ಬೆಳಗ್ಗೆ ಅಥವಾ ಸಂಜೆ ಟೀ ಕುಡಿಯೋರಿಗೆ ಆ ಸಮಯದಲ್ಲಿ ಲೆಮನ್ ಬಟರ್ ಕುಕ್ಕೀಸ್ ಉತ್ತಮ ಜೊತೆಗಾರ! ನೀವು ಮನೆಯಲ್ಲೇ ಈ ಲಿಂಬೆಯ ಪರಿಮಳ ಹಾಗೂ ಬೆಣ್ಣೆಯಿಂದ ಕೂಡಿದ ರುಚಿಕರ ಲೆಮನ್ ಬಟರ್ ಕುಕ್ಕೀಸ್ ಮಾಡಬಹುದಾಗಿದೆ. ಹಾಗಾದ್ರೆ ಲೆಮನ್ ಬಟರ್ ಕುಕ್ಕೀಸ್ ಮಾಡೋದು ಹೇಗೆ ಅಂತ ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು:
* 4 ಚಮಚ ನಿಂಬೆ ರುಚಿ ಕಾರಕ
* 100 ಗ್ರಾಂ ಸಕ್ಕರೆ
* 1 ಚಿಟಿಕೆ ಉಪ್ಪು
* 1 ಚಮಚ ಬೇಕಿಂಗ್ ಪೌಡರ್
* 125 ಗ್ರಾಂ ಬೆಣ್ಣೆ
* 1 ಮೊಟ್ಟೆ
* ಹದಕ್ಕೆ ತಕ್ಕಷ್ಟು ಮೈದಾ ಹಿಟ್ಟು
ಮಾಡುವ ವಿಧಾನ:
ಒಂದು ಬಟ್ಟಲಿನಲ್ಲಿ, ಸಕ್ಕರೆ, ಉಪ್ಪು, ಬೆಣ್ಣೆ ಮತ್ತು ನಿಂಬೆ ರುಚಿಕಾರಕವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮೇಲೆ ಮಾಡಿಟ್ಟ ಮಿಶ್ರಣಕ್ಕೆ ಹಸಿ ಮೊಟ್ಟೆಯನ್ನು ಹೊಡೆದು ಹಾಕಿ. ಇವೆಲ್ಲವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಯಾವುದೇ ಗಂಟುಗಳಾಗದಂತೆ ಮಿಶ್ರಣ ಮಾಡಿ.
ನಂತರ ಈ ಮಿಶ್ರಣಕ್ಕೆ ಹಿಟ್ಟು ಮತ್ತು ಬೇಕಿಂಗ್ ಪೌಡರ್ ಸೇರಿಸಿ ಮತ್ತು ಚೆನ್ನಾಗಿ ಹಿಟ್ಟನ್ನು ತಯಾರಿಸಿ. ಈ ಹಿಟ್ಟನ್ನು ಉದ್ದವಾದ ಆಕಾರಕ್ಕೆ ಸುತ್ತಿಕೊಳ್ಳಿ ಹಾಗು ಅದನ್ನು ಬೇಕಿಂಗ್ ಪೇಪರ್ ಬಳಸಿ ಕನಿಷ್ಟ ಒಂದು ಗಂಟೆಗಳ ಕಾಲ ಫ್ರೀಜ್ ಮಾಡಿ. ನಂತರ ಫ್ರೀಜ್ ನಲ್ಲಿ ಉದ್ದವಾದ ಆಕಾರಕ್ಕೆ ಸುತ್ತಿಟ್ಟಿದ್ದ ಹಿಟ್ಟನ್ನು ಒಂದೇ ಆಕೃತಿಯಲ್ಲಿ ಕತ್ತರಿಸಿ. ನಂತರ ಬೇಕಿಂಗ್ ಟ್ರೇನಲ್ಲಿ ಇರಿಸಿ. ನಂತರ ಓವನ್ ನಲ್ಲಿ 180 ಡಿಗ್ರಿಯಲ್ಲಿ 8-10 ನಿಮಿಷಗಳ ಕಾಲ ಬೇಯಲು ಬಿಡಿ.
8-10 ನಿಮಿಷಗಳ ಕಾಲ ಬೇಯಿಸಿದ ನಂತರ ಲೆಮನ್ ಬಟರ್ ಕುಕ್ಕೀಸ್ ಸರ್ವ್ ಮಾಡಲು ಸಿದ್ಧವಾಗಿದೆ. ನಿಮಗೆ ಇನಷ್ಟು ರುಚಿಗಾಗಿ ಅಥವಾ ಅಲಂಕಾರಕ್ಕಾಗಿ ಅದರ ಮೇಲೆ ಸ್ವಲ್ಪ ಪುಡಿಮಾಡಿದ ಸಕ್ಕರೆಯನ್ನು ಬೆರೆಸಿ ಸೇವಿಸಿ.