ಕಳಲೆ ಪಲಾವ್ – ಸಕತ್‌ ರುಚಿ ಜೊತೆ ಆರೋಗ್ಯಕ್ಕೂ ಒಳ್ಳೇದು!

Public TV
1 Min Read
Kalale Pulav

ಕಳಲೆ ಮಳೆಗಾಲದ ಆರಂಭದಲ್ಲಿ ಮಾತ್ರ ಸಿಗುವಂತಹದ್ದು. ಇದನ್ನು ಬಳಸಿ ನಾನಾ ಖಾದ್ಯಗಳನ್ನು ಮಾಡಲಾಗುತ್ತೆ. ಇದರಿಂದ ಆರೋಗ್ಯಕ್ಕೆ ಸಹ ತಂಬಾ ಪ್ರಯೋಜನಗಳಿವೆ. ಹೃದಯದ ಆರೋಗ್ಯಕ್ಕೆ ಕಳಲೆ ಒಳ್ಳೆಯದು. ಅಲ್ಲದೇ ಮದುಮೇಹಿಗಳಿಗೆ ಸಹ ಔಷಧವಾಗಿ ಇದು ಕೆಲಸ ಮಾಡುತ್ತದೆ. ಇವತ್ತು ಕಳಲೆಯಲ್ಲಿ ಪಲಾವ್‌ ಮಾಡೋದು ಹೇಗೆ ಅಂತ ನೋಡೋಣ!

ಬೇಕಾಗುವ ಸಾಮಗ್ರಿ
ದೊಡ್ಡದಾಗಿ ಕತ್ತರಿಸಿದ ಕಳಲೆ (ಒಂದು ಬಟ್ಟಲು)
ಈರುಳ್ಳಿ, ಟೊಮಾಟೊ ತಲಾ ಒಂದು
ಶುಂಠಿ, ಬೆಳ್ಳುಳ್ಳಿ ಪೇಸ್ಟ್
ಕೊತ್ತಂಬರಿಸೊಪ್ಪು, ಕರಿಬೇವಿನ ಎಲೆ
ಒಗ್ಗರಣೆಗೆ- ಎಣ್ಣೆ, ಚಿಟಿಕೆ ಜೀರಿಗೆ, ಸಾಸಿವೆ, ಪಲಾವ್ ಎಲೆ ಒಂದು ಚಮಚ ಸೋಂಪಿನ ಕಾಳು. ಚಿಕ್ಕೆ, ಅರಿಶಿನ ಒಂದು ಚಮಚ, ಅಚ್ಚ ಖಾರದ ಪುಡಿ 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಹುಣಸೆ ರಸ ಎರಡು ಚಮಚ

ಮಾಡುವ ವಿಧಾನ
ಮೊದಲಿಗೆ ಕುಕ್ಕರ್ ಪಾತ್ರೆಗೆ ಎಣ್ಣೆ ಹಾಕಿ ಚಿಟಿಕೆ ಜೀರಿಗೆ, ಸಾಸಿವೆ. ಪಲಾವ್ ಎಲೆ, ಒಂದು ಚಮಚ ಸೋಂಪಿನ ಕಾಳು, ಅರಿಶಿನ, ಸಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮಾಟೊ, ಶುಂಠಿ, ಬೆಳ್ಳುಳ್ಳಿ ಪೇಸ್ಟ್,ಕರಿಬೇವಿನ ಎಲೆ, ಅಚ್ಚ ಖಾರದ ಪುಡಿ ಹಾಕಿ ಹುರಿದುಕೊಳ್ಳಬೇಕು. ನಂತರ ಅದಕ್ಕೆ ಕತ್ತರಿಸಿಟ್ಟುಕೊಂಡ ಕಳಲೆ ಹಾಕಿ ಉಪ್ಪು, ಹುಣಸೆ ರಸ, ತೊಳೆದಿಟ್ಟ ಅಕ್ಕಿಯನ್ನು ಸೇರಿಸಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕುಕ್ಕರ್ 2 ವಿಶಲ್ ಆದ ಮೇಲೆ ಗ್ಯಾಸ್ ಆಫ್ ಮಾಡಿ, ಆರಲು ಬಿಡಬೇಕು. ಈಗ ರುಚಿಯಾದ ಕಳಲೆ ಪಲಾವ್ ತಯಾರಾಗಿರುತ್ತದೆ!

Share This Article