ಬೆಂಗಳೂರು: ರಾಜ್ಯದ ನಾಲ್ಕು ಜಿಲ್ಲೆಗೆ ರೆಡ್ ಅಲರ್ಟ್ (Red Alert) ಜಾರಿಯಾಗಿದ್ದರೆ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ (Orange Alert) ಜಾರಿಯಾಗಿದದೆ
ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗೆ ರೆಡ್ ಅಲರ್ಟ್ ಜಾರಿಯಾಗಿದ್ದು, ಭಾರೀ ಮಳೆ (Heavy Rain) ಬೀಳಲಿದೆ. ಉತ್ತರ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಿಗೆ ಹವಾಮಾನ ಇಲಾಖೆ (IMD) ಆರೆಂಜ್ ಅಲರ್ಟ್ ಜಾರಿ ಮಾಡಿದೆ. ಬೆಳಗಾವಿ, ಮೈಸೂರಿಗೆ ಯೆಲ್ಲೋ ಅಲರ್ಟ್ ಜಾರಿಯಾಗಿದೆ. ಇದನ್ನೂ ಓದಿ: Wayanad Landslide: ರಕ್ಷಣಾ ಕಾರ್ಯಾಚರಣೆ ಯಾಕೆ ಕಷ್ಟವಾಗುತ್ತಿದೆ?
ರೆಡ್ ಅಲರ್ಟ್ ಜಾರಿಯಾದ ಜಿಲ್ಲೆಗಳ ಪೈಕಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ. ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಇದನ್ನೂ ಓದಿ: Wayanad Landslide : ಅರ್ಧ ಸೆಕೆಂಡ್‌ನಲ್ಲಿ ನೂರು ಜನ ಸಮಾಧಿ!
ಉತ್ತರ ಕನ್ನಡ, ಬೆಳಗಾವಿ ಮತ್ತು ಮೈಸೂರು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗಬಹುದು ಎಂದು ಐಎಂಡಿ ತಿಳಿಸಿದೆ.