ಮಕ್ಕಳು ಮನೆಯಲ್ಲಿರುವುದರಿಂದ ತಿನ್ನಲು ಏನಾದರೂ ಕೇಳುತ್ತಿರುತ್ತಾರೆ. ಮನೆಯಲ್ಲಿ ಆಲೂಗೆಡ್ಡೆ ಇದ್ದೆ ಇರುತ್ತದೆ. ಹೀಗಾಗಿ ರುಚಿಯಾದ ಆಲೂಗೆಡ್ಡೆ ಮತ್ತು ಗೋಧಿ ಹಿಟ್ಟಿನಿಂದ ಸ್ನ್ಯಾಕ್ಸ್ ಮಾಡಿ ಕೊಡಿ. ನಿಮಗಾಗಿ ಆಲೂಗೆಡ್ಡೆ, ಗೋಧಿ ಹಿಟ್ಟಿನಿಂದ ಮಾಡುವ ತಿಂಡಿಯ ವಿಧಾನ…
ಬೇಕಾಗುವ ಸಾಮಗ್ರಿಗಳು
1. ಆಲೂಗಡ್ಡೆ – 2
2. ಗೋಧಿ ಹಿಟ್ಟು – 1 ಕಪ್
3. ಜೀರಿಗೆ – 1 ಚಮಚ
4. ಹಸಿಮೆಣಸಿನಕಾಯಿ – 2
5. ಖಾರದ ಪುಡಿ – 1 ಟೀ ಸ್ಪೂನ್
6. ಕೋತ್ತಂಬರಿ ಸೊಪ್ಪು
7. ಎಣ್ಣೆ
8. ಅರಿಶಿಣ -ಚಿಟಿಕೆ
9. ಉಪ್ಪು – ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ
* ಆಲೂಗಡ್ಡೆಯ ಸಿಪ್ಪೆ ತೆಗೆದು ತೊಳೆದು ತುರಿದುಕೊಳ್ಳಿ. ತುರಿದುಕೊಂಡಿದ್ದ ಆಲೂಗಡ್ಡೆಯನ್ನು ಮತ್ತೊಮ್ಮೆ ತೊಳೆದು ಜರಡಿಯಲ್ಲಿ ಎತ್ತಿಟ್ಟುಕೊಳ್ಳಿ. ಆಲೂಗಡ್ಡೆಯ ನೀರಿನಂಶ ಕಡಿಮೆ ಆಗಬೇಕು.
* ಆಲೂಗಡ್ಡೆಯ ನೀರಿನಂಶ ಕಡಿಮೆಯಾದ ನಂತರ ಮಿಕ್ಸಿಂಗ್ ಬೌಲ್‍ಗೆ ಹಾಕಿಕೊಳ್ಳಿ. ಈಗ ಬೌಲ್‍ಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಕೋತ್ತಂಬರಿ ಸೊಪ್ಪು, ಜೀರಿಗೆ, ಅರಿಶಿಣ, ಉಪ್ಪು ಸೇರಿಸಿ ಎಲ್ಲವನ್ನು ಮಿಕ್ಸ್ ಮಾಡಿಕೊಳ್ಳಿ.
* ಈಗ ಮಿಶ್ರಣಕ್ಕೆ ಗೋಧಿ ಹಿಟ್ಟು ಹಾಕಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಸ್ಟೌವ್ ಮೇಲೆ ಪಡ್ಡು ಮಡೋ ಮಣೆಯನ್ನು ಇಟ್ಟುಕೊಂಡು ಎಲ್ಲ ಅಚ್ಚುಗಳಿಗೆ ಎಣ್ಣೆ ಹಾಕಿ.
* ಎಣ್ಣೆ ಬಿಸಿಯಾಗ್ತಿದ್ದಂತೆ ರೆಡಿಯಾದ ಮಿಶ್ರಣವನ್ನು ಎಲ್ಲ ಅಚ್ಚುಗಳಿಗೆ ಹಾಕಿ ಎರಡು ಕಡೆ ಬೇಯಿಸಿಕೊಂಡ್ರೆ ರುಚಿಕರವಾದ ಆಲೂಗೆಡ್ಡೆ ಸ್ನ್ಯಾಕ್ಸ್ ಸವಿಯಲು ಸಿದ್ಧ.