರ ಕೊರಿಯಾಗೆ ಭೇಟಿ ನೀಡಿದ್ದಾರೆ. ರಾಜಧಾನಿ ಪ್ಯೊಂಗ್ಯಾಂಗ್ ಕಿಮ್ ಇಲ್ ಸುಂಗ್ ಸ್ಕ್ವೇರ್‌ನಲ್ಲಿ ಉತ್ತರ ಕೊರಿಯಾ (North Korea) ನಾಯಕ ಕಿಮ್ ಜಾಂಗ್ ಉನ್ (Kim Jong Un) ಬುಧವಾರ ಪುಟಿನ್‌ಗೆ ಭವ್ಯ ಸ್ವಾಗತ ಕೋರಲಾಯಿತು.
ಕಿಮ್ ಮತ್ತು ಪುಟಿನ್ ಕುಮ್ಸುಸನ್ ಅರಮನೆಯಲ್ಲಿ ಶೃಂಗಸಭೆಯ ಮಾತುಕತೆ ನಡೆಸಿದರು. ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಬಲಪಡಿಸುವ ಪ್ರತಿಜ್ಞೆ ಮಾಡಿದರು. ಇದನ್ನೂ ಓದಿ: ಮೆಕ್ಕಾದಲ್ಲಿ ಮಿತಿಮೀರಿದ ತಾಪಮಾನ – 550ಕ್ಕೂ ಹೆಚ್ಚು ಹಜ್ ಯಾತ್ರಿಕರ ಸಾವು!
Advertisement
Advertisement
ಉಕ್ರೇನ್ ಮೇಲಿನ ಯುದ್ಧದ ಸಂದರ್ಭದಲ್ಲಿ ರಷ್ಯಾದ ನಿಲುವಿಗೆ ಸ್ಥಿರ ಮತ್ತು ಅಚಲ ಬೆಂಬಲವನ್ನು ನಾವು ಹೆಚ್ಚು ಪ್ರಶಂಸಿಸುತ್ತೇವೆ ಎಂದು ಕಿಮ್ ಅವರಿಗೆ ಪುಟಿನ್ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಮಿತ್ರರಾಷ್ಟ್ರಗಳ ಪ್ರಾಬಲ್ಯದ, ಸಾಮ್ರಾಜ್ಯಶಾಹಿ ನೀತಿಯ ವಿರುದ್ಧ ಮಾಸ್ಕೋ ಹೋರಾಡುತ್ತಿದೆ ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಪುಟಿನ್ ಬುಧವಾರ ಮುಂಜಾನೆ ಪ್ಯೊಂಗ್ಯಾಂಗ್‌ನ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಕಿಮ್ ಅವರನ್ನು ಅಪ್ಪಿಕೊಂಡು ಸ್ವಾಗತಿಸಿದರು. ನಂತರ ಪ್ಯೊಂಗ್ಯಾಂಗ್‌ನಲ್ಲಿರುವ ರಾಜ್ಯ ಅತಿಥಿ ಗೃಹಕ್ಕೆ ಇಬ್ಬರೂ ನಾಯಕರು ತೆರಳಿದರು. ಪುಟಿನ್ ಈ ಭೇಟಿಯು ಉಭಯ ದೇಶಗಳ ದಶಕಗಳ ಸಂಬಂಧಗಳನ್ನು ಮರುರೂಪಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಇದು ನಿನ್ನ ಭಾರತವಲ್ಲ- ಅಭಿಮಾನಿ ಮೇಲೆ ಹಲ್ಲೆಗೆ ಮುಂದಾದ ಪಾಕ್ ವೇಗಿ