LatestLeading NewsMain PostNational

ಹನುಮಾನ್ ಚಾಲೀಸಾ ಪಠಿಸುವುದಿದ್ದರೆ ಮನೆಯಲ್ಲಿ ಪಠಿಸಿ, ದಾದಾಗಿರಿ ಮಾಡಬೇಡಿ: ಉದ್ಧವ್ ಠಾಕ್ರೆ

ಮುಂಬೈ: ನೀವು ಹನುಮಾನ್ ಚಾಲೀಸಾ ಪಠಿಸಲು ಬಯಸಿದರೆ ಮನೆಯಲ್ಲಿ ಪಠಿಸಿ. ಅದಕ್ಕೂ ಒಂದು ಮಾರ್ಗವಿದೆ. ಈ ರೀತಿ ದಾದಾಗಿರಿ ಮಾಡಬೇಡಿ ಎಂದು ಮಹಾರಾಷ್ಟç ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ಹನುಮಾನ್ ಚಾಲೀಸಾ ವಿಚಾರವಾಗಿ ಮಾತನಾಡಿದ ಅವರು, ಹನುಮಾನ್ ಚಾಲೀಸಾ ಪಠಿಸುವುದು ಸಮಸ್ಯೆಯಲ್ಲ. ಪಠಿಸಲು ಬಯಸಿದರೆ, ಮನೆಯಲ್ಲಿ ಪಠಿಸಿ. ಅದಕ್ಕೂ ಒಂದು ಮಾರ್ಗವಿದೆ. ಅದನ್ನು ಬಿಟ್ಟು ಈ ರೀತಿ ದಾದಾಗಿರಿ ಮಾಡಬೇಡಿ. ನೀವು ಹಾಗೆ ಮಾಡಿದರೆ ದಾದಾಗಿರಿಯನ್ನು ಹೇಗೆ ಎದುರಿಸಬೇಕೆಂದು ಬಾಳಾ ಸಾಹೇಬರು ನಮಗೆ ಕಲಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದ ಬಳಿಕ ಭಾರತದ ಜೊತೆ ವ್ಯಾಪಾರ, ತಂತ್ರಜ್ಞಾನ ಮಂಡಳಿ ಸ್ಥಾಪಿಸಿದ ಯುರೋಪ್ ಒಕ್ಕೂಟ

SHIVASENA PROTEST

ನಾವು ಗದಾ-ಧಾರಿ ಹಿಂದುತ್ವವನ್ನು ಅನುಸರಿಸುತ್ತೇವೆಯೇ ಹೊರತು ಘಂಟಾಧಾರಿ ಹಿಂದುತ್ವವಲ್ಲ. ನಾನು ಶೀಘ್ರದಲ್ಲೇ ರ‍್ಯಾಲಿ ನಡೆಸುತ್ತೇನೆ. ಎಲ್ಲರೊಂದಿಗೂ ವ್ಯವಹರಿಸುತ್ತೇನೆ. ಆದರೆ, ಇವರು ತಮ್ಮ ನಕಲಿ ನವ ಹಿಂದುತ್ವವನ್ನು ಹೊಂದಿರುವ ದುರ್ಬಲ ಹಿಂದುತ್ವವಾದಿಗಳು. ನನ್ನ ಅಂಗಿಗಿಂತ ಯಾರ ಅಂಗಿ ಕೇಸರಿ ಎಂದು ಸಾಬೀತುಪಡಿಸಲು ಅವರ ನಡುವೆಯೇ ಪೈಪೋಟಿ ನಡೆಯುತ್ತಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಭಾರತದ 10, ಪಾಕಿಸ್ತಾನದ 6 ಯೂಟ್ಯೂಬ್ ಚ್ಯಾನೆಲ್‌ಗಳು ಬ್ಯಾನ್

Uddhav Thackeray

ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಮಸೀದಿಗಳಲ್ಲಿ ಧ್ವನಿವರ್ಧಕಗಳ ಕುರಿತು ಮಹಾರಾಷ್ಟ್ರ ಸರ್ಕಾರಕ್ಕೆ ವರದಿ ನೀಡುವುದರೊಳಗೆ ವಿವಾದ ಭುಗಿಲೆದ್ದಿದೆ. ಮೇ 3ರ ಒಳಗೆ ಈ ಬೇಡಿಕೆಯನ್ನು ಈಡೇರಿಸದಿದ್ದರೆ, ಎಂಎನ್‌ಎಸ್ ಕಾರ್ಯಕರ್ತರು ಆಜಾನ್ ಮುಳುಗಿಸಲು ಮಸೀದಿಗಳ ಬಳಿ ಹನುಮಾನ್ ಚಾಲೀಸಾ ನುಡಿಸುತ್ತಾರೆ ಎಂದು ರಾಜ್‌ಠಾಕ್ರೆ ಹೇಳಿದ್ದಾರೆ. ಇದರ ಹಿಂದೆ ಬಿಜೆಪಿಯ ಬೆಂಬಲವೂ ಇದೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ಶೀಘ್ರದಲ್ಲೇ ರ‍್ಯಾಲಿ ನಡೆಸಿ, ಈ ಎಲ್ಲ ಸಮಸ್ಯೆಗಳಿಗೂ ಅಂತ್ಯವಾಡುತ್ತೇನೆ. ಕೆಲವರಿಗೆ ಹೊಟ್ಟೆಯಲ್ಲಿ ಅಸಿಡಿಟಿ ಇರುತ್ತದೆ. ಅವರಿಗೆ ಕೆಲಸವಿಲ್ಲ, ಡೋಲು ಬಾರಿಸುವುದೇ ಕೆಲಸವಾಗಿದೆ, ನಾನು ಅವರಿಗೆ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published.

Back to top button