ತಿರುವನಂತಪುರಂ: ಭಾರತೀಯ ಹವಾಮಾನ ಇಲಾಖೆ (IMD) ಕೇರಳದ (Kerala) ಪತ್ತನಂತಿಟ್ಟ, ಇಡುಕ್ಕಿ, ಅಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಮೇ 20 ರವರೆಗೆ ರೆಡ್ ಅಲರ್ಟ್ (Red Alert) ಘೋಷಿಸಿದೆ.
ಭಾರೀ ಮಳೆಯ (Rain) ಹಿನ್ನೆಲೆ ತಿರುವನಂತಪುರಂ, ಕೊಲ್ಲಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಣ್ಣೂರು ಮತ್ತು ಕೋಝಿಕ್ಕೋಡ್ ಹೊರತುಪಡಿಸಿ ಕೇರಳದ ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಪತ್ನಿಯ ಗುಪ್ತಾಂಗದಲ್ಲಿ ರಂಧ್ರ ಮಾಡಿ ಬೀಗ ಜಡಿದು ವಿಕೃತಿ ಮೆರೆದ ಪತಿ!
Advertisement
Advertisement
ರೆಡ್ ಅಲರ್ಟ್ 24 ಗಂಟೆಗಳಲ್ಲಿ 20 ಸೆಂ.ಮೀಗಿಂತ ಹೆಚ್ಚು ಮಳೆಯನ್ನು ಸೂಚಿಸುತ್ತದೆ. ಆರೆಂಜ್ ಅಲರ್ಟ್ ಮಳೆ (6 ಸೆಂ.ಮೀ ನಿಂದ 20 ಸೆಂ.ಮೀ. ಹೆಚ್ಚು ಮಳೆ ಸೂಚಿಸಿದರೆ ಯೆಲ್ಲೋ ಅಲರ್ಟ್ 6- 11 ಸೆಂ.ಮೀ ಮಳೆಯನ್ನು ಸೂಚಿಸುತ್ತದೆ. ಬಲವಾದ ಗಾಳಿ ಮತ್ತು ಪ್ರಕ್ಷುಬ್ಧ ವಾತಾವರಣದ ಕಾರಣ ಮುಂದಿನ ಸೂಚನೆ ನೀಡುವವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಅಕ್ರಮ ಮರಳು ಅಡ್ಡಾದ ಮೇಲೆ ಅಧಿಕಾರಿಗಳ ದಾಳಿ – 1.58 ಕೋಟಿ ರೂ. ಮೌಲ್ಯದ ಮರಳು ಜಪ್ತಿ
Advertisement
ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (INCOIS) ಭಾನುವಾರ ಕೇರಳ ಮತ್ತು ದಕ್ಷಿಣ ತಮಿಳುನಾಡು ಕರಾವಳಿಯಲ್ಲಿ ಹೆಚ್ಚಿನ ಅಲೆಗಳ ಮುನ್ಸೂಚನೆ ನೀಡಿದೆ. ಕೇರಳ ಕರಾವಳಿಯಲ್ಲಿ 0.4 ಮೀಟರ್‌ನಿಂದ 1.2 ಮೀಟರ್‌ನಷ್ಟು ಅಲೆಗಳು ಏಳುವ ಸಾಧ್ಯತೆಯಿದೆ ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಅಪರಾಧಿ ಸ್ಥಾನದಲ್ಲಿರುವ ರಾಜ್ಯ ಸರ್ಕಾರವನ್ನು ಗಲ್ಲಿಗೇರಿಸಬೇಕು: ಆರ್.ಅಶೋಕ್
Advertisement
ಭಾನುವಾರದಿಂದ ಮೇ 22ರ ನಡುವೆ ರಾಜ್ಯದ ಕೆಲವು ಸ್ಥಳಗಳಲ್ಲಿ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಒಂದೇ ವಾರದಲ್ಲಿ 25,900 ಕೊರೊನಾ ಪ್ರಕರಣಗಳು ಪತ್ತೆ- ಸಿಂಗಾಪುರದಲ್ಲಿ ಮಾಸ್ಕ್ ಕಡ್ಡಾಯ
ರಾಜಧಾನಿ ತಿರುವನಂತಪುರಂನಲ್ಲಿ ಭಾನುವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶಗಳಲ್ಲಿನ ಹಲವಾರು ಮನೆಗಳು ನೀರಿನಿಂದ ಜಲಾವೃತವಾಗಿವೆ. ಇದನ್ನೂ ಓದಿ: ಪ್ಲೇ ಆಫ್‍ಗೆ RCB ಕ್ವಾಲಿಫೈ- ಘಾಟಿ ಸುಬ್ರಹ್ಮಣ್ಯದಲ್ಲಿ ಹರಕೆ ತೀರಿಸಿದ ಅಭಿಮಾನಿ