ಬೆಂಗಳೂರು: ರೆಬೆಲ್ ಸ್ಟಾರ್, ಮಾಜಿ ಸಚಿವ ಅಂಬರೀಶ್ ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.
Advertisement
ಮಂಡ್ಯ ಬಸ್ ದುರಂತ ಘಟನೆಯ ಬಳಿಕ ಸುಸ್ತಾಗಿದ್ದ ಅಂಬರೀಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿದ್ದ ಅಂಬರೀಶ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
Advertisement
ಭಾನುವಾರ ಇಡೀ ದಿನ ಪಾರ್ಥೀವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಇರಿಸಲಾಗುತ್ತಿದೆ. ಅಂತಿಮ ದರ್ಶನಕ್ಕೆ ಆಗಮಿಸಲು ಮಂಡ್ಯ ಜಿಲ್ಲೆಯಿಂದ ವಿಶೇಷ ಸಾರಿಗೆ ಬಸ್ ವ್ಯವಸ್ಥೆಗೊಳಿಸಲಾಗಿದೆ.
Advertisement
ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
Advertisement
ಕನ್ನಡ ಚಿತ್ರರಂಗ ಕಂಡ ಮಹತ್ವದ ಕಲಾವಿದ ಹಾಗೂ ಅಪರೂಪದ ವ್ಯಕ್ತಿತ್ವದ ರಾಜಕಾರಣಿ ಇನ್ನಿಲ್ಲ ಎನ್ನುವುದು ಅಪಾರ ದುಃಖವನ್ನುಂಟುಮಾಡಿದೆ.
ನನ್ನ ಮತ್ತು ಅವರ ಸ್ನೇಹ ಅನುಗಾಲದ್ದು. ಚಿತ್ರರಂಗ ಹಾಗೂ ರಾಜಕಾರಣವನ್ನು ಮೀರಿದ ಸ್ನೇಹ ನಮ್ಮದಾಗಿತ್ತು. #Ambareesh
— CM of Karnataka (@CMofKarnataka) November 24, 2018
ಅಂಬರೀಷ್ ತಮ್ಮ ಒಳ್ಳೆಯತನದಿಂದ ಎಲ್ಲರ ಅಣ್ಣ , ಎಲ್ಲರ ಸ್ನೇಹಿತ,ತಮ್ಮ ಹುಸಿ ಕೋಪ ಮುನಿಸಿನಿಂದಲೇ ಲಕ್ಷಾಂತರ ಜನರ ಪ್ರೀತಿ ಸಂಪಾದಿಸಿದ್ದ ಅಣ್ಣ . ಚಿತ್ರನಟರಾಗಿ , ರಾಜಕಾರಣಿಯಾಗಿ , ಹಿರಿಯಣ್ಣರಾಗಿ ಬಾವುಕ ಪ್ರೀತಿ ತೋರಿಸಿದ್ದ ಸಹೃದಯಿ ಇನ್ನಿಲ್ಲವೆಂಬ ಮಾತು ಅತ್ಯಂತ ಕಠಿಣ . ಅವರ ಅಗಲಿಕೆಯ ದುಃಖವನ್ನು ಬರಿಸಿವ ಶಕ್ತಿ ಎಲ್ಲರಿಗೂ ಭಗವಂತ ನೀಡಲಿ pic.twitter.com/5pAmMPwjzh
— Sadananda Gowda (@DVSadanandGowda) November 24, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv